ಜೂ.14ಕ್ಕೆ ಚಾಮುಲ್ ಚುನಾವಣೆ
ಚಾಮರಾಜನಗರ

ಜೂ.14ಕ್ಕೆ ಚಾಮುಲ್ ಚುನಾವಣೆ

June 3, 2022

ಚಾಮರಾಜನಗರ, ಜೂ.2-ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಚಾಮುಲ್)ದ ಎರಡನೇ ಅವಧಿಯ ನಿರ್ದೇಶಕರ ಸ್ಥಾನಗಳಿಗೆ ಜೂ.14ರಂದು ಚುನಾವಣೆ ನಡೆಯಲಿದ್ದು, ಅಧಿಕಾರಕ್ಕಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ.

ಚಾಮರಾಜನಗರ ತಾಲೂಕಿನ 2 ಸ್ಥಾನ, ಗುಂಡ್ಲುಪೇಟೆ ತಾಲೂಕು 2, ಹನೂರು ತಾಲೂಕು 2, ಕೊಳ್ಳೇಗಾಲ, ಯಳಂದೂರು ಹಾಗೂ ಮಹಿಳಾ ಸಂಘಗಳ ಕ್ಷೇತ್ರಗಳ ತಲಾ ಒಂದೊಂದು ಸ್ಥಾನ ಸೇರಿದಂತೆ ಒಟ್ಟು 9 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆ ಯಲಿದೆ. ಈಗಾಗಲೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಈವರೆಗೆ ಒಟ್ಟು 8 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.

ಜೂ.6, ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು, ಜೂ.7ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಜೂ.8 ನಾಮ ಪತ್ರ ಹಿಂಪಡೆಯಲು ಕೊನೆ ದಿನವಾಗಿದೆ.

ಜೂ.14ರಂದು ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ಚಾಮರಾಜನಗರ ತಾಲೂಕಿನ ಕುದೇರು ಗ್ರಾಮದ ಬಳಿ ಇರುವ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಸಂಕೀರ್ಣದಲ್ಲಿ ಮತದಾನ ನಡೆ ಯಲಿದೆ. ಅಂದೇ(ಜೂ.14) ಮತ ಎಣಿಕೆ ಕಾರ್ಯ ನಡೆದು, ಫಲಿತಾಂಶ ಪ್ರಕಟವಾಗಲಿದೆ.
2015ರಲ್ಲಿ ಅಸ್ತಿತ್ವಕ್ಕೆ ಬಂದ ಚಾಮುಲ್‍ನ ಮೊದಲ ಆಡಳಿತ ಮಂಡಳಿಗೆ 2017ರ ಜೂನ್‍ನಲ್ಲಿ 8 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಆಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷದ ಬೆಂಬಲಿತರು ಗೆಲುವು ಸಾಧಿಸಿ ಅಧಿಕಾರ ನಡೆಸಿದ್ದರು. ಈಗ ಹನೂರು ತಾಲೂಕಿನ 1 ನಿರ್ದೇಶಕ ಸ್ಥಾನ ಹೆಚ್ಚಾಗಿ ರುವ ಕಾರಣ ಒಟ್ಟು 9 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ರಾಜ್ಯ ಸರ್ಕಾರ ಒಬ್ಬರನ್ನು ನಾಮನಿರ್ದೇ ಶನದ ಮೂಲಕ ನೇಮಕ ಮಾಡಲಿದ್ದು, ಪಶುಸಂಗೋಪನಾ ಇಲಾಖೆಯ ಪ್ರತಿ ನಿಧಿ, ಸಹಕಾರ ಇಲಾಖೆಯ ಪ್ರತಿನಿಧಿ ಹಾಗೂ ಕರ್ನಾಟಕ ಹಾಲು ಒಕ್ಕೂಟ ಮಹಾಮಂಡಳಿಯ ಪ್ರತಿನಿಧಿಗೆ ಅಧ್ಯಕ್ಷರ ನೇಮಕದ ಸಂದರ್ಭದಲ್ಲಿ ಮತದಾನದ ಹಕ್ಕಿದ್ದು, ಅಧ್ಯಕ್ಷರ ಆಯ್ಕೆ ವೇಳೆ ಒಟ್ಟು 13 ಮಂದಿಗೆ ಮತದಾನದ ಹಕ್ಕು ಇದೆ.ಚುನಾವಣೆಯಲ್ಲಿ ಗೆದ್ದು, ಅಧಿಕಾರವನ್ನು ಮತ್ತೊಮ್ಮೆ ಹಿಡಿಯಬೇಕೆಂದು ಪಣತೊಟ್ಟಿ ರುವ ಕಾಂಗ್ರೆಸ್, ಜಿಲ್ಲೆಯ ಎಲ್ಲಾ ಸ್ಥಾನಗಳಿಗೆ ತನ್ನ ಬೆಂಬಲಿತ ಅಭ್ಯರ್ಥಿಗಳನ್ನು ಈಗಾ ಗಲೇ ಆಯ್ಕೆ ಮಾಡಿದೆ. ಆದರೆ ಬಿಜೆಪಿ ತನ್ನ ಬೆಂಬಲಿತರನ್ನು ಇನ್ನು ಸಹ ಅಂತಿಮ ಗೊಳಿಸಿಲ್ಲ. ಕಾಂಗ್ರೆಸ್ ತನ್ನ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವು ದರಿಂದ ಆ ಪಕ್ಷದ ಬೆಂಬಲಿತ ಅಭ್ಯರ್ಥಿ ಗಳು ಮತದಾರರನ್ನು ಭೇಟಿ ಮಾಡಿ ಮತಯಾಚನೆಯಲ್ಲಿ ತೊಡಗಿದ್ದಾರೆ. ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಲು ಇಚ್ಛಿ ಸಿರುವವರೂ ಸಹ ಮತ ಬೇಟೆಯಲ್ಲಿ ತೊಡಗಿದ್ದಾರೆ. ಚುನಾವಣೆಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇರುವುದ ರಿಂದ ಹಾಗೂ ನಾಮಪತ್ರ ಸಲ್ಲಿಕೆ ಪೂರ್ಣಗೊಂಡ ನಂತರ ಚುನಾವಣೆಯ ಕಾವು ಮತ್ತಷ್ಟು ಏರಿಕೆ ಆಗಲಿದೆ.
ಜಿಲ್ಲೆಯ ಚಾಮುಲ್‍ನ 9 ನಿರ್ದೇಶಕರ ಸ್ಥಾನಗಳಿಗೆ ಜೂ. 14ರಂದು ಮತದಾನ ನಡೆಯಲಿದೆ. ಜಿಲ್ಲೆಯ 5 ತಾಲೂಕಿ ನಿಂದ 365 ಮತದಾರರು ಮತದಾನ ಮಾಡಲು ಅರ್ಹರಾಗಿದ್ದಾರೆ. ಮಹಿಳಾ ಸಂಘಗಳ ಕ್ಷೇತ್ರದಿಂದ 84 ಮತದಾರರು ಹಕ್ಕು ಚಲಾಯಿಸಲು ಅರ್ಹರಾಗಿದ್ದು, ಜಿಲ್ಲೆಯಲ್ಲಿ ಒಟ್ಟು 449 ಮಂದಿ ಮತದಾನ ಮಾಡ ಬಹುದಾಗಿದೆ. ಸರ್ಕಾರ ಒಬ್ಬರನ್ನು ನಾಮ ನಿರ್ದೇಶಿತ ನಿರ್ದೇಶಕರನ್ನು ನೇಮಕ ಮಾಡಲಿದೆ. ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಚುನಾಯಿತ ರಾದ 9 ನಿರ್ದೇಶಕರು, ಒಬ್ಬರು ನಾಮನಿರ್ದೇಶಕರು ಹಾಗೂ ಮೂವರು ಅಧಿಕಾರಿಗಳು ಸೇರಿದಂತೆ ಒಟ್ಟು 13 ಜನರಿಗೆ ಮತದಾನ ಮಾಡಬಹುದಾಗಿದೆ. -ಎಂ.ರಾಜಶೇಖರಮೂರ್ತಿ,
ಚಾಮುಲ್ ವ್ಯವಸ್ಥಾಪಕ ನಿರ್ದೇಶಕ.

Translate »