ಸಕಾಲದಲ್ಲಿ ಚಿಕಿತ್ಸೆ ಪಡೆದರೆ ಕ್ಯಾನ್ಸರ್‍ನಿಂದ ಪಾರು
ಮೈಸೂರು

ಸಕಾಲದಲ್ಲಿ ಚಿಕಿತ್ಸೆ ಪಡೆದರೆ ಕ್ಯಾನ್ಸರ್‍ನಿಂದ ಪಾರು

February 5, 2021

ಮೈಸೂರು, ಫೆ.4(ಎಂಟಿವೈ)- `ಗುಣ ವಾಗದ ರೋಗ ಕ್ಯಾನ್ಸರ್’ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಸಕಾಲದಲ್ಲಿ ಚಿಕಿತ್ಸೆ ಪಡೆದು ಆರೋಗ್ಯದ ಕಡೆ ಹೆಚ್ಚು ಗಮನ ನೀಡಿದರೆ ಕ್ಯಾನ್ಸರ್‍ನಿಂದಲೂ ಪಾರಾಗ ಬಹುದು ಎಂದು ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ಉತ್ತೇ ಜನದ ಮಾತುಗಳನ್ನಾಡಿದರು.

ಮೈಸೂರಿನ ಮಹಾರಾಣಿ ಕಲಾ ಕಾಲೇ ಜಿನಲ್ಲಿ ಸುಯೋಗ್ ಆಸ್ಪತ್ರೆ, ಸಂಜೀವಿನಿ ಕ್ಯಾನ್ಸರ್ ಕೇರ್ ಟ್ರಸ್ಟ್, ರೆಡ್‍ಕ್ರಾಸ್ ಯುವ ಘಟಕ ಜಂಟಿಯಾಗಿ ಆಯೋಜಿಸಿದ್ದ `ವಿಶ್ವ ಕ್ಯಾನ್ಸರ್ ದಿನ’ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಈ ಹಿಂದೆ ಕ್ಯಾನ್ಸರ್ ಎಂದರೆ ಶ್ರೀಮಂತರ ರೋಗ ಎನ್ನು ತ್ತಿದ್ದರು. ಬಡ, ಮಧ್ಯಮ ವರ್ಗದವರಲ್ಲೂ ಕ್ಯಾನ್ಸರ್ ಕಂಡು ಬರುತ್ತಿದೆ. ಬದಲಾದ ಜೀವನ ಶೈಲಿ ಇದಕ್ಕೆ ಕಾರಣ. ಮದ್ಯಪಾನ, ಧೂಮ ಪಾನ ಚಟಗಳಿಂದಲೂ ಕ್ಯಾನ್ಸರ್ ಸರ್ವ ವ್ಯಾಪಿ. ಜನರಲ್ಲಿ ಅರಿವು ಮೂಡಿಸುವುದು, ಸಕಾಲಿಕ ಆರೋಗ್ಯ ಸೇವೆ ಒದಗಿಸುವುದು ಬಹಳ ಮುಖ್ಯ ಎಂದರು.

ತೀವ್ರ ಸ್ವರೂಪಿ: ಕ್ಯಾನ್ಸರ್ ಉಗ್ರಗಾಮಿ ಯಂತೆ ಕಾರಣವಿಲ್ಲದೇ ಕೊಲ್ಲುತ್ತದೆ. ಕ್ಯಾನ್ಸರ್ ಜೀವಕೋಶವಾಗಿ ಪರಿವರ್ತನೆಯಾಗಿ ಸಣ್ಣ ಜೀವಕೋಶಗಳನ್ನು ಕೊಂದು ಕೊನೆಗೆ ತಾನೂ ಸಾಯುತ್ತದೆ. ಕ್ಯಾನ್ಸರ್ ಬಂತೆಂದು ಯಾರೂ ಹೆದರಬಾರದು, ಕುಗ್ಗಬಾರದು. ಆತ್ಮಸ್ಥೈರ್ಯ ಬಹಳ ಮುಖ್ಯ. ಸದೃಢ ಮನೋಬಲದಿಂದ ಕ್ಯಾನ್ಸರ್ ಹೊಡೆ ದೋಡಿಸಬಹುದು ಎಂದು ಧೈರ್ಯ ತುಂಬುವ ಮಾತನಾಡಿದರು.

ಗಿಡಕ್ಕೆ ನೀರೆರೆದು ಕಾರ್ಯಕ್ರಮ ಉದ್ಘಾ ಟಿಸಿದ ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಬಸವೇಗೌಡ ಮಾತನಾಡಿ, ಕ್ಯಾನ್ಸರ್ ಬಂದರೆ ಕ್ಯಾನ್ಸಲ್ ಎಂಬ ಮಾತಿತ್ತು. ಈಗ ಆರೋಗ್ಯ ಕ್ಷೇತ್ರದಲ್ಲಿ ಭಾರೀ ಸುಧಾರಣೆ ಆಗಿರುವುದರಿಂದ ಎಲ್ಲಾ ಖಾಯಿಲೆಗಳಿಗೂ ಔಷಧಿ ಇದೆ. ಕ್ಯಾನ್ಸರ್ ಪೀಡಿತರು ಭಯ ಪಡಬೇಕಿಲ್ಲ. ಉತ್ತಮ ಆಹಾರ, ಶುದ್ಧ ಕುಡಿ ಯುವ ನೀರು ಆರೋಗ್ಯ ಕಾಪಾಡುತ್ತವೆ. ಯುವ ಸಮೂಹ ಬರೀ ಜಂಕ್‍ಫುಡ್ ಹಿಂದೆ ಹೋಗುತ್ತಿರುವುದೇ ಆರೋಗ್ಯ ಸಮಸ್ಯೆ ಹೆಚ್ಚಾಗಲು ಕಾರಣ ಎಂದು ವಿಷಾದಿಸಿದರು.

ಸಂಜೀವಿನಿ ಕೇರ್ ಟ್ರಸ್ಟ್ ಸಂಸ್ಥಾಪಕ ರಮೇಶ್ ಬಿಳಿಕೆರೆ, ರೆಡ್‍ಕ್ರಾಸ್ ಯುವ ಘಟಕ ಸಂಯೋಜಕರಾದ ಡಾ.ಟಿ.ಎಲ್. ಜಗದೀಶ್, ಡಾ.ಆರ್.ಡಿ.ಶ್ರೀನಿವಾಸ್, ಐಕ್ಯೂಎಸಿ ಸಂಯೋಜಕ ಡಾ.ಪಿ.ಎನ್. ಹೇಮಚಂದ್ರ, ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್, ಮಹಾರಾಣಿ ಮಹಿಳಾ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಶ್ರೀನಿ ವಾಸ್, ಉರಗ ತಜ್ಞ ಸ್ನೇಕ್ ಶ್ಯಾಂ ಮತ್ತಿ ತರರು ಕಾರ್ಯಕ್ರಮದಲ್ಲಿದ್ದರು.

ಕ್ಯಾನ್ಸರ್ ಜಾಗೃತಿ ಜಾಥಾ: ವಿಶ್ವ ಕ್ಯಾನ್ಸರ್ ದಿನದಂಗವಾಗಿ ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಾಲಯ ಮುಂಭಾಗದಿಂದ ಹೊರಟ ಕ್ಯಾನ್ಸರ್ ಜಾಗೃತಿ ಜಾಥಾ ದೊಡ್ಡ ಗಡಿಯಾರ, ಮಹಾತ್ಮ ಗಾಂಧಿ ವೃತ್ತ, ಚಿಕ್ಕ ಗಡಿಯಾರ ವೃತ್ತ, ಡಿ.ದೇವರಾಜ ಅರಸ್ ರಸ್ತೆ ಮೂಲಕ ಮಹಾರಾಣಿ ಮಹಿಳಾ ಕಲಾ ಕಾಲೇಜು ತಲುಪಿತು. ಜಾಥಾದಲ್ಲಿ ಸುಯೋಗ್ ಆಸ್ಪತ್ರೆ ಸಿಬ್ಬಂದಿ, ನರ್ಸಿಂಗ್ ವಿದ್ಯಾರ್ಥಿಗಳಿದ್ದರು. ಜಾಥಾಕ್ಕೆ ಚಾಲನೆ ನೀಡಿದ ಡಿಸಿಪಿ ಎ.ಎನ್.ಪ್ರಕಾಶ್‍ಗೌಡ, ಕ್ಯಾನ್ಸರ್ ಎಂದರೆ ಜನ ಭಯಬೀಳುತ್ತಾರೆ. ಕ್ಯಾನ್ಸರ್‍ಗೆ ತುತ್ತಾದರೆ ಗುಣವಾಗುವುದಿಲ್ಲ ಎಂಬ ತಪ್ಪು ಕಲ್ಪನೆಯಿದೆ. ಅದನ್ನು ತೊಡೆಯಲು ವಿವಿಧ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಪ್ರತಿ ವರ್ಷ ಫೆ.4ರಂದು `ವಿಶ್ವ ಕ್ಯಾನ್ಸರ್ ದಿನ’ ಆಚರಿಸಿ ಅರಿವು ಮೂಡಿಸಲಾಗುತ್ತಿದೆ. ಜಾಥಾ ಮೂಲಕ ಜನರಲ್ಲಿನ ಭಯ ಹೋಗ ಲಾಡಿಸಲಾಗುತ್ತಿದೆ. ಕ್ಯಾನ್ಸರ್ ಗೆದ್ದು ಸಾಮಾನ್ಯರಂತೆ ಜೀವನ ನಡೆಸುತ್ತಿರುವ ಹಲವರು ಸಮಾಜದಲ್ಲಿದ್ದಾರೆ. ಇಂಥವ ರನ್ನು ಕ್ಯಾನ್ಸರ್ ಪೀಡಿತರು ಸ್ಫೂರ್ತಿಯಾಗಿ ಸ್ವೀಕರಿಸಬೇಕು. ಆತ್ಮಸ್ಥೈರ್ಯ ಕಳೆದು ಕೊಳ್ಳಬಾರದು. ಸೂಕ್ತ ಚಿಕಿತ್ಸೆ ಪಡೆದು ವೈದ್ಯರ ಸಲಹೆ ಪಾಲಿಸಿದರೆ ಗುಣ ಕಾಣ ಬಹುದು ಎಂದರು.

Translate »