ಮೊದಲ ದಿನವೇ ಸಮಸ್ಯೆ  ಹೇಳಿಕೊಳ್ಳಲು ಮುಗಿ ಬಿದ್ದ ಜನರು
ಮೈಸೂರು

ಮೊದಲ ದಿನವೇ ಸಮಸ್ಯೆ ಹೇಳಿಕೊಳ್ಳಲು ಮುಗಿ ಬಿದ್ದ ಜನರು

December 25, 2018

ಮೈಸೂರು: ಮೈಸೂರಿನ ಜಲದರ್ಶಿನಿ ಅತಿಥಿಗೃಹ ಆವರಣದಲ್ಲಿ ನಿರ್ಮಾಣವಾಗಿರುವ ನೂತನ ಕಟ್ಟಡದಲ್ಲಿ ಉನ್ನತ ಶಿಕ್ಷಣ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ಕಚೇರಿ ಆರಂಭವಾಗಿದ್ದು, ಸೋಮವಾರ ಮೊದಲ ದಿನವೇ ಸಚಿವರನ್ನು ಕಂಡು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಜನರು ಮುಗಿಬಿದ್ದರು. ಸಾಕಷ್ಟು ದೂರು, ಸಮಸ್ಯೆಗಳು ಸಚಿವರಿಗೆ ಸಲ್ಲಿಕೆಯಾದವು.

ಇದಕ್ಕೆ ಸ್ಪಂದಿಸಿದ ಸಚಿವರು ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ತಕ್ಷಣ ದೂರುದಾರರ ಸಮ ಸ್ಯೆಗೆ ಸ್ಪಂದಿಸಿ ಕೆಲಸ ಮಾಡಿಕೊಡುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಮರಟಿ ಕ್ಯಾತನಹಳ್ಳಿಯ ಕೆಲ ಗ್ರಾಮ ಪಂಚಾಯಿತಿ ಸದಸ್ಯರು ದಾಸನಕೊಪ್ಪಲು ಗ್ರಾಮದಲ್ಲಿ ಚಾಮುಂಡೇಶ್ವರಿ ದೇವಸ್ಥಾನದ ಬಳಿ ಶೌಚಾ ಲಯದ ನೀರಿನ ಸಂಪು ನಿರ್ಮಿಸಲಾಗು ತ್ತಿದ್ದು, ಇದಕ್ಕೆ ವಿರೋಧವಿದೆ. ದೇವಸ್ಥಾನದ ಬಳಿ ಬೇಡ, ಬೇರೆ ಕಡೆ ಮಾಡಿಕೊಡುವ ಬಗ್ಗೆ ಸಚಿವರ ಗಮನ ಸೆಳೆದರು.

ಅಲ್ಲದೆ ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡವನ್ನು ಹಾಲಿ ನಿರ್ಮಿಸಬೇಕೆಂದಿರುವ ಜಾಗದಿಂದ ಬೇರೆ ಜಾಗದಲ್ಲಿ ನಿರ್ಮಿಸಿ ಕೊಡಲು ಪಂಚಾಯಿತಿ ಸದಸ್ಯರಾದ ಗಿರಿ ಗೌಡ, ಶಂಭೇಗೌಡ, ಚೆಲುವರಾಜು, ಗ್ರಾಮದ ಮುಖಂಡರಾದ ಶ್ರೀಕಂಠು, ಹೊನ್ನೇಗೌಡ ಇನ್ನಿತರರು ಮನವಿ ಮಾಡಿದರು.
ಇದಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾ ಯಿತಿಯಿಂದ ನಿರ್ಣಯ ಮಾಡಿದ ಜಾಗ ದಲ್ಲಿ ಕಟ್ಟಡ ನಿರ್ಮಿಸಿಕೊಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೂರ್ಗಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯತ್ ರಾಜ್ ಕಾನೂನು ಉಲ್ಲಂ ಘಿಸಿ, ತೆರಿಗೆ ಕಟ್ಟಿಸಿಕೊಳ್ಳುವ ವಿಚಾರದಲ್ಲಿ ಭಾರೀ ಗೋಲ್‍ಮಾಲ್ ನಡೆಯುತ್ತಿದ್ದು, ಕ್ರಮ ಕೈಗೊಳ್ಳುವಂತೆ ಕೂರ್ಗಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಿ.ಮಹದೇವ್ ಮತ್ತು ಇತರೆ ಸದಸ್ಯರು ಸಚಿವರ ಗಮನ ಸೆಳೆದರು.

ಪಂಚಾಯಿತಿ ವ್ಯಾಪ್ತಿಯ ಅಪಾರ್ಟ್ ಮೆಂಟ್‍ನಲ್ಲಿ ತೆರಿಗೆ ಕಟ್ಟಿಸಿಕೊಳ್ಳುವ ವಿಚಾರ ದಲ್ಲಿ ಸಾಮಾನ್ಯ ಸಭೆಯ ನಿರ್ಣಯ, ಸರ್ಕಾ ರದ ಆದೇಶಗಳನ್ನು ಉಲ್ಲಂಘಿಸಲಾಗು ತ್ತಿದೆ. ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಿಂದ ಬರುವ ತೆರಿಗೆಯನ್ನು ಸಾಮಾನ್ಯ ಸಭೆ ನಿರ್ಣಯ ಮತ್ತು ಸರ್ಕಾರಿ ಆದೇಶಗಳನ್ನು ಪಾಲಿಸದೇ ಪಂಚಾಯಿತಿಗೆ ಮತ್ತು ಸರ್ಕಾರಕ್ಕೆ ಕಟ್ಟಬೇ ಕಾದ ಸೆಸ್ ಕಟ್ಟಿಸಿಕೊಳ್ಳದೇ ವಂಚಿಸಲಾಗು ತ್ತಿದೆ. ಇದನ್ನು ಲೆಕ್ಕ ಪರಿಶೋಧಕರಿಂದ ತನಿಖೆ ಮಾಡಿಸಬೇಕು. ಬೀದಿದೀಪ, ನೀರಿನ ವಿದ್ಯುತ್ ಮೋಟಾರ್ ರಿಪೇರಿಗೆ ಬೇಕಾದ ಸಾಮಗ್ರಿ, ಪೈಪ್‍ಲೈನ್ ಇನ್ನಿತರ ಪದಾರ್ಥ ಗಳ ಖರೀದಿಯಲ್ಲಿ ನಿಯಮ ಉಲ್ಲಂಘನೆ ಯಾಗಿದೆ. ಪ್ರತಿ ತಿಂಗಳ ಸಾಮಾನ್ಯ ಸಭೆ ನಡೆಸುತ್ತಿಲ್ಲ. ಎಸ್‍ಸಿ, ಎಸ್‍ಟಿಯ 22.75 ರಷ್ಟು ಹಣವನ್ನು ಅವರ ಅಭಿವೃದ್ಧಿಗೆ ಖರ್ಚು ಮಾಡದೆ ಸಂಪೂರ್ಣ ನಿರ್ಲಕ್ಷಿಸಿ, ಶೇ.5ರಿಂದ 6ರಷ್ಟು ಮಾತ್ರ ಖರ್ಚು ಮಾಡ ಲಾಗುತ್ತಿದೆ ಎಂದು ಆರೋಪಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಹೊಸದಾಗಿ ಬಂದಿರುವ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸರಿ ಪಡಿಸುತ್ತಾರೆ ಎಂದು ಭರವಸೆ ನೀಡಿದರು.

ದಟ್ಟಗಳ್ಳಿಯ ಮಹಾಲಕ್ಷ್ಮಿ ಲೇಔಟ್‍ನಲ್ಲಿ ಯುಜಿಡಿ ಕಾಮಗಾರಿಗೆ 45 ಲಕ್ಷ ರೂ. ಅಂದಾಜಿನ ಯುಜಿಡಿ ಕಾಮಗಾರಿ ಮಂಜೂರಾಗಿ ದಿನಗಳೇ ಕಳೆದರೂ ಅಧಿ ಕಾರಿಗಳು ಕಾಮಗಾರಿ ಆರಂಭಿಸಿಲ್ಲ. ಕೂಡಲೇ ಅರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡು ವಂತೆ ಮೈಸೂರು ತಾಲೂಕು ಜೆಡಿಎಸ್ ಉಪಾಧ್ಯಕ್ಷ ಹೊನ್ನೇಗೌಡ ಸಚಿವರಲ್ಲಿ ಮನವಿ ಮಾಡಿದರು. ಬೇಗ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರ ವಸೆ ನೀಡಿದರು. ಈ ವೇಳೆ ಜಿಪಂ ಸದಸ್ಯೆ ಚಂದ್ರಿಕಾ ಸುರೇಶ್, ಎಡಿಸಿ ಟಿ.ಯೋಗೀಶ್, ಜಿಪಂ ಸಿಇಓ ಕೆ.ಜ್ಯೋತಿ, ನಗರಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್, ತಹಸೀಲ್ದಾರ್ ರಮೇಶ್ ಬಾಬು ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Translate »