ಮೈಸೂರು ನಗರಪಾಲಿಕೆ ನೌಕರರ ಸಹಕಾರ ಸಂಘದ ಶತಮಾನೋತ್ಸವ
ಮೈಸೂರು

ಮೈಸೂರು ನಗರಪಾಲಿಕೆ ನೌಕರರ ಸಹಕಾರ ಸಂಘದ ಶತಮಾನೋತ್ಸವ

September 24, 2018

ಮೈಸೂರು: ಮೈಸೂರು ಮಹಾ ನಗರಪಾಲಿಕೆ ನೌಕರರ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭ ಭಾನುವಾರ ಮೈಸೂರಿನ ಕಲಾಮಂದಿರದಲ್ಲಿ ನಡೆಯಿತು.

ಯದುವಂಶಸ್ಥ ಯದುವೀರ ಕೃಷ್ಣದತ್ತ ಚಾಮ ರಾಜ ಒಡೆಯರ್ ಅವರು ಪಾಲಿಕೆ ನೌಕರರ ಸಹ ಕಾರ ಸಂಘದ ಶತಮಾನೋತ್ಸವ ಸಮಾರಂಭ ವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದರ ಲ್ಲದೆ, ಹಿರಿಯ ಸಹಕಾರಿಗಳಿಗೆ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಮೈಸೂರು ಮಹಾನಗರ ಪಾಲಿಕೆ ನೌಕರರ ಸಹಕಾರ ಸಂಘ ಶತಮಾನೋತ್ಸವದ ಸಂಭ್ರಮದಲ್ಲಿರುವುದು ಸಂತೋಷ ಕರ ಸಂಗತಿಯಾಗಿದೆ. ಈ ಹಿಂದೆ ಮೈಸೂರು ರಾಜ ವಂಶಸ್ಥರು ದೂರ ದೃಷ್ಟಿಯಿಂದ ಈ ಸಹಕಾರ ಸಂಘ ವನ್ನು ಸ್ಥಾಪಿಸಿ ಸಂಕಷ್ಟದಲ್ಲಿರುವ ನೌಕರರಿಗೆ ನೆರ ವಾಗಿದ್ದಾರೆ. ಕಳೆದ 100 ವರ್ಷಗಳಿಂದ ಪ್ರಗತಿಯತ್ತ ಹೆಜ್ಜೆ ಹಾಕಿರುವ ಈ ಸಹಕಾರ ಬ್ಯಾಂಕ್ ಇನ್ನಷ್ಟು ಸಾಧನೆ ಮಾಡುವತ್ತ ದಾಪುಗಾಲಿಡಲಿ ಎಂದು ಅವರು ಶುಭ ಕೋರಿದರು.

ಶಾಸಕ ಎಲ್.ನಾಗೇಂದ್ರ ಮಾತನಾಡಿ, ಮೈಸೂರು ನಗರವನ್ನು ಸುಸಜ್ಜಿತವಾಗಿ ನಿರ್ಮಿಸುವುದಕ್ಕಾಗಿ ಮೈಸೂರು ಸಂಸ್ಥಾನದ ರಾಜಮನೆತನ ನೀಡಿರುವ ಕೊಡುಗೆ ಅಪಾರವಾಗಿದೆ. ಕೆಆರ್‍ಎಸ್ ಅಣೆಕಟ್ಟೆ ನಿರ್ಮಾಣ, ಕಾಲೇಜುಗಳು, ಆಸ್ಪತ್ರೆಗಳು ನಿರ್ಮಾಣ ಮಾಡುವುದರೊಂದಿಗೆ ಸುಸಜ್ಜಿತ ರಸ್ತೆಯನ್ನು ನಿರ್ಮಾಣ ಮಾಡಿಕೊಡುವ ಮೂಲಕ ನಗರದ ಜನತೆಗೆ ರಾಜ ಮನೆತನ ಕೊಡುಗೆ ನೀಡಿರುವುದನ್ನು ನಾವು ಸ್ಮರಿಸ ಬೇಕು. ಪಾಲಿಕೆ ನೌಕರರ ಸಹಕಾರ ಸಂಘವು ಶತ ಮಾನೋತ್ಸವ ಸಮಾರಂಭವನ್ನು ಆಚರಿಸಿಕೊಳ್ಳು ತ್ತಿರುವುದು ಶ್ಲಾಘನೀಯವಾಗಿದೆ. ನಾನು 3 ಬಾರಿ ಪಾಲಿಕೆ ಸದಸ್ಯನಾಗಿದ್ದ ಸಂದರ್ಭದಿಂದಲೂ ಸಹ ಕಾರ ಸಂಘ ಉತ್ತಮವಾಗಿ ಸಾಗುತ್ತಿದ್ದುದ್ದನ್ನು ಗಮ ನಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಲಾಭಗಳಿಸು ವುದರೊಂದಿಗೆ ಸಂಘದ ಸದಸ್ಯರಿಗೂ ನೆರವಾಗುವ ಕಾರ್ಯಕ್ರಮಗಳನ್ನು ರೂಪಿಸುವತ್ತ ಗಮನ ಕೇಂದ್ರೀಕರಿಸಬೇಕೆಂದು ಅವರು ಸಲಹೆ ನೀಡಿದರು.

ನಗರ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣ ಗಳಿಂದ ಸಂಕಷ್ಟದಲ್ಲಿ ಸಹಕಾರ ಸಂಘಗಳು ಸಿಲು ಕುತ್ತಿರುವ ನಿದರ್ಶನಗಳು ನಮ್ಮ ಮುಂದೆ ಇವೆ. ಈ ನಡುವೆ ಸವಾಲುಗಳನ್ನು ಹಿಮ್ಮೆಟ್ಟಿ ಮೈಸೂರು ಮಹಾನಗರಪಾಲಿಕೆ ನೌಕರರ ಸಹಕಾರ ಸಂಘವು ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತೋಷಕರ ಸಂಗತಿಯಾಗಿದೆ. ಈ ಸಂಘವು ದ್ವಿಶತಕದ ಸಂಭ್ರಮವನ್ನು ಆಚರಿಸಿಕೊಳ್ಳಲಿ ಎಂದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ 20 ಮಂದಿ ಹಿರಿಯ ಸಹಕಾರಿಗಳಿಗೆ ಸನ್ಮಾನಿಸಲಾಯಿತು. ಅಲ್ಲದೆ ಶತಮಾನೋತ್ಸವದ ಹಿನ್ನೆಲೆಯಲ್ಲಿ ಸಂಘದ ಸದ ಸ್ಯರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಈ ಹಿಂದೆ ನಡೆಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಮೈಸೂರು ಮಹಾನಗರಪಾಲಿಕೆ ನೌಕರರ ಸಹಕಾರ ಸಂಘದ ಅಧ್ಯಕ್ಷ ಬಿ.ವೆಂಕಟರಾಮು ಅಧ್ಯ ಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಹೆಚ್ಚುವರಿ ಆಯುಕ್ತ ರವೀಂದ್ರ, ಉಪ ಆಯುಕ್ತ ಶಿವಾನಂದ ಮೂರ್ತಿ, ಸಂಘದ ಉಪಾಧ್ಯಕ್ಷೆ ಶ್ರೀದೇವಿ, ಖಜಾಂಚಿ ಜವರೇ ಗೌಡ, ಪದಾಧಿಕಾರಿಗಳಾದ ಎಂ.ಎಸ್. ದೊಡ್ಡಯ್ಯ, ಎಂ.ಬಸವಣ್ಣ, ಬಿ.ಭಾಸ್ಕರ್, ಶಂಭು, ಮಹಾ ಲಕ್ಷ್ಮೀ, ಬಿ.ರಾಜು, ಎನ್.ಮಂಜುನಾಥ್ ಸೇರಿ ದಂತೆ ಇನ್ನಿತರರು ಪಾಲ್ಗೊಂಡಿದ್ದರು.

Translate »