ಸಿಎಫ್‍ಟಿಆರ್‍ಐಗೆ ಛತ್ತೀಸ್‍ಗಢ ಕೈಗಾರಿಕಾ ಸಚಿವರ ಭೇಟಿ
ಮೈಸೂರು

ಸಿಎಫ್‍ಟಿಆರ್‍ಐಗೆ ಛತ್ತೀಸ್‍ಗಢ ಕೈಗಾರಿಕಾ ಸಚಿವರ ಭೇಟಿ

February 5, 2021

ಮೈಸೂರು, ಫೆ.4-(ಆರ್‍ಕೆ)-ಛತ್ತೀಸ್‍ಗಢ ರಾಜ್ಯದ ಕೈಗಾರಿಕಾ ಸಚಿವ ಕವಾಸಿ ಲಕ್ಷ್ಮ ಅವರು ಇಂದು ಮೈಸೂರಿನ ಸಿಎಫ್‍ಟಿಆರ್‍ಐಗೆ ಭೇಟಿ ನೀಡಿದ್ದರು.

ಸಂಸ್ಥೆಯ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್ ಹಾಗೂ ವಿಜ್ಞಾನಿ ಗಳೊಂದಿಗೆ ಪ್ರಯೋಗಾಲಯಗಳು, ಆಹಾರ ಸಂಶೋಧನೆ ಮತ್ತು ಸಂರ ಕ್ಷಣಾ ಘಟಕಗಳಿಗೆ ತೆರಳಿ, ಅಲ್ಲಿನ ಕಾರ್ಯವೈಖರಿ ವೀಕ್ಷಿಸಿದ ಸಚಿ ವರು, ಕೆಲ ಸಮಯ ಅಧಿಕಾರಿ ಗಳೊಂದಿಗೆ ಚರ್ಚಿಸಿ ಮಾಹಿತಿ ನೀಡಿದರು. ಆಹಾರ ತಂತ್ರಜ್ಞಾನ, ವಿವಿಧ ಆವಿಷ್ಕಾರಗಳ ಅಳವಡಿಕೆ, ಸಂಸ್ಥೆಯ ಕಾರ್ಯ ನಿರ್ವಹಣೆ ಕುರಿತಂತೆ ವಿಜ್ಞಾನಿಗಳು ಸಚಿವರಿಗೆ ಮಾಹಿತಿ ಒದಗಿಸಿದರು. ನಂತರ ಅವರು ಮೈಸೂರು ಅರಮನೆಗೆ ಭೇಟಿ ನೀಡಿ ಮಧ್ಯಾಹ್ನದ ನಂತರ ಹಿಂದಿರುಗಿದರು ಎಂದು ಸಿಎಫ್‍ಟಿಆರ್‍ಐ ಮೂಲಗಳು ತಿಳಿಸಿವೆ.

 

 

Translate »