ಉಜ್ಜಯಿನಿಯ ಮಹಾಕಾಲ ಕಾರಿಡಾರ್‍ನ ಮೊದಲ ಹಂತ ಉದ್ಘಾಟಿಸಿದ ಮೋದಿ
News

ಉಜ್ಜಯಿನಿಯ ಮಹಾಕಾಲ ಕಾರಿಡಾರ್‍ನ ಮೊದಲ ಹಂತ ಉದ್ಘಾಟಿಸಿದ ಮೋದಿ

October 12, 2022

ಭೋಪಾಲ್, ಅ.11- ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ 856 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮಹಾಕಾಲ ಕಾರಿಡಾರ್‍ನ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಉದ್ಘಾಟಿಸಿದರು.

ಮಧ್ಯ ಪ್ರದೇಶ ರಾಜಧಾನಿ ಭೋಪಾಲ್‍ನಿಂದ ಸುಮಾರು 200 ಕಿಮೀ ದೂರದಲ್ಲಿರುವ ಉಜ್ಜಯಿನಿಯಲ್ಲಿ ಇಂದು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸಂಜೆ 7 ಗಂಟೆ ಸುಮಾರಿಗೆ ಪ್ರಧಾನಿ ಮೋದಿ ಅವರು ಮಹಾಕಾಲ ಕಾರಿ ಡಾರ್‍ನ ಮೊದಲ ಹಂತ – ‘ಮಹಾಕಲ್ ಲೋಕ’ ಉದ್ಘಾ ಟಿಸಿದರು. ಮಹಾಕಾಲ್ ಲೋಕ ಕಾರಿಡಾರ್‍ನ ಮೊದಲ ಹಂತದ ಉದ್ಘಾಟನೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. 2ನೇ ಹಂತದ ಮೆಗಾ ಕಾರಿಡಾರ್ ಅಭಿ ವೃದ್ಧಿ ಯೋಜನೆಯ ಭಾಗವಾಗಿ ಮಹಾಕಾಳೇಶ್ವರ ದೇವಸ್ಥಾನದ ಬಳಿ ಇರುವ ಪಾರಂಪರಿಕ ಕಟ್ಟಡದಲ್ಲಿ ಪಂಚತಾರಾ ಹೋಟೆಲ್ ನಂತಹ ಸೌಲಭ್ಯದೊಂದಿಗೆ 40 ಕೊಠಡಿಗಳ ಧರ್ಮಶಾಲಾ ವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಉನ್ನತ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ. ಉಜ್ಜಯಿನಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಮಹಾಕಾಳೇಶ್ವರ ದರ್ಶನ ಪಡೆಯಲು 856 ಕೋಟಿ ವೆಚ್ಚದಲ್ಲಿ ‘ಮಹಾಕಲ್ ಲೋಕ’ ಅನ್ನು ಅಭಿವೃದ್ಧಿಪಡಿಸ ಲಾಗಿದ್ದು, ಕಾರಿಡಾರ್‍ನಲ್ಲಿ 190ಕ್ಕೂ ಹೆಚ್ಚು ಶಿವನ ಪ್ರತಿಮೆ ಗಳನ್ನು ಕೆತ್ತಲಾಗಿದೆ. 12 ಮೀ. ಅಗಲದ ಪ್ರದೇಶವನ್ನು ಪಾದ ಚಾರಿಗಳ ಓಡಾಟಕ್ಕೆ ಮೀಸಲಿಡಲಾಗಿದೆ. ಆಂಬುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳು ಚಲಿಸುವುದಕ್ಕೂ ವ್ಯವಸ್ಥೆ ಇದೆ.

 

Translate »