ಸಿಇಟಿ ಸೀಟು ಹಂಚಿಕೆ: ಮೊದಲ ಹಂತದ ಪ್ರವೇಶ ಪ್ರಕ್ರಿಯೆಗೆ ವೇಳಾಪಟ್ಟಿ ಪ್ರಕಟ
ಮೈಸೂರು

ಸಿಇಟಿ ಸೀಟು ಹಂಚಿಕೆ: ಮೊದಲ ಹಂತದ ಪ್ರವೇಶ ಪ್ರಕ್ರಿಯೆಗೆ ವೇಳಾಪಟ್ಟಿ ಪ್ರಕಟ

November 22, 2020

ಬೆಂಗಳೂರು, ನ.21- ಪ್ರಸಕ್ತ ಸಾಲಿನ ಮೊದಲ ಹಂತದ ವೃತ್ತಿ ಶಿಕ್ಷಣ ಪ್ರವೇಶ ಕುರಿತ ಸಿಇಟಿ ವೇಳಾಪಟ್ಟಿ ಪ್ರಕಟಿಸಲಾಗಿದೆ.

ಭಾನುವಾರದಿಂದ ಇದೇ 25ರವರೆಗೆ ಇಂಜಿನಿಯರಿಂಗ್, ವಾಸ್ತುಶಿಲ್ಪ, ಕೃಷಿ ವಿಜ್ಞಾನ, ಪಶು ಸಂಗೋಪನೆ, ಡಿ-ಫಾರ್ಮಾ ಕೋರ್ಸ್‍ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸೀಟು ಹಂಚಿಕೆ ನಡೆಯಲಿದೆ. ಕೆಸಿಇಟಿ ಆಯ್ಕೆ ಪ್ರವೇಶ ನವೆಂಬರ್ 22 (ಮಧ್ಯಾಹ್ನ 2)ರಿಂದ ನವೆಂಬರ್ 25 (ಬೆಳಿಗ್ಗೆ 11) ರವರೆಗೆ, ಕೆಸಿಇಟಿ ಅಣಕು ಸೀಟು ಹಂಚಿಕೆ ನವೆಂಬರ್ 26 (ಮಧ್ಯಾಹ್ನ 2ರ ನಂತರ), ಕೆಸಿಇಟಿ ಆಯ್ಕೆ ನಮೂದನ್ನು ಬದಲಿಸುವ ಸೌಲಭ್ಯದ ಅವಧಿ ನವೆಂಬರ್ 26 (ಸಂಜೆ 4)ರಿಂದ ನವೆಂಬರ್ 28(ಬೆಳಿಗ್ಗೆ 11)ರವರೆಗೆ, ಕೆಸಿಇಟಿ ಸೀಟು ಹಂಚಿಕೆ 2020ರ ಒಂದನೇ ರೌಂಡ್ ನವೆಂಬರ್ 29 ಸಂಜೆ 4ರ ನಂತರ, ನಿಯೋ ಜಿತ ಅಭ್ಯರ್ಥಿಗಳ ಆಯ್ಕೆಗಳ ಪ್ರಕ್ರಿಯೆ ನವೆಂಬರ್ 30 ರಿಂದ ಡಿಸೆಂಬರ್ 1, 2020 ರವರೆಗೆ, ನಿಗದಿಪಡಿಸಿದ ಅಭ್ಯರ್ಥಿಗಳಿಂದ ಶುಲ್ಕ ಪಾವತಿ ನವೆಂಬರ್ 30 ರಿಂದ ಡಿಸೆಂಬರ್ 2, 2020 ರವರೆಗೆ, ನಿಗದಿಪಡಿಸಿದ ಸಂಸ್ಥೆಯಲ್ಲಿ ಹಾಜರಾಗಲು ಕೊನೆಯ ದಿನಾಂಕ ಡಿಸೆಂಬರ್ 2 (ಸಂಜೆ 5:30 ರ ಮೊದಲು).

ಅಗತ್ಯವಾದ ದಾಖಲೆಗಳು: ಕೆಸಿಇಟಿ 2020 ಸಮಾ ಲೋಚನೆಯ ಸಮಯದಲ್ಲಿ ಅಭ್ಯರ್ಥಿಗಳು ಕೆಸಿಇಟಿ ಅರ್ಜಿ ಮುದ್ರಿತ ನಮೂನೆ, ಅರ್ಜಿ ಶುಲ್ಕ ಪಾವತಿ ರಶೀದಿ / ವಹಿವಾಟು ಐಡಿ, ಕೆಸಿಇಟಿ ಅಡ್ಮಿಟ್ ಕಾರ್ಡ್, ಎಸ್‍ಎಸ್‍ಎಲ್‍ಸಿ / 10ನೇ ತರಗತಿ ಅಂಕಪಟ್ಟಿ, ದ್ವಿತೀಯ ಪಿಯುಸಿ / 12ನೇ ತರಗತಿ ಅಂಕಪಟ್ಟಿ, ಎರಡು ಇತ್ತೀಚಿನ ಪಾಸ್ಪೋರ್ಟ್ ಅಳತೆಯÀ ಫೆÇೀಟೋಗಳು, ಸಂಬಂಧಪಟ್ಟ ಬಿಇಒ / ಡಿಡಿಪಿಐ ಸಹಿ ಮಾಡಿದ ಸ್ಟಡಿ ಸರ್ಟಿಫಿಕೇಟ್, ಇನ್ನು ಅಗತ್ಯವಿರುವ ಕೆಲ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.

Translate »