ಕೇಂದ್ರ ತನಿಖಾ ತಂಡದಿಂದ ತನಿಖೆ
News

ಕೇಂದ್ರ ತನಿಖಾ ತಂಡದಿಂದ ತನಿಖೆ

July 24, 2022

ಬೆಂಗಳೂರು, ಜು.23 (ಕೆಎಂಶಿ)- ಪಿಎಸ್‍ಐ ನೇಮಕಾತಿ ಸೇರಿದಂತೆ ಇತ್ತೀ ಚಿನ ವರ್ಷಗಳಲ್ಲಿ ನಡೆದಿ ರುವ ಸರ್ಕಾರಿ ನೇಮಕಾತಿ ಗಳಲ್ಲಿ ನಡೆದಿರುವ ಭ್ರಷ್ಟಾ ಚಾರದ ಬಗ್ಗೆ ಕೇಂದ್ರ ತನಿಖಾ ತಂಡಗಳಿಂದ ತನಿಖೆ ನಡೆ ಸಲು ರಾಜ್ಯ ಸರ್ಕಾರ ಮುಂದಾಗಿದೆ.

ಬಿಜೆಪಿ ವರಿಷ್ಠರ ಸೂಚನೆ ಮೇರೆಗೆ ಈ ಅಕ್ರಮ ಗಳ ಬಗ್ಗೆ ತನಿಖೆ ನಡೆಸಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಅಲ್ಲದೆ ಕೇಂದ್ರ ಗೃಹ ಇಲಾಖೆಗೆ ಈ ಸಂಬಂಧ ಪತ್ರ ಬರೆಯಲು ತೀರ್ಮಾನಿಸಿದೆ. ನೇಮಕಾತಿ ಹಗರಣದಲ್ಲಿ ಕೋಟ್ಯಾಂತರ ರೂ. ಅವ್ಯವಹಾರ ಮತ್ತು ವಹಿವಾಟು ನಡೆದಿರುವು ದರಿಂದ ಈ ಬಗ್ಗೆ ಇಡಿ ಮತ್ತು ಸಿಬಿಐನಿಂದ ತನಿಖೆ ನಡೆಸಲು ಸಿದ್ಧತೆ ನಡೆದಿದೆ. ಅಕ್ರಮ ನೇಮಕಾತಿ ಯಲ್ಲಿ ನಡೆದಿರುವ ಅವ್ಯವಹಾರದಲ್ಲಿ ಕೆಲವು ರಾಜಕೀಯ ಪಕ್ಷದ ಮುಖಂಡರು ಶಾಮೀಲಾ ಗಿದ್ದಾರೆ. ಅವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವುದೇ ಈ ತನಿಖೆಯ ಉದ್ದೇಶ ಎನ್ನಲಾಗಿದೆ. ರಾಜ್ಯ ವಿಧಾನಸಭಾ ಚುನಾವಣಾ ಸಮೀಪದಲ್ಲಿ ಕೆಲವು ಕಠಿಣ ತೀರ್ಮಾನಗಳನ್ನು ಕೈಗೊಳ್ಳುತ್ತಿರುವ ಬಿಜೆಪಿ ವರಿಷ್ಠರು ಅದರಲ್ಲಿ ಪಕ್ಷಕ್ಕೆ ಕಂಟಕವಾಗಿರುವ ವರನ್ನು ಸಿಲುಕಿಸಲು ಮುಂದಾಗಿದೆ. ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ಬಹುತೇಕ ನೇಮಕಾತಿಯಲ್ಲಿ ಅಕ್ರಮ ಮತ್ತು ದೊಡ್ಡ ಪ್ರಮಾ ಣದ ಹಣಕಾಸು ವರ್ಗಾವಣೆಯಾಗಿದೆ. ಲೋಕ ಸೇವಾ ಆಯೋಗದ ನೇಮಕಾತಿಯಲ್ಲೂ ಆರೋಪ ಗಳು ಕೇಳಿ ಬಂದಿದ್ದವು. ಇದಲ್ಲದೆ ವಿವಿಧ ಇಲಾಖೆ ಗಳಲ್ಲಿ ನೇಮಕಾತಿ ಮಾಡುವ ಸಂದರ್ಭದಲ್ಲೂ ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿದೆ.

ಈ ಹಿಂದೆ ಪಿಎಸ್‍ಐ ನೇಮಕಾತಿಯಲ್ಲೂ ಅಕ್ರಮಗಳು ನಡೆದಿವೆ. ಇದೆಲ್ಲವನ್ನೂ ಗಮನ ದಲ್ಲಿಟ್ಟುಕೊಂಡು ತನಿಖೆಗೆ ಮುಂದಾಗಿದೆ. ಈ ಅಕ್ರಮಗಳಿಂದ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಕಳಂಕ ಎದುರಾಗಿದ್ದು, ಅದನ್ನು ನಿವಾ ರಿಸುವ ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಕೊಡುವ, ಮುಂದೆ ಇಂತಹ ಘಟನಾವಳಿಗಳು ಮರುಕಳಿಸದಂತೆ ನೋಡಿಕೊಳ್ಳಲು ವರಿಷ್ಠರು ಈ ನಿರ್ಣಯ ಕೈಗೊಂಡಿ ದ್ದಾರೆ. ವರಿಷ್ಠರ ನಿರ್ಣಯದಂತೆ ಮುಖ್ಯಮಂತ್ರಿಯವರು ಇತ್ತೀಚಿನ ನೇಮಕಾತಿಗಳಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಕೇಂದ್ರ ಗೃಹ ಹಾಗೂ ಹಣಕಾಸು ಇಲಾಖೆಯನ್ನು ಕೋರಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಲೋಕಸೇವಾ ಆಯೋಗವಲ್ಲದೆ ಲೋಕೋಪ ಯೋಗಿ, ಇಂಧನ, ಉನ್ನತ ಶಿಕ್ಷಣ, ಗೃಹ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನೇಮಕಾತಿ ನಡೆದಿದೆ. ಕೆಲವು ಪ್ರಕರಣಗಳಲ್ಲಿ ಹಗರಣ ನಡೆದಿ ದ್ದರೂ, ಅವು ಬಯಲಾಗಿಲ್ಲ. ಆದರೆ ನೇಮಕಾತಿಗೊಂಡ ಶೇ 50ಕ್ಕಿಂತ ಹೆಚ್ಚು ಮಂದಿ ಮಧ್ಯವರ್ತಿಗಳು ಮತ್ತು ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಹಣ ಲಂಚ ನೀಡಿ ನೇಮಕಗೊಂಡಿದ್ದಾರೆ. ಇಂತಹ ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕಲು ಕೇಂದ್ರ ಮುಂದಾಗಿದೆ. ಪಿಎಸ್‍ಐ ಹಗರಣ ಹಾಗೂ ಗುತ್ತಿಗೆ ನೀಡುವಲ್ಲಿ ಕಮಿಷನ್ ಇಡೀ ರಾಷ್ಟ್ರವನ್ನು ಗಮನ ಸೆಳೆದು, ಬಿಜೆಪಿ ಪಕ್ಷಕ್ಕೆ ಕಪ್ಪು ಚುಕ್ಕೆ ಇಟ್ಟಿತ್ತು.

Translate »