ತಳವಾರ, ಪರಿವಾರವನ್ನು ಎಸ್‍ಟಿ ಪಟ್ಟಿಗೆ ಸೇರಿಸದಂತೆ  ಆಗ್ರಹಿಸಿ ಬುಡಕಟ್ಟು ಸಂಶೋಧನಾ ಸಂಸ್ಥೆ ಎದುರು ಪ್ರತಿಭಟನೆ
ಮೈಸೂರು

ತಳವಾರ, ಪರಿವಾರವನ್ನು ಎಸ್‍ಟಿ ಪಟ್ಟಿಗೆ ಸೇರಿಸದಂತೆ ಆಗ್ರಹಿಸಿ ಬುಡಕಟ್ಟು ಸಂಶೋಧನಾ ಸಂಸ್ಥೆ ಎದುರು ಪ್ರತಿಭಟನೆ

December 25, 2018

ಮೈಸೂರು: `ತಳವಾರ’ ಮತ್ತು `ಪರಿವಾರ’ ಸಮುದಾಯಗಳಲ್ಲಿ ಬುಡಕಟ್ಟು ಲಕ್ಷಣಗಳು ಇಲ್ಲವಾಗಿದ್ದರೂ `ನಾಯಕ’ ಪಂಗಡದ ಪರ್ಯಾಯ ಪದ ಗಳೆಂದು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಸುಳ್ಳು ವರದಿಯನ್ನು ಸರ್ಕಾರಕ್ಕೆ ನೀಡಿದೆ ಎಂದು ಆರೋಪಿಸಿ ಚಿತ್ರದುರ್ಗ ಜಿಲ್ಲೆಯ ಮ್ಯಾಸ ಬೇಡ (ಮ್ಯಾಸ ನಾಯಕ) ಬುಡಕಟ್ಟು ಸಂಸ್ಕøತಿ ಸಂರಕ್ಷಣಾ ಸಮಿತಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ಕುವೆಂಪುನಗರದಲ್ಲಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಎದುರು ನೂರಾರು ಸಂಖ್ಯೆ ಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ತಮ್ಮ ಸಾಂಸ್ಕøತಿಕ ಉಡುಗೆಯಾದ ಚಲ್ಲಣ, ಕಂಬಳಿ ಮತ್ತು ಕೋಲುಗಳನ್ನು ಹಿಡಿದು `ಪರಿವಾರ’ ಮತ್ತು `ತಳವಾರ’ ಪದಗಳು `ನಾಯಕ’ ಪಂಗಡದ ಪರ್ಯಾಯ ಪದಗಳೆಂದು ನೀಡಿರುವ ಸುಳ್ಳು ವರದಿ ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿದರು.

ತಳವಾರ ಮತ್ತು ಪರಿವಾರ ಪದಗಳು ಗಂಗಮತಸ್ಥ ಜಾತಿಯ ಪರ್ಯಾಯ ಪದಗಳು. ತಳವಾರಿಕೆ ಎಂಬುದು ಸಾಮಾನ್ಯವಾಗಿ ಬೆಸ್ತ ಅಥವಾ ಗಂಗಾಮತ ಅಥವಾ ಅಂಬಿಗ ಎನ್ನುವ ಜನಾಂಗದ ಒಂದು ವೃತ್ತಿಯಾಗಿತ್ತು. ಪರಿವಾರದವರು ಅಂದಿನ ಮೈಸೂರು ರಾಜ್ಯದಲ್ಲಿ ಅರಮನೆ ಮತ್ತು ಮಹಾರಾಜರ ಪರಿವಾರದ ಸೇವೆಯಲ್ಲಿದ್ದವರು. ಇವರೆಲ್ಲ ಸಮಾಜದ ಮುಖ್ಯವಾಹಿನಿಯಲ್ಲಿದ್ದವರು. ಇವರು ಯಾರೂ ಬುಡಕಟ್ಟು ಜನರಲ್ಲ ಎಂದು ಪ್ರತಿಪಾದಿಸಿದರು.
ನಾಯಕ ಜನಾಂಗದ ಪರ್ಯಾಯ ಪದ ಗಳಾದ ನಾಯ್ಕ, ನಾಯಕ್, ಬೇಡ, ಬೇಡರ್, ವಾಲ್ಮೀಕಿ ಪದಗಳನ್ನು 1991ರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಯಿತು. ಇದೇ ವೇಳೆ ತಳವಾರ ಮತ್ತು ಪರಿವಾರ ಸಮುದಾಯ ಗಳನ್ನು ನಾಯಕ ಜನಾಂಗದ ಪರ್ಯಾಯ ಪದವೆಂದು ಸೇರಿಸುವ ಪ್ರಯತ್ನ ನಡೆಯಿತು. ಆದರೆ ಬುಡಕಟ್ಟು ಲಕ್ಷಣಗಳು ಇಲ್ಲದೇ ಪ್ರಯತ್ನ ವಿಫಲವಾಯಿತು. ಪರಿವಾರ ಮತ್ತು ತಳವಾರ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಪ್ರಯತ್ನಗಳು ನಡೆಯು ತ್ತಲೇ ಇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಳವಾರ ಮತ್ತು ಪರಿವಾರ ಸಮು ದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿ ಸಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ 1996ರಲ್ಲಿ ಶಿಫಾರಸ್ಸು ಮಾಡಿತ್ತು. ಆದರೆ 2004ರಲ್ಲಿ ನವದೆಹಲಿಯ ರಿಜಿಸ್ಟರ್ ಜನರಲ್ ಆಫ್ ಇಂಡಿಯಾ, ಇವರಲ್ಲಿ ಪರಿಶಿಷ್ಟ ಪಂಗ ಡದ ಗುಣ ಲಕ್ಷಣವಿಲ್ಲವೆಂದು ಶಿಫಾರ ಸ್ಸನ್ನು ತಿರಸ್ಕರಿಸಿತು. ಮತ್ತೆ 2011ರಲ್ಲೂ ಪ್ರಯತ್ನ ನಡೆದು ವಿಫಲವಾಯಿತು. ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯು ಪರಿ ವಾರ ಮತ್ತು ತಳವಾರ ಪದಗಳು ನಾಯಕ ಜನಾಂಗದ ಪರ್ಯಾಯ ಪದಗಳೆಂದು ವರದಿ ಸಿದ್ಧಪಡಿಸಿ 2017ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಯಾವ ಆಧಾರದಲ್ಲಿ ಈ ವರದಿ ಸಿದ್ಧಪಡಿಸಲಾಗಿದೆ ಎಂಬು ದನ್ನು ದಾಖಲೆಸಹಿತ ಬಹಿರಂಗಪಡಿಸ ಬೇಕು ಎಂದು ಆಗ್ರಹಿಸಿದರು.

ಪರಿವಾರ ಮತ್ತು ತಳವಾರ ಮತ್ತು ನಾಯಕ ಬುಡಕಟ್ಟಿನವರಿಗೂ ಯಾವುದೇ ಸಾಮ್ಯತೆ ಇಲ್ಲದಿದ್ದರೂ ಸುಳ್ಳು ವರದಿ ನೀಡಲಾಗಿದೆ. ಇದರಿಂದ ನಿಜವಾದ ಬುಡಕಟ್ಟು ಸಮು ದಾಯಕ್ಕೆ ಅನ್ಯಾಯವಾಗಲಿದೆ. ಹೀಗಾಗಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋ ಧನಾ ಸಂಸ್ಥೆ ತಾನು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಶೀಘ್ರದಲ್ಲಿ ಹಿಂಪಡೆಯ ಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಚಿತ್ರದುರ್ಗ, ಬಳ್ಳಾರಿ ಹಾಗೂ ದಾವಣ ಗೆರೆ ಜಿಲ್ಲೆಗಳಿಂದ ಎರಡು ಬಸ್‍ಗಳಲ್ಲಿ ನೂರಾರು ಸಂಖ್ಯೆಯಲ್ಲಿ ಆಗಮಿಸಿ ಪ್ರತಿ ಭಟನೆ ನಡೆಸಲಾಯಿತು.
ಸಂಘಟನೆಯ ಅಧ್ಯಕ್ಷ ಡಾ.ಗೆರೇಗಲ್ ಪಾಪಯ್ಯ, ಕಾರ್ಯದರ್ಶಿ ದೊಡ್ಡಮನಿ, ಸಂಘಟನಾ ಕಾರ್ಯದರ್ಶಿ ಲಿಂಗರಾಜು, ಕಾರ್ಯಕರ್ತರಾದ ಓಬಳೇಶ್, ಕಿಲಾರೆ ಗೋವಿಂದಪ್ಪ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »