ಬೆಂಗಳೂರು: ಪುಟ ಪುನರ್ ರಚನೆಯಲ್ಲಿ ಸಚಿವರಾಗಿ 3 ದಿನವಾದರೂ ತಮಗೆ ಯಾವ ಖಾತೆ ಎಂಬುದು ಇನ್ನೂ ಸ್ಪಷ್ಟವಾಗದೆ ಪ್ರಮುಖ ಖಾತೆಗಳಿಗಾಗಿ ನೂತನ ಸಚಿವರು ತಮ್ಮ ನಾಯಕರ ಮನೆ ಬಾಗಿಲು ಸುತ್ತುತ್ತಿದ್ದಾರೆ.
ಖಾತೆ ಹಂಚಿಕೆ ಗೊಂದಲ ಮುಂದುವರೆದಿದ್ದು ಇದನ್ನು ಬಗೆಹರಿ ಸಲು ರಾಜ್ಯ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನಗರಕ್ಕೆ ಧಾವಿಸಿದ್ದಾರೆ. ತಮಗೂ ಇದಕ್ಕೂ ಸಂಬಂಧ ಇಲ್ಲವೆಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಜಯಪುರ, ಕೊಪ್ಪಳ ಜಿಲ್ಲೆಗಳಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಮತ್ತೊಂದೆಡೆ ಉಪ ಮುಖ್ಯಮಂತ್ರಿ ಡಾ|| ಜಿ. ಪರಮೇಶ್ವರ್, ಸಚಿವರಾದ ಡಿ.ಕೆ. ಶಿವಕುಮಾರ್, ಆರ್.ವಿ. ದೇಶಪಾಂಡೆ, ಕೃಷ್ಣಬೈರೇಗೌಡ, ಕೆ.ಜೆ. ಜಾರ್ಜ್ ತಮ್ಮಲ್ಲಿ ರುವ ಹೆಚ್ಚುವರಿ ಖಾತೆಗಳನ್ನು ಉಳಿಸಿಕೊಳ್ಳಲು ಕಸರತ್ತು ನಡೆಸಿ ದ್ದಾರೆ. ಇವರೆಲ್ಲರೂ ಒಂದಕ್ಕಿಂತ ಹೆಚ್ಚು ಪ್ರಮುಖ ಖಾತೆಗಳನ್ನು ಇಟ್ಟುಕೊಂಡಿದ್ದಾರೆ, ಅಂತಹ ಖಾತೆಗಳನ್ನು ತಮ್ಮ ಪಕ್ಷದ ನೂತನ ಸಹೋದ್ಯೋಗಿಗಳಿಗೆ ಬಿಟ್ಟುಕೊಡಲು ಆಸಕ್ತಿ ತೋರುತ್ತಿಲ್ಲ. ಇದರ ನಡುವೆಯೂ ಪರಮೇಶ್ವರ್ ಗೃಹ, ಬೆಂಗಳೂರು ನಗರಾಭಿವೃದ್ಧಿ ಉಳಿಸಿಕೊಂಡು ಯುವಜನ ಸೇವೆ ಮತ್ತು ಕ್ರೀಡಾ ಖಾತೆ ಬಿಟ್ಟು ಕೊಡುವ ದೊಡ್ಡ ಮನಸ್ಸು ಮಾಡಿದ್ದಾರೆ. ಆದರೆ, ಶಿವಕುಮಾರ್, ತಮ್ಮ ಬಳಿ ಇರುವ ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಎರಡೂ ಬೇಕಂತೆ. ಇನ್ನು ಕೆ.ಜೆ. ಜಾರ್ಜ್ ಬೃಹತ್ ಕೈಗಾರಿಕೆ ಉಳಿಸಿಕೊಂಡು ಐಟಿ-ಬಿಟಿ ಖಾತೆ ತ್ಯಜಿಸಲಿದ್ದಾರೆ. ಕೃಷ್ಣಬೈರೇಗೌಡ ಅವರು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬಿಟ್ಟುಕೊಡದೆ, ಬೇಕಾದರೆ ಕಾನೂನು ಮತ್ತು ಸಂಸದೀಯ ಖಾತೆ ನೀಡಲು ಮುಂದಾಗಿದ್ದಾರೆ, ಆದರೆ ಅದರ ನಿರ್ವಹಣೆಗೆ ಯಾರೂ ಮುಂದೆ ಬರುತ್ತಿಲ್ಲ, ಹೊಸದಾಗಿ ಮಂತ್ರಿ ಆಗಿರುವ ಸತೀಶ್ ಜಾರಕಿಹೊಳಿ ಅವರಿಗೆ ಗ್ರಾಮೀಣಾಭಿವೃದ್ಧಿ ಬೇಕಂತೆ.
ಜಮೀರ್ ಅಹಮದ್ ಖಾನ್ ಆಹಾರ ಮತ್ತು ನಾಗರಿಕ ಪೂರೈಕೆ ಜೊತೆಗೆ ತಮ್ಮ ಸಮುದಾಯದ ಮೇಲೆ ಹಿಡಿತ ಸಾಧಿಸುವ ಅಲ್ಪ ಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಖಾತೆ ಉಳಿಸಿಕೊಳ್ಳಲು ಸಿದ್ದರಾಮಯ್ಯ ಅವರ ಮೊರೆ ಹೋಗಿದ್ದಾರೆ. ರಾಜಶೇಖರ್ ಪಾಟೀಲ್, ಗಣಿ ಇಟ್ಟುಕೊಂಡು ಮುಜರಾಯಿ ಇಲಾಖೆ ಸಾಗಹಾಕಲು ಹೊರಟಿದ್ದಾರೆ. ಜಯಮಾಲಾ ಅವರಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೇರೆಯವರ ಪಾಲಾಗಬಹುದು. ಇನ್ನು ಕಾಂಗ್ರೆಸ್ ಪಾಲಿನ ಅರಣ್ಯ, ಪರಿಸರ ವಿಜ್ಞಾನ, ಪೌರಾಡಳಿತ, ನಗರ ಸ್ಥಳೀಯ ಸಂಸ್ಥೆ, ಬಂದರು, ಒಳನಾಡು ಸಾರಿಗೆ ಮುಖ್ಯಮಂತ್ರಿ ಬಳಿ ಇವೆ. ಇಷ್ಟು ಖಾತೆಗಳಲ್ಲೇ ತಮ್ಮ ವತಿಯಿಂದ ಸಂಪುಟ ಸೇರಿರುವ 8 ಮಂದಿಗೆ ದೊಡ್ಡ ಜವಾಬ್ದಾರಿ ನೀಡುವ ಹೊಣೆಗಾರಿಕೆ ರಾಜ್ಯ ಕಾಂಗ್ರೆಸ್ ನಾಯಕರ ಹೆಗಲ ಮೇಲೆ ಬಿದ್ದಿದೆ.