ನೈರುತ್ಯ ರೈಲ್ವೆಯಿಂದ ‘ರಾಷ್ಟ್ರೀಯ ಇಂಧನ ಸಂರಕ್ಷಣಾ ಸಪ್ತಾಹ’ ಆಚರಣೆ
ಮೈಸೂರು

ನೈರುತ್ಯ ರೈಲ್ವೆಯಿಂದ ‘ರಾಷ್ಟ್ರೀಯ ಇಂಧನ ಸಂರಕ್ಷಣಾ ಸಪ್ತಾಹ’ ಆಚರಣೆ

December 23, 2020

ಮೈಸೂರು, ಡಿ.22(ಎಂಕೆ)- ನೈಋತ್ಯ ರೈಲ್ವೆ ಮೈಸೂರಿಂದ ಇಂಧನ ದಕ್ಷತೆ ಮತ್ತು ಸಂರಕ್ಷಣೆಯ ಮಹತ್ವ, ಜಾಗತಿಕ ತಾಪ ಮಾನ ಏರಿಕೆ ತಡೆಯುವ ರಾಷ್ಟ್ರದ ಪ್ರಯತ್ನಗಳ ಕುರಿತು ಮಾಹಿತಿ ನೀಡುವ ಸಲುವಾಗಿ ‘ರಾಷ್ಟ್ರೀಯ ಇಂಧನ ಸಂರಕ್ಷಣಾ ಸಪ್ತಾಹ’ ಆಚರಿಸಲಾಯಿತು.

ಡಿ.14-21ರವರೆಗೆ ನಡೆದ ಕಾರ್ಯ ಕ್ರಮದಲ್ಲಿ ಇಂಧನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬ್ಯಾನರ್ ಪ್ರದ ರ್ಶನ, ಕರಪತ್ರಗಳ ವಿತರಣೆ, ಸೆಮಿನಾರ್, ಬೈಸಿಕಲ್ ರ್ಯಾಲಿ ಮತ್ತು ಸಿಬ್ಬಂದಿಗೆ ಚಿತ್ರಕಲೆ ಸ್ಪರ್ಧೆ ನಡೆಸಲಾಯಿತು.

ಕಡೆದಿನವಾದ ಇಂದು ಇಂಧನ ಸಂರ ಕ್ಷಣೆ ಕುರಿತು ನಡೆದ ವೆಬಿನಾರ್ ಅನ್ನು ಮೈಸೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ಉದ್ಘಾಟಿಸಿದರು. ಬಳಿಕ ಮಾತನಾಡಿ, ರೈಲು ನಿಲ್ದಾಣದ ಖಾಲಿ ಜಾಗದಲ್ಲಿ 5 ಮೆಗಾವ್ಯಾಟ್ ಸೌರ ಶಕ್ತಿ ಫಲಕ ಸ್ಥಾಪಿಸುವ ಪ್ರಸ್ತಾವನೆ ಜೊತೆಗೆ, ರೈಲು ಗಾಡಿಗಳಲ್ಲಿನ ಫ್ಯಾನ್ ಬದಲಿಸು ವುದು, ನೀರು ವ್ಯರ್ಥವಾಗುವ ಪ್ರಮಾಣ ಅಂದಾಜಿಸಲು ವಾಟರ್ ಪಂಪ್ ಅಳವ ಡಿಸಲು ಯೋಜಿಸಲಾಗುತ್ತಿದೆ ಎಂದರು.

ರೈಲು ಇಂಜಿನ್‍ಗಳನ್ನು ಅವಶ್ಯಕತೆ ತಕ್ಕಂತೆ ಬಳಿಸುವುದರಿಂದ ಪ್ರತಿ ತಿಂಗಳು ಸರಾ ಸರಿ 1,87,000 ಲೀ. ಡೀಸೆಲ್ ಉಳಿತಾಯ ವಾಗುತ್ತಿದೆ. ವಿಭಾಗದ ವ್ಯಾಪ್ತಿಯ 272 ಲೆವೆಲ್ ಕ್ರಾಸಿಂಗ್‍ಗಳಲ್ಲಿ ಮತ್ತು 190 ಗೇಟ್‍ಗಳಲ್ಲಿ ಸೌರ ವಿದ್ಯುತ್ ದೀಪ ಒದಗಿ ಸಲಾಗಿದೆ. ಇದೇ ವರ್ಷ 4 ರೈಲು ನಿಲ್ದಾಣಗಳಿಗೆ ಸೋಲಾರ್ ಪಂಪ್ ಅಳ ವಡಿಸಲಾಗಿದೆ ಎಂದರು.

ಕಚೇರಿ ಖಾಲಿ ಇದ್ದಾಗಲೆಲ್ಲಾ ವಿದ್ಯುತ್ ಬಳಕೆ ನಿಯಂತ್ರಿಸಲು ಮೈಸೂರು ವಿಭಾಗ ವ್ಯಾಪ್ತಿಯ 30 ರೈಲು ನಿಲ್ದಾಣಗಳ ಕಚೇರಿ ಗಳಲ್ಲಿ ಆಟೋಮ್ಯಾಟಿಕ್ ಸೆನ್ಸರ್ ಒದಗಿಸ ಲಾಗಿದೆ. 2018 ಮೇ ತಿಂಗಳಿನಲ್ಲಿ ಆರ್‍ಇ ಎಸ್‍ಸಿಒ ಮಾದರಿಯಲ್ಲಿ 210 ಕೆ.ಡಬ್ಲ್ಯೂ.ಪಿ ಸಾಮರ್ಥ್ಯದ ಸೌರವಿದ್ಯುತ್ ಸ್ಥಾವರ ಸ್ಥಾಪಿ ಸಿದ್ದು, ಈವರೆಗೆ 6,73,569 ಯುನಿಟ್ ವಿದ್ಯುತ್ ಉತ್ಪಾದಿಸಿ 27,02,360 ರೂ. ಉಳಿಸಿದೆ ಎಂದರು. ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎ.ದೇವಸಹಾಯಂ, ಹಿರಿಯ ವಿಭಾಗೀಯ ವಿದ್ಯುತ್ ಎಂಜಿನಿ ಯರ್ ಸೌಂದರ ರಾಜನ್ ಉಪಸ್ಥಿತರಿದ್ದರು.

Translate »