ಫೆಡರಲ್ ಫ್ರಂಟ್ ರಚನೆ ಮಾತುಕತೆ  ಮುಂದುವರೆಯಲಿದೆ: ಮಮತಾ ಭೇಟಿ ಬಳಿಕ ಕೆಸಿಆರ್
ಮೈಸೂರು

ಫೆಡರಲ್ ಫ್ರಂಟ್ ರಚನೆ ಮಾತುಕತೆ ಮುಂದುವರೆಯಲಿದೆ: ಮಮತಾ ಭೇಟಿ ಬಳಿಕ ಕೆಸಿಆರ್

December 25, 2018

ಕೋಲ್ಕತಾ: ಟಿಆರ್‍ಎಸ್ ಮುಖ್ಯಸ್ಥ ಹಾಗೂ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಸೋಮವಾರ ಕೋಲ್ಕತಾದಲ್ಲಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದಾರೆ. ಮಮತಾ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಸಿಆರ್, ಫೆಡರಲ್ ಫ್ರಂಟ್ ರಚಿಸುವ ಮಾತುಕತೆ ಮುಂದುವರೆಯಲಿದೆ ಮತ್ತು ಈ ಕುರಿತು ಶೀಘ್ರದಲ್ಲೇ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದು ಎಂದು ಹೇಳಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಹೊರತಾದ ಮೈತ್ರಿಕೂಟ ರಚನೆಯ ನನ್ನ ಪ್ರಯತ್ನ ಮುಂದುವರೆಯಲಿದೆ ಎಂದು ತೆಲಂಗಾಣ ಸಿಎಂ ತಿಳಿಸಿದ್ದಾರೆ. ಇದು ದೇಶಾದ್ಯಂತ ಎಲ್ಲ ಶಕ್ತಿಗಳನ್ನು ಒಂದುಗೂಡಿಸುವ ಪ್ರಯತ್ನ. ನಿನ್ನೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭೇಟಿ ಮಾಡಿದ್ದೆ. ಇಂದು ಮಮತಾಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದೇನೆ ಎಂದರು.

ಕಾಂಗ್ರೆಸ್ ಹಾಗೂ ಬಿಜೆಪಿಯೇತರ ರಂಗ ರಚನೆಯ ಯೋಜನೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೆಸಿಆರ್, ‘ಇದು ಒಂದೇ ಭೇಟಿಯಲ್ಲಿ ಮಾತುಕತೆ ನಡೆಸಿ ನಿರ್ಧಾರ ತೆಗೆದುಕೊಳ್ಳುವಂತಹ ಪ್ರಕ್ರಿಯೆ ಅಲ್ಲ. ಎಲ್ಲರ ಜತೆ ಮಾತುಕತೆ ನಡೆಸಿ ಶೀಘ್ರದಲ್ಲೇ ಈ ರಂಗ ರಚನೆಯ ಯೋಜನೆಯ ರೂಪುರೇಷೆ ರೂಪಿಸಲಾಗುತ್ತದೆ. ಆದಷ್ಟು ಬೇಗ ಈ ಬಗ್ಗೆ ಸಿಹಿ ಸುದ್ದಿ ನೀಡುತ್ತೇವೆ’ ಎಂದರು.

Translate »