ಇಂದು ಸಿಇಟಿ ಫಲಿತಾಂಶ
ಮೈಸೂರು

ಇಂದು ಸಿಇಟಿ ಫಲಿತಾಂಶ

June 1, 2018

ಬೆಂಗಳೂರು: ಈ ಬಾರಿಯ ಸಿಇಟಿ ಫಲಿತಾಂಶ ನಾಳೆ (ಶುಕ್ರವಾರ) ಮಧ್ಯಾಹ್ನ 1 ಗಂಟೆಗೆ ಪ್ರಕಟಗೊಳ್ಳಲಿದೆ.
ಮಧ್ಯಾಹ್ನ 3 ಗಂಟೆ ವೇಳೆಗೆ ವೆಬ್‍ಸೈಟ್ ಗಳಲ್ಲೂ ಫಲಿತಾಂಶ ಲಭ್ಯವಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಪ್ರಕಟಣೆಯಲ್ಲಿ ತಿಳಿಸಿದೆ. ಸಿಇಟಿ ಫಲಿ ತಾಂಶವನ್ನು ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ನಾಳೆ ಪ್ರಕಟಿಸಲಿದ್ದಾರೆ. ಇದರೊಂದಿಗೆ ರಾಜ್ಯದ ವೃತ್ತಿ ಪರ ಶಿಕ್ಷಣ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆಗೆ ಚಾಲನೆಯು ದೊರೆಯಲಿದೆ. ಕಳೆದ ಏಪ್ರಿಲ್ 18ರಿಂದ 20ರವರೆಗೆ ರಾಜ್ಯಾದ್ಯಂತ ಸಿಇಟಿ ನಡೆದಿತ್ತು. ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ವೆಬ್‍ಸೈಟ್: http://kea.kar.nic.in

http://cet.kar.nic.in

http://karresults.nic.in

Translate »