ಸೌದೆ ತರಲು ಕಾಡಿಗೆ ಹೋಗಿದ್ದ ಯುವಕ ಹುಲಿಗೆ ಬಲಿ
ಮೈಸೂರು

ಸೌದೆ ತರಲು ಕಾಡಿಗೆ ಹೋಗಿದ್ದ ಯುವಕ ಹುಲಿಗೆ ಬಲಿ

December 25, 2018

ಮೈಸೂರು:  ಸೌದೆ ತರಲು ಕಾಡಿಗೆ ಹೋಗಿದ್ದ ಯುವಕ ಹುಲಿ ದಾಳಿಗೆ ಬಲಿಯಾಗಿರುವ ದುರ್ಘಟನೆ ನಾಗರಹೊಳೆ ಅಭಯಾರಣ್ಯದ ಮಾನಿ ಮೂಲೆ ಹಾಡಿಯಲ್ಲಿ ಸಂಭವಿಸಿದ್ದು, ಮನೆಯಿಂದ 200 ಮೀಟರ್ ದೂರದಲ್ಲಿ ಯುವಕನ ಅರೆಬರೆ ಕಳೇಬರ ದೊರೆತಿದೆ. ಹೆಚ್.ಡಿ.ಕೋಟೆ ತಾಲೂಕಿನ ದೊಡ್ಡ ಭೈರನಕುಪ್ಪೆ (ಡಿ.ಬಿ.ಕುಪ್ಪೆ) ಪಂಚಾಯ್ತಿ ವ್ಯಾಪ್ತಿಗೆ ಬರುವ ಮಾನಿಮೂಲೆ ಹಾಡಿಯ ನಿವಾಸಿ ಲೇ.ದಾಸ ಎಂಬುವರ ಮಗ ಮಧು(28), ಹುಲಿ ದಾಳಿಗೆ ಬಲಿ ಯಾಗಿದ್ದಾನೆ. ಭಾನುವಾರ ಬೆಳಿಗ್ಗೆ 11 ಗಂಟೆಗೆ ಸೌದೆ ತರಲೆಂದು ಕಾಡಿಗೆ ಹೋಗಿದ್ದಾನೆ. ಈ ವೇಳೆ ಹುಲಿ ಆಹುತಿ ತೆಗೆದುಕೊಂಡಿದೆ. ಪೊದೆಯೊಂದರಲ್ಲಿ ಯುವಕನ ಅರೆಬರೆ ದೇಹ ಸಿಕ್ಕಿದೆ. ರಾತ್ರಿಯಿಡೀ ಮನೆಗೆ ಬಾರದೆ ಇದ್ದರಿಂದ ಆತನ ಪೋಷಕರು ಹಾಡಿಯ ನಿವಾಸಿಗಳೊಂದಿಗೆ ಕಾಡಿನಲ್ಲಿ ಹುಡುಕುತ್ತಾ ಹೋದಾಗ ಇಂದು ಮಧ್ಯಾಹ್ನ ಪೊದೆಯೊಂದರಲ್ಲಿ ಹುಲಿ ತಿಂದ ಅರೆಬರೆ ದೇಹ ಕಂಡು ಬಂದಿದೆ.

ಮಧುವಿನ ತಂದೆ ದಾಸ ಅವರನ್ನು ಕಳೆದ 10 ವರ್ಷದ ಹಿಂದೆ ಇದೇ ಹಾಡಿಯಲ್ಲಿ ಕಾಡಾನೆ ದಾಳಿ ನಡೆಸಿ ಬಲಿ ಪಡೆದಿತ್ತು. ಮಧು ತನ್ನ ತಾಯಿ ಪಾರ್ವತಿ, ಪತ್ನಿ ಭಾಗ್ಯ ಹಾಗೂ 2 ಮತ್ತು 4 ವರ್ಷದ ಮಕ್ಕ ಳೊಂದಿಗೆ ಮಾನಿಮೂಲೆ ಹಾಡಿಯಲ್ಲಿ ವಾಸಿಸುತ್ತಿ ದ್ದರು. ತೀರ ಕಡುಬಡವ ರಾಗಿದ್ದು, ಮಧುವೇ ಆಧಾರ ಸ್ತಂಭವಾಗಿದ್ದ. ಎಂದಿನಂತೆ ಸೌದೆ ತರಲು ಹೋಗಿದ್ದಾಗ ಈ ದುರ್ಘಟನೆ ಸಂಭವಿ ಸಿದ್ದು, ಹಾಡಿಯ ಜನರಲ್ಲಿ ಭಯದ ವಾತಾವರಣ ಮೂಡಿ ಸಿದೆ. ಮೈಸೂರು (ಹೆಚ್.ಡಿ.ಕೋಟೆ)-ಮಾನಂದ ವಾಡಿ ರಸ್ತೆಯಲ್ಲಿ ಮಚ್ಚೂರು ಹಾಗೂ ಬಾವಲಿ ಮಧ್ಯೆ ಮಾನಿಮೂಲೆ ಹಾಡಿ ಇದೆ. ಮುಖ್ಯ ರಸ್ತೆಗೆ ಹೊಂದಿ ಕೊಂಡಂತೆ ಇರುವ ಈ ಹಾಡಿಯಲ್ಲಿ ಹಿಂದಿನ ಸಮಾಜ ಕಲ್ಯಾಣ ಇಲಾಖೆಯ ಸಚಿವ ಹೆಚ್.ಆಂಜನೇಯ ವಾಸ್ತವ್ಯ ಹೂಡಿದ್ದರು. ಈ ಹಾಡಿಗೆ ಕಾಡಾನೆ, ಹುಲಿ, ಚಿರತೆಗಳು ಬಂದು ಹೋಗುತ್ತಿವೆ. ಹಾಡಿಯಲ್ಲಿದ್ದ ನಾಯಿಗಳನ್ನು ತಿನ್ನುತ್ತಿವೆ. ಕೆಲವು ಪ್ರಕರಣದಲ್ಲಿ ಕಾಡಾನೆಗಳು ಹಾಡಿಯ ನಿವಾಸಿಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿ ರುವ ಪ್ರಕರಣ ನಡೆದಿದೆ. ಆದರೆ ಇಂದು ಹುಲಿ ದಾಳಿಗೆ ಯುವಕ ಬಲಿಯಾಗಿರುವುದರಿಂದ ಸ್ಥಳೀಯರನ್ನು ಚಿಂತೆಗೀಡು ಮಾಡಿದೆ. ಆದಿವಾಸಿಗಳು ದೂರದಿಂ ದಲೇ ಆನೆ, ಹುಲಿ ಸೇರಿದಂತೆ ಕಾಡು ಪ್ರಾಣಿಗಳಿರುವ ವಾಸನೆಯನ್ನು ಗ್ರಹಿಸಬಲ್ಲದು. ಆದರೆ ಈ ಪ್ರಕರಣ ದಲ್ಲಿ ಹುಲಿ ಬಾಯಿಗೆ ಆದಿವಾಸಿ ಯುವಕ ಹೇಗೆ ಸಿಕ್ಕಿ ಸತ್ತ ಎಂಬುದು ಚರ್ಚೆಗೆ ಗ್ರಾಸವಾಗಿದೆ.

ಪರಿಹಾರಕ್ಕೆ ಆಗ್ರಹಿಸಿ ಆದಿವಾಸಿ ಮುಖಂಡ ವಿಜಯ್‍ಕುಮಾರ್ ಆದಿವಾಸಿ `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿ, ಸೌದೆ ತರಲು ಹೋಗಿದ್ದ ಮಾನಿಮೂಲೆ ಹಾಡಿಯ ಯುವಕನನ್ನು ಹುಲಿ ತಿಂದು ಹಾಕಿದೆ. ಮನೆಯ ಅನತಿ ದೂರದಲ್ಲಿ ಹುಲಿ ದಾಳಿ ನಡೆಸಿರುವುದು ಆತಂಕ ಸೃಷ್ಟಿಸಿದೆ. ಅರಣ್ಯ ಇಲಾಖೆಯ ನಿಯಮದಲ್ಲಿ ಕಾಡಿನೊಳಗೆ ಇರುವ ಹಾಡಿಗಳ ನಿವಾಸಿಗಳು ವನ್ಯಜೀವಿಗಳ ದಾಳಿಗೆ ತುತ್ತಾ ದರೆ ಪರಿಹಾರ ನೀಡಲು ಅವಕಾಶವಿಲ್ಲ ಎಂದು ಅಧಿಕಾರಿಗಳು ಕೈ ತೊಳೆದುಕೊಳ್ಳುತ್ತಿದ್ದಾರೆ. ಹಲವು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಕಾಡಾನೆ ದಾಳಿಗೆ ತುತ್ತಾದವರು ಅಂಗವೈಕಲ್ಯತೆಯಿಂದ ಬಳಲಿ, ಕುಟುಂಬ ನಿರ್ವಹಣೆಗೂ ತೊಂದರೆಯಾಗಿದೆ. ಈ ಹಿನ್ನೆಲೆ ಯಲ್ಲಿ ಕಾಡಿನೊಳಗೆ ಇರುವ ಹಾಡಿಯ ನಿವಾಸಿಗಳು ವನ್ಯಜೀವಿಗಳಿಗೆ ತುತ್ತಾದಾಗ ಪರಿಹಾರ ನೀಡ ಬೇಕೆಂದು ಒತ್ತಾಯಿಸಿದರು. ಸ್ಥಳಕ್ಕೆ ಡಿ.ಬಿ.ಕುಪ್ಪೆ ಆರ್‍ಎಫ್‍ಒ ಸೇರಿದಂತೆ ಇನ್ನಿತರರು ಬೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಬೀಚನಹಳ್ಳಿ ಪೊಲೀ ಸರು ಪ್ರಕರಣ ದಾಖಲಿಸಿದ್ದಾರೆ

Translate »