ಉದ್ಬೂರು ಗ್ರಾಪಂ ಅಧ್ಯಕ್ಷರಾಗಿ ಹೆಚ್.ಕೃಷ್ಣ, ಉಪಾಧ್ಯಕ್ಷರಾಗಿ ಕುಮಾರ್ ಆಯ್ಕೆ
ಮೈಸೂರು

ಉದ್ಬೂರು ಗ್ರಾಪಂ ಅಧ್ಯಕ್ಷರಾಗಿ ಹೆಚ್.ಕೃಷ್ಣ, ಉಪಾಧ್ಯಕ್ಷರಾಗಿ ಕುಮಾರ್ ಆಯ್ಕೆ

February 5, 2021

ಮೈಸೂರು,ಫೆ.4(ಎಂಟಿವೈ)- ತಾಲೂ ಕಿನ ಉದ್ಬೂರು ಗ್ರಾಪಂ ಅಧ್ಯಕ್ಷ, ಉಪಾ ಧ್ಯಕ್ಷ ಸ್ಥಾನಕ್ಕೆ ಗುರುವಾರ ಬೆಳಗ್ಗೆ ಚುನಾ ವಣೆ ನಡೆದಿದ್ದು, ಮಾಜಿ ಸಿಎಂ ಸಿದ್ದ ರಾಮಯ್ಯ ಅವರ ಬೆಂಬಲಿಗ, ಎಪಿಎಂಸಿ ಮಾಜಿ ಸದಸ್ಯ ಹೆಚ್.ಕೃಷ್ಣ ಅಧ್ಯಕ್ಷರಾಗಿ ಹಾಗೂ ಕುಮಾರ್ ಉಪಾಧ್ಯಕ್ಷರಾಗಿ ಆಯ್ಕೆ ಯಾದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹೆಚ್.ಕೃಷ್ಣ 15 ಮತ ಪಡೆದು ವಿಜೇತ ರಾದರೆ, ಪ್ರತಿಸ್ಪರ್ಧಿ ಎ.ಮೂರ್ತಿ 9 ಮತ ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕುಮಾರ್ 15 ಮತ ಪಡೆದು ಜಯಶಾಲಿಯಾದರೆ, ಪ್ರತಿಸ್ಪರ್ಧಿ ಎ.ನಂಜುಂಡ 9 ಮತ ಪಡೆದು ಪರಾಜಿತ ರಾದರು. ಒಟ್ಟು 24 ಸದಸ್ಯ ಬಲದ ಉದ್ಬೂರು ಗ್ರಾಪಂಗೆ ಸದಸ್ಯರಾಗಿ ಇತ್ತೀ ಚೆಗೆ ಆಯ್ಕೆಗೊಂಡ ಹೆಚ್.ಕೃಷ್ಣ, ಕುಮಾರ್, ಸೋಮಣ್ಣ, ಗೌರಮ್ಮ, ಚಿನ್ನಗೌರಮ್ಮ, ಎ.ಮೂರ್ತಿ, ದೇವಮ್ಮ, ಮಹಾದೇವಿ, ಎ.ನಂಜುಂಡ, ರುದ್ರ, ಕೆಂಪಮ್ಮ, ಪರಶಿವ ನಾಯಕ, ನಾರಾಯಣ, ಯೋಗೇಂದ್ರ, ಯೋಗಾವತಿ, ಶೋಭಾಶಂಕರ್, ಸಿದ್ದ ರಾಜು, ಮಣಿ, ರತ್ನಮ್ಮ, ಶೀಲಾಮಣಿ, ಕುಮಾರ, ಪುಟ್ಟಮ್ಮ, ಪಿತಾಂಬರ, ಲಕ್ಷ್ಮಮ್ಮ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಪಾಲ್ಗೊಂಡಿದ್ದರು. ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಕೆ.ಆರ್.ಮೋಹನ್ ಚುನಾವಣಾಧಿಕಾರಿಯಾಗಿದ್ದರು. ಪಿಡಿಒ ಆನಂದ್, ಕಾರ್ಯದರ್ಶಿ ಶಿಲ್ಪಶ್ರೀ ಹಾಜರಿ ದ್ದರು. ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಮುಖಂಡ ಮಹಾದೇವಸ್ವಾಮಿ ಮತ್ತಿ ತರರು ಅಭಿನಂದಿಸಿದರು. ಗ್ರಾಮಸ್ಥರು ಪಟಾಕಿ ಸಿಡಿಸಿ, ಸಂಭ್ರಮಿಸಿದರು.

Translate »