ನವದೆಹಲಿ, ಸೆ.30- ಕೇಂದ್ರ ಗೃಹ ಸಚಿವಾಲಯ ಅ.1ರಿಂದ ಜಾರಿಯಾಗು ವಂತೆ ಅನ್‍ಲಾಕ್ 5.0 ಮಾರ್ಗಸೂಚಿ ಬಿಡುಗಡೆಗೊಳಿಸಿದೆ. ನೂತನ ಮಾರ್ಗ ಸೂಚಿಯಂತೆ ಅ.15ರಿಂದ ಸಿನಿಮಾ ಥಿಯೇಟರ್, ಮಲ್ಟಿಫ್ಲೆಕ್ಸ್ ಥಿಯೇಟರ್, ಚಿತ್ರಮಂದಿರಗಳನ್ನು ಶೇ.50ರಷ್ಟು ಆಸನ ವ್ಯವಸ್ಥೆಯೊಂದಿಗೆ ಆರಂಭಿಸಲು ಅನುಮತಿ ಸಿದೆ. ಅಲ್ಲದೇ ಸ್ವಿಮ್ಮಿಂಗ್ ಪೂಲ್‍ಗಳನ್ನು ಸಹ ತೆರೆಯಲು ಅನುಮತಿಸಿದೆ. ಆದರೆ, ಕೊರೊನಾ ನಿಯಂತ್ರಣ ಮಾರ್ಗಸೂಚಿ ಪಾಲಿಸುವುದನ್ನು ಕಡ್ಡಾಯಗೊಳಿಸಿದೆ.
ಇನ್ನು ಶಾಲೆಗಳು ಮತ್ತು ಕೋಚಿಂಗ್ ಸಂಸ್ಥೆಗಳನ್ನು ಪುನಃ ತೆರೆಯುವುದಕ್ಕೆ ಸಂಬಂ ಧಿಸಿದಂತೆ, 2020ರ ಅ.15ರ ನಂತರ ರಾಜ್ಯ ಸರ್ಕಾರಗಳು ಪೆÇೀಷಕರು, ಶಿಕ್ಷಣ ಸಂಸ್ಥೆ ಗಳೊಂದಿಗೆ ಚರ್ಚಿಸಿ ತೆರೆಯಲು ಅವ ಕಾಶ ನೀಡಿದೆ. ಈ ಮೂಲಕ ಶಾಲಾ-ಕಾಲೇಜು ಗಳನ್ನು ತೆರೆಯಲು ರಾಜ್ಯ ಸರ್ಕಾರಗಳ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಿಟ್ಟಿದೆ.