ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಾಲನೆ
ಹಾಸನ

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಾಲನೆ

February 27, 2019

ರೈತರಿಗಾಗಿ ಏಪ್ರಿಲ್‍ನಲ್ಲಿ ನೂತನ ಯೋಜನೆ ಜಾರಿ
ಹಾಸನ: ರೈತರು ಬೆಳೆ ಮಾಡಲು ತಮ್ಮಲ್ಲಿದ್ದ ಒಡವೆಗಳನ್ನು ಅಡವಿಟ್ಟು ಸಾಲ ಪಡೆಯುತ್ತಾರೆ. ಬೆಳೆ ನಾಶವಾದರೆ ನಿಗದಿತ ಸಮಯಕ್ಕೆ ಸಾಲ ಮತ್ತು ಬಡ್ಡಿ ಯನ್ನು ಕಟ್ಟದೆ ಒಡವೆ ಹರಾಜು ಹಾಕ ಲಾಗುತ್ತದೆ. ಸರ್ಕಾರವು ರೈತರಿಗೆ ನೆರ ವಾಗುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿ ಸುತ್ತಿದೆ. ಇದು ಏಪ್ರಿಲ್ ತಿಂಗಳಿನಿಂದ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಅರಕಲಗೂಡಿನಲ್ಲಿ 1,563 ಕೋಟಿ ರೂ. ಹೆಚ್ಚು ವೆಚ್ಚದಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರ ವೇರಿಸಿ ಅವರು ಮಾತನಾಡಿದರು.

ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರಕ ದಿದ್ದ ಸಂದರ್ಭದಲ್ಲಿ ಉತ್ಪನ್ನಗಳನ್ನು ಗೋದಾಮುಗಳಲ್ಲಿ ದಾಸ್ತಾನು ಮಾಡಲು ಬಾಡಿಗೆ ಹಾಗೂ ಸಾಗಾಣಿಕೆ ವೆಚ್ಚವನ್ನು ಸರ್ಕಾರವೇ ಭರಿಸುತ್ತ್ತಿದೆ. ದಾಸ್ತಾನು ಮಾಡಿದ ಉತ್ಪನ್ನದ ಮೇಲೆ ಶೇ.75ರಷ್ಟು ಸಾಲವನ್ನು ನೀಡಲಾಗುವುದು ಎಂದು ತಿಳಿಸಿದರು.

ಇದುವರೆಗೆ ರೈತರ ಸಾಲ ಮನ್ನಾ ಯೋಜನೆಯಡಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸಾಲ ಮಾಡಿದ್ದ 64 ಲಕ್ಷ ಕುಟುಂಬ ಗಳ ಫಲಾನುಭವಿಗಳ ಬ್ಯಾಂಕ್ ಖಾತೆಗೆ 2,363 ಕೋಟಿ ರೂ ಬಿಡುಗಡೆ ಮಾಡ ಲಾಗಿದೆ. ಅದೇ ರೀತಿ ಸಹಕಾರಿ ಬ್ಯಾಂಕ್ ಗಳಲ್ಲಿ ಸಾಲ ಪಡೆದಿರುವ 4 ಲಕ್ಷ ಕುಟುಂಬ ಗಳ ಫಲಾನುಭವಿಗಳ ಬ್ಯಾಂಕ್ ಖಾತೆಗೆ 1,800 ಕೋಟಿ ರೂ ಹಣ ಬಿಡುಗಡೆ ಮಾಡಲಾಗಿದೆ ಎಂದರು.

ಪ್ರತಿ ಲೀಟರ್ ಹಾಲಿಗೆ 5 ರೂ ಪ್ರೋತ್ಸಾಹ ಧನವನ್ನು 6 ರೂಗಳಿಗೆ ಏರಿಸಲಾಗಿದೆ. ರೈತರಿಗೆ 10 ಹೆಚ್.ಪಿ ವರೆಗೆ ಉಚಿತ ವಿದ್ಯುಚ್ಛಕ್ತಿ ನೀಡಲಾಗುತ್ತಿದೆ ಎಂದ ಅವರು, ಶುದ್ಧ ಕುಡಿಯುವ ನೀರು ಒದ ಗಿಸುವ ನಿಟ್ಟಿನಲ್ಲಿ ಮಾರ್ಚ್ 2 ರಂದು ಪಾವಗಡದಲ್ಲಿ 2 ಸಾವಿರ ಕೋಟಿ ರೂ. ವೆಚ್ಚದಡಿ ಕುಡಿಯುವ ನೀರಿಗೆ ಚಾಲನೆ ನೀಡಲಾಗುತ್ತಿದೆ ಎಂದರು.
ಮಾಜಿ ಪ್ರಧಾನಿ ಹಾಗೂ ಸಂಸದ ಹೆಚ್.ಡಿ.ದೇವೇಗೌಡ ಮಾತನಾಡಿ, ಸಕಾಲದಲ್ಲಿ ಮಳೆಬಾರದೆ ಬೆಳೆ ನಷ್ಟವಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭ ದಲ್ಲಿ ಸರ್ಕಾರವು 46 ಸಾವಿರ ಕೋಟಿ ರೂ ಸಾಲಮನ್ನಾ ಮಾಡಿದೆ ಎಂದರು.

ರಾಜ್ಯದಲ್ಲಿ 8 ಜಿಲ್ಲೆಗಳಲ್ಲಿ ತೆಂಗಿನ ಬೆಳೆ ಯನ್ನು ಆಶ್ರಯಿಸಿದ್ದಾರೆ. ಒಂದು ತೆಂಗಿನ ಮರವನ್ನು ಹತ್ತು ವರ್ಷ ಸಾಕಿ ದರೆ 100 ವರ್ಷ ಕುಟುಂಬಕ್ಕೆ ನೆರವಾಗು ತ್ತದೆ ಎಂದ ಅವರು, ನುಶಿ ಮತ್ತಿತರೆ ರೋಗಕ್ಕೆ ತುತ್ತಾಗಿರುವ ಒಂದು ಮರಕ್ಕೆ 500 ರೂ ಪರಿಹಾರ ನೀಡಲಾಗುತ್ತಿದೆ ಎಂದರು.

ಚಿನ್ನಕ್ಕಿಂತ ಬೆಲೆಬಾಳುವ ವಸ್ತು ನೀರು. ಇದನ್ನು ಸಮರ್ಪಕವಾಗಿ ಬಳಕೆ ಮಾಡಿ ಕೊಂಡು ಉತ್ತಮವಾದ ತೋಟಗಾರಿಕಾ ಬೆಳೆಗಳನ್ನು ಬೆಳೆದರೆ ರೈತರ ಬಾಳು ಬಂಗಾರ ವಾಗುತ್ತದೆ. ರಾಷ್ಟ್ರ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಐಕ್ಯತೆಯಿಂದ ಎದುರಿ ಸೋಣ ಎಂದರು. ಲೋಕೋಪಯೋಗಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ಮಾತನಾಡಿ, 1500 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಡಿ ಕಾಮಗಾರಿ ಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. 190 ಕೋಟಿ ರೂ. ವೆಚ್ಚದಡಿ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆಯಡಿ 150 ಕೆರೆಗಳು ಮತ್ತು 50 ಕಟ್ಟೆಗಳನ್ನು ತುಂಬಿ ಸಲಾಗುವುದು. 116 ಕೋಟಿ ರೂ. ವೆಚ್ಚ ದಡಿ ಹಾರಂಗಿ ಎಡದಂಡೆ ನಾಲೆ ಆಧು ನೀಕರಣ ಕಾಮಗಾರಿ ಕೈಗೊಳ್ಳಲಾಗಿರು ತ್ತಿದೆ. 380 ಕೋಟಿ ರೂ ವೆಚ್ಚದಲ್ಲಿ ಹೇಮಾವತಿ ಬಲ ಮೇಲ್ದಂಡೆ ನಾಲೆಯ ಆಧುನೀಕರಣ ಕಾಮಗಾರಿ ಪ್ರಾರಂಭಿಸ ಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಬಹುದಿನಗಳ ಬೇಡಿಕೆಯಾಗಿದ್ದ ಹಾಸನದ ಚನ್ನರಾಯಪಟ್ಟಣ ಕೆರೆ ಸೌಂದರ್ಯ ಕಾರ್ಯಕ್ಕೆ 144 ಕೋಟಿ ರೂಗಳಿಗೆ ಸಚಿವ ಸಂಪುಟ ಅನುಮತಿ ದೊರೆತಿದೆ. ಕಾಚೇನಹಳ್ಳಿ ಏತ ನೀರಾವರಿಗೆ 161 ಕೋಟಿ ರೂ.ಗಳಿಗೆ ಆಡಳಿ ತಾತ್ಮಕ ಅನುಮೋದನೆ ದೊರೆತಿದೆ ಎಂದರು.
ರಾಜ್ಯದಲ್ಲಿ ಒಂದು ಸಾವಿರ ಆಂಗ್ಲ ಮಾಧ್ಯಮದ ಸರ್ಕಾರಿ ಶಾಲೆಗಳನ್ನು ತೆರೆಯುವಂತೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದರಲ್ಲದೆ ಪ್ರತಿ ತಾಲೂಕಿಗೆ 4 ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆದು ಬಡವರ ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಓದಲು ಆವಕಾಶ ಕಲ್ಪಿಸಬೇಕು ಎಂದರು.

ಶಾಸಕ ಎ.ಟಿ.ರಾಮಸ್ವಾಮಿ ಮಾತ ನಾಡಿ, ಸರ್ಕಾರವು ಅಧಿಕಾರಕ್ಕೆ ಬಂದು 7 ತಿಂಗಳಲ್ಲಿ ಹಲವು ಹೊಸ ಯೋಜನೆ ಗಳನ್ನು ರೂಪಿಸಿದೆ. ಅರಕಲಗೂಡು ತಾಲೂಕಿನ ಹತ್ತು ಇಲಾಖೆಗಳಿಗೆ ಸಂಬಂ ಧಿಸಿದಂತೆ ಇಂದು 1563.25 ಕೋಟಿ ರೂ. ಗಳ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದ ಅವರು ತ್ವರಿತವಾಗಿ ಹೊಸ ಕಾಮಗಾರಿಗಳಿಗೆ ಅನುಮೋದನೆ ನೀಡಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ಮಂಜೂರಾಗಿರುವ ಎಲ್ಲಾ ಕಾಮ ಗಾರಿಗಳನ್ನು ನಿಗದಿತ ಅವಧಿಯೊಳಗೆ ಉತ್ತಮ ಗುಣಮಟ್ಟದಲ್ಲಿ ನಿರ್ಮಾಣ ಮಾಡುವ ಮೂಲಕ ಜನಸಾಮಾನ್ಯರ ಉಪಯೋಗಕ್ಕೆ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ, ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಶಾಸಕ ಸಿ.ಎನ್.ಬಾಲಕೃಷ್ಣ, ಮೈಸೂರು ದಕ್ಷಿಣ ವಲಯದ ಐ.ಜಿ.ವಿಜಯಕುಮಾರ್, ಜಿಲ್ಲಾಧಿಕಾರಿ ಅಕ್ರಂ ಪಾಷ್, ವಿವಿಧ ಮಠ ಗಳ ಸ್ವಾಮೀಜಿಗಳು ಹಾಗೂ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ವೇಳೆ ವಿವಿಧ ಇಲಾಖೆ ಯೋಜನೆಯಡಿ ಫಲಾ ನುಭವಿಗಳಿಗೆ ಸವಲತ್ತುಗಳನ್ನು ಸಾಂಕೇ ತಿಕವಾಗಿ ವಿತರಿಸಲಾಯಿತು.

‘ಕಾಯಕ’, ‘ಬಡವರ ಬಂಧು’ ರೈತರು-ಬಡವರಿಗೆ ಸಹಕಾರಿ
ಹಾಸನ: ‘ಕಾಯಕ’ ಹಾಗೂ ‘ಬಡವರ ಬಂಧು’ ಕಾರ್ಯ ಕ್ರಮಗಳು ರೈತರಿಗೆ, ಬಡವರ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷಿ ಪದ್ಧತಿಯಲ್ಲಿ ಬದಲಾವಣೆ ತರಬೇಕು. ಆಧುನಿಕ ಕೃಷಿ ಪದ್ಧತಿಯಿಂದ ಲಾಭ ದಾಯಕ ಕಾರ್ಯಕ್ರಮಗಳನ್ನು ಜಾರಿಗೆ ತರಲು ನಿರ್ಧರಿ ಸಲಾಗಿದೆ. ‘ಕಾಯಕ’ ಎಂಬ ಹೆಸರಿನಡಿಯಲ್ಲಿ ಗ್ರಾಮೀಣ ಪ್ರದೇಶದ ಸ್ವ ಸಹಾಯ ಗುಂಪುಗಳಿಗೆ 5 ಲಕ್ಷ ರೂ.ಗಳವರೆಗೆ ಬಡ್ಡಿರಹಿತ ಸಾಲ ನೀಡುವುದು. 5 ಲಕ್ಷ ಮೇಲ್ಟಟ್ಟು 10 ಲಕ್ಷ ದವರೆಗೆ ಶೇ. 3 ರಷ್ಟು ಬಡ್ಡಿದರದಡಿ ಸಾಲ ನೀಡುವುದರ ಜೊತೆಗೆ ಯಾವ ರೀತಿಯ ಕೆಲಸ ಮಾಡಬೇಕು ಎಂಬುದರ ಬಗ್ಗೆ ತಿಳುವಳಿಕೆ ನೀಡಲಾಗುವುದು ಎಂದರು.

‘ಬಡವರ ಬಂಧು’ ಕಾರ್ಯಕ್ರಮದಡಿಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ 10 ಸಾವಿರ ರೂ.ಗಳವರೆಗೆ ಸಾಲ ನೀಡ ಲಾಗುತ್ತಿದೆ. ಸರಿಯಾದ ರೀತಿಯಲ್ಲಿ ಸದ್ಬಳಕ್ಕೆ ಮಾಡಿಕೊಂಡು ನೆಮ್ಮದಿ ಬದುಕು ರೂಪಿಸಿಕೊಳ್ಳಬೇಕು. ಯುವ ಜನತೆಗೆ ಉದ್ಯೋಗ ಕಲ್ಪಿಸಬೇಕು ಎಂಬ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕೈಗಾರಿಕೆಗಳನ್ನು ತೆರೆಯಲಾಗುವುದು. ಕೊಪ್ಪಳ ಮತ್ತು ಬಳ್ಳಾರಿಯಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸ ಲಾಗುತ್ತಿದ್ದು ಒಂದು ಲಕ್ಷ ಉದ್ಯೋಗ ಸೃಷ್ಟಿ ಮಾಡಲಾಗುವುದು. ಮೊದಲ ಹಂತದಲ್ಲಿ 25ಸಾವಿರ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ತಿಳಿಸಿದರು.

Translate »