ಇಂದು ಕೇಂದ್ರ ಬಜೆಟ್
ಮೈಸೂರು

ಇಂದು ಕೇಂದ್ರ ಬಜೆಟ್

February 1, 2019

ನವದೆಹಲಿ: ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಶುಕ್ರವಾರ ಮಧ್ಯಂತರ ಬಜೆಟ್ ಮಂಡಿಸುತ್ತಿದ್ದು, ಎಲ್ಲರ ಗಮನವೂ ಅತ್ತಲೇ ನೆಟ್ಟಿದೆ. ಬಿಪಿಎಲ್ ಕಾರ್ಡು ದಾರರಿಗೆ ಎರಡೂವರೆಯಿಂದ ಮೂರು ಸಾವಿರ ರೂ. ಕನಿಷ್ಟ ವರಮಾನ ತಲು ಪಿಸುವ ಸಾಧ್ಯತೆಗಳಿವೆ. ಲೋಕಸಭೆ ಚುನಾವಣೆ ಮುಂದಿರುವಾಗ ಮಂಡನೆ ಯಾಗುತ್ತಿರುವ ಕೇಂದ್ರ ಬಜೆಟ್ ಮೇಲೆ ಕೃಷಿ, ಉದ್ಯಮ, ವಾಣಿಜ್ಯ ವಲಯ ಸೇರಿದಂತೆ ಜನಸಾಮಾನ್ಯರ ನಿರೀಕ್ಷೆ ಗಳೂ ಹೆಚ್ಚಿನದಾಗಿಯೆ ಇವೆ.

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಅನುಪಸ್ಥಿತಿಯಲ್ಲಿ ಮಧ್ಯಂತರ ವಿತ್ತ ಸಚಿವ ಪಿಯೂಷ್ ಗೋಯಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ 6ನೇ ಬಜೆಟ್ ಮಂಡಿಸಲಿದ್ದಾರೆ. ಪ್ರಸಕ್ತ ವರ್ಷಕ್ಕಷ್ಟೇ ಅಲ್ಲದೆ, ಮುಂಬರುವ ಯೋಜನೆಗಳನ್ನು ಕೂಡ ಬಜೆಟ್‍ನಲ್ಲಿ ಘೋಷಿಸುವ ಸಾಧ್ಯತೆಯಿದೆ.

ಭಾರೀ ನಿರೀಕ್ಷೆ: ರೈತರ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಕಂಡುಕೊಡ ಬೇಕಿರುವ ಜವಾಬ್ದಾರಿ ಇದೆ. ತೆರಿಗೆ ದರ ಇನ್ನಷ್ಟು ಇಳಿಕೆಯಾಗಲೆಂಬ ನಿರೀಕ್ಷೆ ವಾಣಿಜ್ಯ-ಉದ್ಯಮ ವಲಯ ದಲ್ಲಿದೆ. ಇತರ ತೆರಿಗೆ ರಿಯಾಯ್ತಿ ಪ್ರಯೋಜನಗಳ ಬಗೆಗೂ ಈ ಬಜೆಟ್ ನಿರೀಕ್ಷೆ ಹುಟ್ಟುಹಾಕಿದೆ.

Translate »