ಚಾಟ್ ಮಸಾಲ ಇದು ಲಾಕ್‍ಡೌನ್ ಸಿನಿಮಾ
ಸಿನಿಮಾ

ಚಾಟ್ ಮಸಾಲ ಇದು ಲಾಕ್‍ಡೌನ್ ಸಿನಿಮಾ

June 5, 2020

ಲಾಕ್‍ಡೌನ್ ಸಮಯದಲ್ಲಿ ಅನೇಕರು ಕೊರೊನಾ ಜಾಗೃತಿ ಮೂಡಿಸುವ ಅನೇಕ ವಿಡಿಯೋ ತುಣುಕುಗಳನ್ನು ಮಾಡಿದ್ದಾರೆ. ಆದರೆ ಎಲ್ಲರಿಗಿಂತ ಮುಂಚೆ ಅಮಿತಾಭ್‍ಬಚ್ಚನ್ ಆರು ನಿಮಿಷದ ವಿಡಿಯೋವೊಂದನ್ನು ಏಪ್ರಿಲ್ ಮೊದಲ ವಾರವೇ ಮಾಡಿದ್ದರು. ಅದರಿಂದ ಪ್ರೇರಿತರಾಗಿ ಹಲವರು ಇಂಥಾ ಪ್ರಯೋಗಗಳನ್ನು ಮಾಡಿದರು. ಇವೆಲ್ಲಾ ನಾಲ್ಕು, ಐದು ನಿಮಿಷಗಳ ವಿಡಿಯೋಗಳಾಗಿದ್ದವು. ಇದೀಗ ಸಂಗೀತ ನಿರ್ದೇಶಕ, ಸಾಹಿತಿ ವಿ.ಮನೋಹರ್ ಅವರು ಒಂದು ಸಿನಿಮಾವನ್ನೇ ಮಾಡಿದ್ದಾರೆ. 45 ನಿಮಿಷಗಳ ಅವಧಿಯ ಚಿಕ್ಕ ಚಲನಚಿತ್ರವನ್ನೇ ನಿರ್ಮಿಸಿ ಯೂ ಟ್ಯೂಬ್ ನಲ್ಲಿ ರಿಲೀಸ್ ಮಾಡಿದ್ಧಾರೆರೆ. ಅದರ ಹೆಸರು ಚಾಟ್ ಮಸಾಲಾ. ಲಾಕ್ಡೌನ್ ಅವಧಿಯಲ್ಲಿ ಯಾರೂ ಚಲನಚಿತ್ರ ನಿರ್ಮಿಸುವ ಸಾಹಸ ಮಾಡಿದ್ದಿಲ್ಲ.

ಈ ಸಿನಿಮಾದ ವಿಶೇಷತೆಗಳ ಕುರಿತಂತೆ ಮಾತನಾಡಿದ ನಿರ್ದೇಶಕ ವಿ.ಮನೋಹರ್ ಚಾಟ್ ಮಸಾಲಾ ಒಂದು ಸಂಗೀತಮಯ ಚಿತ್ರವಾಗಿದ್ದು, ಒಟ್ಟು 20 ಹಾಡುಗಳನ್ನೊಳ ಗೊಂಡಿದೆ. ಹಾಡಿನಿಂದಲೇ ಪ್ರಾರಂಭವಾಗುವ ಈ ಚಿತ್ರ ಹಾಡಿನಿಂದಲೇ ಮುಕ್ತಾಯಗೊಳ್ಳುತ್ತದೆ. ನಾನೇ ಹಾಡು ಗಳನ್ನು ರಚಿಸಿ, ರಾಗ ಸಂಯೋಜನೆ ಮಾಡಿ, ಸಂಗೀತ ಜೋಡಿಸಲು ಗೆಳೆಯರಿಗೆ ಕೊಟ್ಟೆ. ಈ ಹಾಡುಗಳಿಗೆ 9 ಜನ ಪೆÇ್ರೀಗ್ರಾಮಿಂಗ್ ಮಾಡಿದ್ಧಾರೆರೆ. ಏಪ್ರಿಲ್ ಕೊನೆ ವಾರ ದಲ್ಲಿಯೇ ನನ್ನ ಕೆಲಸ ಪ್ರಾರಂಭಿಸಿದ್ದರೂ ಸಂಗೀತಗಾರರ ಕೆಲಸ ಸ್ವಲ್ಪ ತಡವಾಯಿತು. ಆಗ ಯಾವುದೇ ಸ್ಟುಡಿಯೋನೂ ತೆರೆಯುವ ಹಾಗಿರಲಿಲ್ಲ. ರೆಕಾರ್ಡಿಂಗ್ ಬಂದ್ ಆಗಿತ್ತು. ಯಾರು ಮನೆಯಲ್ಲಿ ಸ್ಟುಡಿಯೋ ಇಟ್ಟು ಕೊಂಡಿದ್ಧಾರೆರೋ ಅಂಥವರನ್ನೇ ಹುಡುಕಿ ರೆಕಾರ್ಡಿಂಗ್ ಮಾಡಬೇಕಾಗಿತ್ತು. ನಂತರ ಅದನ್ನು ಕಲಾವಿದರಿಗೆಲ್ಲ ವಾಟ್ಸಪ್ ಮೂಲಕ ಕಳಿಸಿ, ನಿಮ್ಮ ಮೊಬೈಲ್‍ನಲ್ಲಿಯೇ ಶೂಟ್ ಮಾಡಿ ಕಳಿಸಿ ಎಂದೆ. ಇಲ್ಲೂ ಕೆಲವು ತಾಂತ್ರಿಕ ದೋಷಗಳಿಂ ದಾಗಿ ತಡವಾಯಿತು. ಚಿತ್ರದಲ್ಲಿ ಕಥೆ ಅಂತ ಏನಿಲ್ಲ. ಲಾಕ್ಡೌನ್ ಸಮಯದಲ್ಲಿ ನಮ್ಮ ಇಂದ್ರಿಯಗಳು, ಹೊಟ್ಟೆಯ ಅವಯವ ಗಳು, ತಮ್ಮ-ತಮ್ಮ ಕಷ್ಟ-ಸುಖವನ್ನು ಹೇಳಿಕೊಳ್ಳುತ್ತವೆ. ಪ್ರತಿ ಅಂಗಾಂಗ ಇಲ್ಲಿ ಮನುಷ್ಯ ರೂಪದಲ್ಲಿ ಅಭಿನಯಿಸುತ್ತವೆ. ಉದಾಹರಣೆಗೆ ಎರಡು ಕಣ್ಣುಗಳ ಪಾತ್ರವನ್ನು ಇಬ್ಬರು ಹುಡುಗಿಯರು ಮಾಡಿದ್ಧಾರೆರೆ. ಎರಡು ಕಿವಿಗಳ ಪಾತ್ರವನ್ನು ಕೂಡ ಇನ್ನಿಬ್ಬರು ಹುಡುಗಿಯರು ಮಾಡಿದ್ಧಾರೆರೆ. ನಾಲಿಗೆಯ ಪಾತ್ರವನ್ನು ಶುಭ ರಕ್ಷಾ ಮಾಡಿದ್ಧಾರೆರೆ. ಮೂಗಿನ ಪಾತ್ರದಲ್ಲಿ ಮೂಗು ಸುರೇಶ್, ಹಲ್ಲುಗಳ ಪಾತ್ರದಲ್ಲಿ ಮೈಸೂರು ರಮಾನಂದ ಮತ್ತು ರಂಗನಾಥ್ ಕಾಣಿಸಿಕೊಂಡಿದ್ಧಾರೆರೆ. ಇಂದ್ರಿಯಗಳ ಮತ್ತು ಹೊಟ್ಟೆಯೊಳಗಿನ ಅವಯವಗಳ ಮೀಟಿಂಗ್‍ನ್ನು ಕೊರೊನಾ ನೋಡುತ್ತಾನೆ. ಕೊರೊನಾ ಪಾತ್ರವನ್ನು ಮಿಮಿಕ್ರಿ ದಯಾನಂದ್ ಮಾಡಿದ್ಧಾರೆರೆ. ಜಾದೂಗಾರ ಕುದ್ರೋಳಿ ಗಣೇಶ್ ಮೆದುಳಿನ ಪಾತ್ರ ಮಾಡಿದ್ಧಾರೆರೆ ಎಂದು ಹೇಳಿದರು.

ಸುಮ್ಮನೆ ಕೂರೋ ಬದಲು ಏನಾದರೂ ಮಾಡಬೇಕೆಂದು ಯೋಚಿಸಿದೆ. ಈವರೆಗೆ ಮ್ಯೂಸಿಕಲ್ ಚಿತ್ರವನ್ನು ಯಾರೂ ಮಾಡಿಲ್ಲ ಎಂಬುದನ್ನು ತಿಳಿದು, ಈ ಪ್ರಯತ್ನಕ್ಕೆ ಕೈಹಾಕಿದೆ. ನನ್ನ ಮಾತಿಗೆ ಬೆಲೆಕೊಟ್ಟು 23 ಕಲಾವಿದರು ಇದರಲ್ಲಿ ಅಭಿನಯಿಸಿದ್ಧಾರೆರೆ. ಅವರಿಗೆಲ್ಲ ನಾನು ಚಿರಋಣಿ. 14 ಜನ ಗಾಯಕ-ಗಾಯಕಿಯರು, ಒಂಬತ್ತು ಜನ ಸಂಗೀತಗಾರರು ಇದಕ್ಕಾಗಿ ದುಡಿದಿದ್ಧಾರೆರೆ.

ಈ ಚಿತ್ರ ಇವರೆಲ್ಲರ ಶ್ರಮದ ಫಲ. ಇಲ್ಲಿ ಕ್ಯಾಮರಾಮ್ಯಾನ್ ಇಲ್ಲ, ಲೈಟಿಂಗ್ ಇಲ್ಲ, ಮೇಕಪ್ ಇಲ್ಲ, ಗ್ರಾಫಿಕ್ಸ್ ಇಲ್ಲ, ಸ್ಟುಡಿಯೋ ಇಲ್ಲ, ಅವರವರದೇ ಉಡುಪುಗಳು, ಕಲಾವಿದರೆಲ್ಲ ಅವರವರ ಮನೆಯಲ್ಲೇ ಸ್ನೇಹಿತರ, ಮನೆಯ ಇತರೆ ಸದಸ್ಯರ ಮೂಲಕ ಮೊಬೈಲ್‍ನಲ್ಲಿ ಶೂಟಿಂಗ್ ಮಾಡಿಕೊಟ್ಟರು. ಹಾಗಾಗಿ ಮಾಮೂಲಿ ಚಲನಚಿತ್ರಗಳ ಗುಣಮಟ್ಟ, ದೃಶ್ಯ ವೈಭವಗಳನ್ನೆಲ್ಲ ಇದರಲ್ಲಿ ನಿರೀಕ್ಷೆ ಮಾಡಬಾರದು. ತಮಾಷೆಗಾಗಿ ನೋಡಬೇಕಷ್ಟೇ ಎಂದು ನಿರ್ದೇಶಕ ಮನೋಹರ್ ವಿವರಿಸಿದರು.

Translate »