ಮೈಸೂರಲ್ಲಿ ಇಂದಿನಿಂದ ಮಾವು, ಹಲಸು ಮೇಳ
ಮೈಸೂರು

ಮೈಸೂರಲ್ಲಿ ಇಂದಿನಿಂದ ಮಾವು, ಹಲಸು ಮೇಳ

June 1, 2018

ಮೈಸೂರು:  ಸಾಂಸ್ಕøತಿಕ ನಗರಿ ಮೈಸೂರಿನ ಜನತೆಗೆ ಒಂದೇ ಸ್ಥಳದಲ್ಲಿ ಬಗೆ ಬಗೆಯ ಮಾವಿನ ಹಣ್ಣುಗಳ ರುಚಿ ಸವಿಯುವ ಸದಾವ ಕಾಶ ಬಂದಿದೆ. ಜೂ 1ರಿಂದ 5ರವರೆಗೆ ಅರಮನೆ ಸಮೀಪವಿರುವ ಕರ್ಜನ್ ಪಾರ್ಕ್‍ನಲ್ಲಿ ನಡೆಯಲಿರುವ ಮಾವು ಮತ್ತು ಹಲಸಿನ ಮೇಳದಲ್ಲಿ 24 ಮಳಿಗೆ ಗಳಲ್ಲಿ 12 ಬಗೆಯ ಮಾವಿನ ಹಣ್ಣು ಮಾರಾಟ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ ಕೆಲವು

ವರ್ಷಗಳಿಂದ ನಡೆಯುತ್ತಿರುವ ಮಾವು ಮೇಳ ಹೆಚ್ಚು ಪ್ರಸಿದ್ಧಿ ಪಡೆದಿದ್ದು, ವಿವಿಧ ಬಗೆಯ ಮಾವಿನ ಹಣ್ಣುಗಳನ್ನು ಒಂದೇ ವೇದಿಕೆಯಲ್ಲಿ ದೊರೆಯುತ್ತಿದ್ದ ಹಿನ್ನೆಲೆಯಲ್ಲಿ ಜನರು ಮುಗಿಬಿದ್ದು ಹಣ್ಣುಗಳನ್ನು ಖರೀದಿಸಿ ಸಂಭ್ರಮಿಸಿದ್ದರು. ಈ ಹಿನ್ನೆಲೆಯಲ್ಲಿ ನಾಳೆ(ಜೂ.1)ಯಿಂದ ಮೈಸೂರಿನ ಕರ್ಜನ್ ಪಾರ್ಕ್‍ನಲ್ಲಿ ಆರಂಭವಾಗಲಿರುವ ಮಾವು ಮತ್ತು ಹಲಸಿನ ಮೇಳ ಜೂ.5ರವರೆಗೂ ನಡೆಯಲಿದೆ. ತೋಟಗಾರಿಕಾ ಇಲಾಖೆ ಆಯೋಜಿಸುತ್ತಿರುವ ಈ ಮೇಳದಲ್ಲಿ ಒಟ್ಟು 28 ಮಳಿಗೆಗಳಿದ್ದು, ಅವುಗಳಲ್ಲಿ 24 ಮಳಿಗೆಗಳಲ್ಲಿ ಮಾವಿನ ಹಣ್ಣು, ಎರಡು ಮಳಿಗೆಗಳಲ್ಲಿ ಹಲಸಿನ ಹಣ್ಣುಗಳು ದೊರೆಯಲಿವೆ. ಉಳಿದ ಎರಡು ಮಳಿಗೆಗಳಲ್ಲಿ ಇಲಾಖೆ ನರ್ಸರಿಗಳಲ್ಲಿರುವ ವಿವಿಧ ಹಣ್ಣು, ಹೂವು ಹಾಗೂ ಇನ್ನಿತರ ಗಿಡಗಳನ್ನು ಮಾರಾಟ ಮಾಡುವುದಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ.

12 ಬಗೆಯ ಹಣ್ಣುಗಳು ಲಭ್ಯ: ಮಾವು ಮೇಳದಲ್ಲಿ ಸ್ಥಳೀಯ ಮಾವು ಬೆಳೆಗಾರರೇ ಪಾಲ್ಗೊಳ್ಳುತ್ತಿದ್ದಾರೆ. ಬಾದಾಮಿ, ಬಂಗನಪಲ್ಲಿ, ರಸಪುರಿ, ಮಲ್ಲಿಕಾ, ಸೆಂದೂರ, ಮಲಗೋವಾ, ತೋತಾಪುರಿ, ಸಕ್ಕರೆಗುತ್ತಿ, ನೀಲಂ, ಆಮ್ರಪಾಲಿ, ಕೇಸರ್, ದಶೇರಿ, ರಾಜೇಶ್ವರಿ ಸೇರಿದಂತೆ ಇನ್ನಿತರ ತಳಿಗಳ ಮಾವಿನ ಹಣ್ಣುಗಳನ್ನು ಮಾರಾಟ ಮಾಡಲಿದ್ದಾರೆ.

Translate »