ಇಂಧನ ಬೆಲೆ ಸತತ ಏರಿಕೆ ಖಂಡಿಸಿ ತಳ್ಳುವ ಗಾಡಿಯಲ್ಲಿ ಬೈಕ್ ಪ್ರದರ್ಶನ
ಮೈಸೂರು

ಇಂಧನ ಬೆಲೆ ಸತತ ಏರಿಕೆ ಖಂಡಿಸಿ ತಳ್ಳುವ ಗಾಡಿಯಲ್ಲಿ ಬೈಕ್ ಪ್ರದರ್ಶನ

February 5, 2021

ಮೈಸೂರು, ಫೆ.4(ಎಂಟಿವೈ)- ಇಂಧನ ಬೆಲೆ ಏರಿಕೆ ಖಂಡಿಸಿ, ಕೇಂದ್ರ ಸರ್ಕಾರದ್ದು ಜನವಿರೋಧಿ ನೀತಿ ಎಂದು ಟೀಕಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಕಾರ್ಯಕರ್ತರು ಮೈಸೂರಿನ ಪುರಭವನದ ಮುಂಭಾಗ ಪ್ರತಿಭಟನೆ ನಡೆಸಿದರು.

ಡಾ.ಅಂಬೇಡ್ಕರ್ ಪ್ರತಿಮೆ ಮುಂದೆ ತಳ್ಳುವ ಗಾಡಿಯಲ್ಲಿ ಬೈಕ್ ಇರಿಸಿ ಅಣುಕು ಪ್ರದರ್ಶನ ಮಾಡಿದರು. ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‍ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್‍ಗೆ ಕೃಷಿ ಸೆಸ್ ವಿಧಿಸುವ ಮೂಲಕ ಜನಸಾಮಾನ್ಯರ ಬದುಕಿನ ಮೇಲೆ ಪ್ರಹಾರ ಮಾಡಿದೆ. ಕೊರೊನಾದಿಂದ ಜನರ ಆದಾಯ ಕುಸಿದಿದೆ. ದುಡಿಯಲು ಉದ್ಯೋಗವೂ ಇಲ್ಲ. ಕೂಲಿ ಕೆಲಸವೂ ಇಲ್ಲದೆ ಕಷ್ಟಕ್ಕೆ ಸಿಲುಕಿದ್ದಾರೆ. ಪೆಟ್ರೋಲ್ ಡೀಸೆಲ್, ಗ್ಯಾಸ್ ದರ ಏರಿಸಿ ಪ್ರಧಾನಿ ನರೇಂದ್ರ ಮೋದಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ತಗ್ಗಿಸಬೇಕು ಎಂದು ಒತ್ತಾಯಿಸಿದರು. ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು, ಮುಖಂಡರಾದ ಲೋಕೇಶ್ ಮಾದಾಪುರ, ರವಿ, ಎಂ.ಮಹೇಂದ್ರ ಕಾಗಿನೆಲೆ, ಹರೀಶ್, ದೀಪಕ್, ರೋಹಿತ್, ಸುನೀಲ್ ನಾರಾ ಯಣ್, ಮೂಗೂರು ನಂಜುಂಡಸ್ವಾಮಿ, ಎಂ.ಚಂದ್ರಶೇಖರ್, ಪವನ್, ಸಿದ್ದರಾಮು, ಮಂಜುನಾಥ್, ರವಿನಾಯಕ್, ಶಂಕರ್, ಶರತ್ ಇನ್ನಿತÀರರು ಪ್ರತಿಭಟನೆಯಲ್ಲಿದ್ದರು.

Translate »