ಶ್ರದ್ಧಾ ಭಕ್ತಿಯಿಂದ ನೆರವೇರಿದ ಚಾಮುಂಡೇಶ್ವರಿ ಅಮ್ಮನ ತೆಪ್ಪೋತ್ಸವ
ಮೈಸೂರು

ಶ್ರದ್ಧಾ ಭಕ್ತಿಯಿಂದ ನೆರವೇರಿದ ಚಾಮುಂಡೇಶ್ವರಿ ಅಮ್ಮನ ತೆಪ್ಪೋತ್ಸವ

October 12, 2022

ಮೈಸೂರು, ಅ.11(ಎಂಕೆ)- ಮೈಸೂರು ಚಾಮುಂಡಿ ಬೆಟ್ಟದ ದೇವಿಕೆರೆಯಲ್ಲಿ ತಾಯಿ ಚಾಮುಂಡೇಶ್ವರಿ ಅಮ್ಮ ನವರ ತೆಪೆÇ್ಪೀತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ರಾತ್ರಿ ಶ್ರದ್ಧಾ-ಭಕ್ತಿಯಿಂದ ನೆರವೇರಿತು.

ಬೆಳಗ್ಗೆ ಅಮ್ಮನವರ ಪಲ್ಲಕ್ಕಿ ಉತ್ಸವವು ಪೂಜಾ ಕೈಂಕರ್ಯದೊಂದಿಗೆ ದೇವಸ್ಥಾನದಿಂದ ಹೊರಟು ರಥದ ಬೀದಿಯ ಮೂಲಕ ಸಾಗಿ ದೇವಿಕೆರೆ ಅಂಗ ಳಕ್ಕೆ ಮೆರವಣಿಗೆ ಮೂಲಕ ಬಂದು ತಲುಪಿತು. ನಂತರ ಸಂಜೆಯವರೆಗೂ ವಿವಿಧ ಪೂಜೆ-ಪುನಸ್ಕಾರ ದೊಂದಿಗೆ ಅವಭೃತ ತೀರ್ಥಸ್ನಾನ ಮಾಡಿಸಲಾ ಯಿತು. 7 ಗಂಟೆ ವೇಳೆಗೆ ವಿದ್ಯುತ್ ದೀಪಾಲಂಕಾರ ದಿಂದ ಕಂಗೊಳಿಸುತ್ತಿದ್ದ ತೆಪ್ಪದಲ್ಲಿ ತಾಯಿ ಚಾಮುಂಡೇ ಶ್ವರಿ ಉತ್ಸವ ಮೂರ್ತಿಯನ್ನಿರಿಸಿ, 7.30ರವರೆಗೂ ದೇವಿಕೆರೆಯಲ್ಲಿ 3 ಸುತ್ತು ಪ್ರದಕ್ಷಿಣೆ ಹಾಕಿಸಲಾ ಯಿತು. ಈ ವೇಳೆ ಆಗಮಿಸಿದ್ದ ಸಾವಿರಾರು ಭಕ್ತರು ಚಾಮುಂಡೇಶ್ವರಿ ದರ್ಶನ ಪಡೆದರಲ್ಲದೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹಲವರು ಅಮ್ಮನವರ ಮೂರ್ತಿಯನ್ನು ಮೊಬೈಲ್‍ಗಳ ಮೂಲಕ ಸೆರೆ ಹಿಡಿಯುತ್ತಿದ್ದರೆ, ಮತ್ತೊಂದೆಡೆ ಪೆÇಲೀಸ್ ಬ್ಯಾಂಡ್‍ನಿಂದ ಹೊರಹೊಮ್ಮಿದ ಸಂಗೀತದ ಕಂಪು ನೆರೆದಿದ್ದ ಭಕ್ತರಿಗೆ ಮುದ ನೀಡಿತು. ದೇವಿಕೆರೆಯನ್ನು 3 ಸುತ್ತು ಪ್ರದಕ್ಷಿಣೆ ಹಾಕಿದ ನಂತರ ಅಮ್ಮನವರ ಉತ್ಸವ ಮೂರ್ತಿಯನ್ನು ತೆಪ್ಪದಿಂದ ತಂದು 7.40ರ ವೇಳೆಗೆ ಚಿನ್ನದ ಪಲ್ಲಕ್ಕಿಯಲ್ಲಿರಿಸಿ, ಪೂಜೆ ನೆರವೇರಿಸಲಾಯಿತು. ಅಲ್ಲಿಂದ ಅಮ್ಮನವರ ಚಿನ್ನದ ಪಲ್ಲಕ್ಕಿ ಉತ್ಸವ ವಿವಿಧ ಮಂತ್ರ ಘೋಷಗಳೊಂದಿಗೆ ದೇವಿಕೆರೆ ಅಂಗಳದಿಂದ ಮೆರವಣಿಗೆ ಮೂಲಕ ರಾತ್ರಿ 8.40ಕ್ಕೆ ಸ್ವಸ್ಥಾನ ತಲುಪಿತು. ನಂತರ ದೇವಾಲಯದೊಳಗೆ ಧ್ವಜಾ ಅರೋಹಣ ನಡೆಸಿ, ಮೂಗ ಬಲಿ ಹಾಗೂ ಮೂಲ ದೇವಿ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು.

ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಭಾಗಿ: ಚಾಮುಂಡೇಶ್ವರಿ ಅಮ್ಮನವರ ತೆಪೆÇ್ಪೀತ್ಸವದಲ್ಲಿ ಭಾಗವಹಿಸಿದ್ದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಚಾಮುಂಡಿ ತಾಯಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮೊಬೈಲ್‍ನಲ್ಲಿ ತೆಪ್ಪೋತ್ಸವದ ಫೋಟೊ ತೆಗೆದುಕೊಂಡು ಖುಷಿಪಟ್ಟರು. ಚಾಮುಂಡೇಶ್ವರಿ ದೇವಸ್ಥಾನದ ಮುಖ್ಯ ಅರ್ಚಕ ಡಾ.ಎನ್.ಶಶಿಶೇಖರ ದೀಕ್ಷಿತ್, ಕಾರ್ಯನಿರ್ವಾಹಣಾಧಿಕಾರಿ ಗೋವಿಂದರಾಜು ಮತ್ತಿತ್ತರರು ಉಪಸ್ಥಿತರಿದ್ದರು.

Translate »