ಕಬಿನಿ ಜಲಾಶಯ ಕೆಳಭಾಗದ 50 ಎಕರೆ ಪ್ರದೇಶದಲ್ಲಿ ಉದ್ಯಾನವನ ಸಂದೇಶ್ ಪ್ರಸ್ತಾಪಕ್ಕೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸಹಮತ
ಮೈಸೂರು

ಕಬಿನಿ ಜಲಾಶಯ ಕೆಳಭಾಗದ 50 ಎಕರೆ ಪ್ರದೇಶದಲ್ಲಿ ಉದ್ಯಾನವನ ಸಂದೇಶ್ ಪ್ರಸ್ತಾಪಕ್ಕೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸಹಮತ

February 5, 2021

ಬೆಂಗಳೂರು, ಫೆ.4-ಕಬಿನಿ ಜಲಾಶಯದ ಕೆಳ ಭಾಗದಲ್ಲಿರುವ 50 ಎಕರೆ ಪ್ರದೇಶದಲ್ಲಿ ಉದ್ಯಾನವನವನ್ನು ನಿರ್ಮಿಸಲು ಉದ್ದೇ ಶಿಸಲಾಗಿದ್ದು, ವಿಸ್ತøತವಾದ ಸಮೀಕ್ಷೆ ನಡೆಸಿ, ವಿನ್ಯಾಸ ಹಾಗೂ ಯೋಜನೆಯನ್ನು ಸಿದ್ಧಪಡಿಸಲು ಕಾವೇರಿ ನೀರಾವರಿ ನಿಗ ಮದ ವತಿಯಿಂದ ಕ್ರಮ ಕೈಗೊಳ್ಳಲಾಗು ವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ವಿಧಾನಪರಿಷತ್ತಿಗೆ ತಿಳಿಸಿದರು.

ಕಬಿನಿ ಜಲಾಶಯದ ಮುಂದೆ ಸುಮಾರು 75 ಎಕರೆ ಜಾಗ ಹಾಳುಬಿದ್ದಿದ್ದು, ಇಲ್ಲಿ ಉದ್ಯಾನವನವನ್ನು ನಿರ್ಮಿಸಿ ಪ್ರವಾಸಿ ಆಕರ್ಷಣೆಯ ಸ್ಥಳವನ್ನಾಗಿ ಮಾಡುವಂತೆಯೂ, ಈ ಕಾಮಗಾರಿಗೆ ಮುಖ್ಯಮಂತ್ರಿಯವರು 100 ಕೋಟಿ ರೂ. ಒದಗಿಸುವ ಭರವಸೆ ನೀಡಿದ್ದು, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆಯೂ ಸಂದೇಶ್ ನಾಗರಾಜ್ ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು.

ಪ್ರಸಕ್ತ ಸಾಲಿನಲ್ಲಿ ಮೈಸೂರು-ಹೆಗ್ಗಡದೇವನ ಕೋಟೆ ರಾಜ್ಯ ಹೆದ್ದಾರಿ(33) ಅನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಇದೇ ವೇಳೆ ತಿಳಿಸಿದರು. ಮೈಸೂರು-ಹೆಗ್ಗಡದೇವನ ಕೋಟೆ ರಾಜ್ಯ ಹೆದ್ದಾರಿಯು ಕಿರಿದಾಗಿದ್ದು, ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದೆ. ತಿರುವು ಗಳಿಂದ ಕೂಡಿರುವ ಈ ರಸ್ತೆಯಲ್ಲಿ ಆಗಾಗ್ಗೆ ವಾಹನ ಅಪಘಾತಗಳು ಸಂಭವಿಸುತ್ತಿದ್ದು, ಸುಗಮ ಸಂಚಾರಕ್ಕೆ ಅನಾನು ಕೂಲವಾಗಿರುವುದರಿಂದ ಇದನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಬೇಕೆಂದು ಸಂದೇಶ್ ನಾಗರಾಜ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೋವಿಡ್ ಪರಿಸ್ಥಿತಿಯಿಂದ ಪ್ರಸಕ್ತ ವರ್ಷ ಆರ್ಥಿಕ ಸಂಪನ್ಮೂಲಗಳ ಕೊರತೆ ಉಂಟಾ ಗಿದ್ದು, ಇಲಾಖೆಗೆ ಹಂಚಿಕೆ ಮಾಡಿರುವ ಅನುದಾನವು ಪ್ರಗತಿಯಲ್ಲಿರುವ ಹಾಗೂ ಮುಂದುವರಿದ ಕಾಮಗಾರಿ ಗಳಿಗೆ ಕೊರತೆ ಬೀಳುವುದರಿಂದ ಈ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ವಿವರಿಸಿದರು.

Translate »