ರೌಡಿಗಳ ಹಾವಳಿ ಹತ್ತಿಕ್ಕಿ
ಮೈಸೂರು

ರೌಡಿಗಳ ಹಾವಳಿ ಹತ್ತಿಕ್ಕಿ

June 1, 2018

ಬೆಂಗಳೂರು: ಆಡಳಿತದಲ್ಲಿ ಹಸ್ತ ಕ್ಷೇಪ ಮಾಡುವುದಿಲ್ಲ. ನಗರ ಪ್ರದೇಶಗಳಲ್ಲಿ ರೌಡಿ ಚಟುವಟಿಕೆ ನಿಯಂತ್ರಿಸಿ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಿರಿಯ ಪೊಲೀಸ್ ಅಧಿ ಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿ ದಂತೆ ವಿಧಾನಸೌಧದ ಸಮಿತಿ ಕೊಠಡಿ ಯಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆ ಸಿದ ಅವರು, ಸರ್ಕಾರ ಬದಲಾವಣೆ ಯಾಗಿದೆ. ನಿಮ್ಮ ಮೇಲೆ ನಾವು ಯಾವುದೇ ಒತ್ತಡ ಹೇರುವುದಿಲ್ಲ. ಸ್ವತಂತ್ರವಾಗಿ ಕಾರ್ಯ ನಿರ್ವಹಿಸಿ. ನೀವು ಅನುಭವಿ ಗಳಿದ್ದೀರಿ. ಕಾನೂನು-ಸುವ್ಯವಸ್ಥೆ ಬಗ್ಗೆ ನಿಮಗೆ ಅರಿವಿರುತ್ತದೆ. ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಆಗಬಹುದಾದ ಅನಾಹುತ ಗಳನ್ನು ತಡೆಯಿರಿ. ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಿ, ನಿಮ್ಮ ಯಾವುದೇ ವಿಚಾರದಲ್ಲಿ ನಾವು
ಹಸ್ತಕ್ಷೇಪ ಮಾಡುವುದಿಲ್ಲ. ಅದೇ ರೀತಿ ರಾಜ್ಯದ ಜನತೆ ಶಾಂತಿ ಮತ್ತು ನೆಮ್ಮದಿಯಿಂದ ಬಾಳಲು ನೀವು ಕ್ರಮ ಕೈಗೊಳ್ಳಿ. ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ರೌಡಿಗಳ ಉಪಟಳ ಹೆಚ್ಚಾಗುತ್ತಿದೆ. ಇದರ ಮೇಲೆ ನಿಯಂತ್ರಣ ಸಾಧಿಸದಿದ್ದರೆ, ಮುಂದೆ ದೊಡ್ಡ ಅನಾಹುತಕ್ಕೆ ಸಿಲುಕಬೇಕಾಗುತ್ತದೆ. ರೌಡಿಗಳು ಯಾರೂ, ಅವರ ಹಿಂದೆ ಇರುವವರು ಎಂತಹವರು, ಅವರ ದೈನಂದಿನ ಚಟುವಟಿಕೆಗಳ ಬಗ್ಗೆ ಮಾಹಿತಿ ಇರುತ್ತದೆ. ಕಾನೂನು ಕೈಗೆತ್ತಿಕೊಳ್ಳುವವರನ್ನು ಸದೆಬಡಿಯಿರಿ. ನಿಮಗೆ ನಮ್ಮ ಪೂರ್ಣ ಬೆಂಬಲವಿದೆ ಎಂದು ತಿಳಿಸಿದ್ದಾರೆ. ಇಲಾಖೆಯಲ್ಲಿ ನಾವು ರಾಜಕೀಯ ಹಸ್ತಕ್ಷೇಪ ಮಾಡುವುದಿಲ್ಲ. ನೀವು ರಾಜಕೀಯ ಹಸ್ತಕ್ಷೇಪಕ್ಕೆ ಒಳಗಾಗಬೇಡಿ. ಮತ್ತೆ ನಿಮ್ಮೊಂದಿಗೆ ಸಭೆ ನಡೆಸಿ ಸುದೀರ್ಘ ಸಮಾಲೋಚನೆ ಮಾಡುತ್ತೇನೆ ಎಂದು ಹೇಳಿದ ಅವರು, ದಕ್ಷತೆಯಿಂದ ಕೆಲಸ ನಿರ್ವಹಿಸುವಂತೆ ಸೂಚಿಸಿದರು.

Translate »