ಶಾಸಕರ ಮುಂದೆ ಸಮಸ್ಯೆಗಳ ಸುರಿಮಳೆಗೈದ ನಾಗರಿಕರು
ಹಾಸನ

ಶಾಸಕರ ಮುಂದೆ ಸಮಸ್ಯೆಗಳ ಸುರಿಮಳೆಗೈದ ನಾಗರಿಕರು

December 2, 2018

ಬೇಲೂರು: ಬೇಲೂರು ಪುರ ಸಭಾ ವ್ಯಾಪ್ತಿಯ 1ನೇ ವಾರ್ಡ್ ಹೊಸ ನಗರಕ್ಕೆ ಶುಕ್ರವಾರ ಶಾಸಕ ಕೆ.ಎಸ್. ಲಿಂಗೇಶ್ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಶಾಸಕರಿಗೆ ಸಮಸ್ಯೆಗಳ ಸುರಿಮಳೆಗೈದರು.

ಶಾಸಕ ಕೆ.ಎಸ್.ಲಿಂಗೇಶ್, ಪುರಸಭೆ ಅಧ್ಯಕ್ಷೆ ಡಿ.ಆರ್.ಭಾರತಿ ಅರಣ್‍ಕುಮಾರ್, ಮುಖ್ಯಾಧಿಕಾರಿ ಮಂಜುನಾಥ್ ಮತ್ತು ಸದಸ್ಯರು ಹೊಸನಗರಕ್ಕೆ ಭೇಟಿ ನೀಡಿದ ವೇಳೆ, ಸ್ಥಳೀಯ ನಿವಾಸಿಗಳು ಶಾಸಕರಿಗೆ ಏನ್! ಸಾರ್ ನೀವು ಇವತ್ತು ಬಂದಿರಾ? ಕಳೆದ 25 ವರ್ಷದಿಂದ ಹೊಸನಗರ ಸಕಲ ಮೂಲಭೂತ ಸಮಸ್ಯೆಗಳ ಸುಳಿ ಯಲ್ಲಿ ಸಿಲುಕಿದೆ, ಸಂಬಂಧ ಪಟ್ಟ ಅಧಿ ಕಾರಿಗಳು ಹಾಗೂ ಜನಪ್ರತಿನಿಧಿ ಜಾಣ ಮೌನ ತಾಳಿದ್ದಾರೆ, 25 ವರ್ಷದಿಂದ ಒಳ ಚರಂಡಿ ವ್ಯವಸ್ಥೆ ಇಲ್ಲವಾಗಿದೆ, ಹೇಳಿ-ಕೇಳಿ ಹೊಸನಗರ ಎನ್ನುತ್ತಾರೆ, ಆದರೆ ಸಮಪರ್ಕ ರಸ್ತೆ,ಚರಂಡಿ ಇಲ್ಲದೆ ಹೊಸ ನಗರ ಗಬ್ಬುನಾರುತ್ತಿದೆ, ಬಸ್ ನಿಲ್ದಾಣ ವಿಲ್ಲ, ಹೊಸ ನಗರದಲ್ಲಿ ನಾಲ್ಕು ಪಾರ್ಕ್ ಗಳ ವ್ಯವಸ್ಥೆ ಇದ್ದರೂ, ಪುರಸಭೆ ಈಕಡೆ ಗಮನ ಬಗ್ಗೆ ನೀಡಿಲ್ಲ, ಈಗಾಗಲೇ ಪುರಸಭೆಗೆ ಸಂಬಂಧಪಟ್ಟ ಉದ್ಯಾನವನಗಳು ಒತ್ತು ವರಿಯಾಗಿದೆ, ಇಲ್ಲಿ ಬಹುತೇಕ ನಿವಾಸಿಗಳು ಕೂಲಿ ಕಾರ್ಮಿಕರು ಭದ್ರತೆ ಇಲ್ಲದೆ, ಅವರ ಕುಟುಂಬಗಳು ಹೀನ ಸ್ಥಿತಿಗೆ ಬಂದಿದೆ, ಸರ್ಕಾರದ ಸವಲತ್ತು ಜನರಿಗೆ ಸರಿಯಾಗಿ ತಲುಪುತ್ತಿಲ್ಲ, ಸುಮಾರು 750 ಕುಟುಂಬ ಗಳು ವಾಸವಿರುವ ಹೊಸನಗರಕ್ಕೆ ಶಾಸಕರು ಹೆಚ್ಚಿನ ಅನುದಾನ ನೀಡುವ ಮೂಲಕ ಸಮಗ್ರ ಅಭಿವೃದ್ದಿಗೆ ಮುನ್ನಡಿ ಬರೆಯ ಬೇಕು ಎಂದರು.
ಪುರಸಭಾ ಅಧ್ಯಕ್ಷೆ ಡಿ.ಆರ್.ಭಾರತಿ ಅರಣ್‍ಕುಮಾರ್ ಮಾತನಾಡಿ, ಹೊಸ ನಗರಕ್ಕೆ ಪ್ರಮುಖವಾಗಿ ಯುಜಿಡಿ ಸೌಲಭ್ಯ ಹಾಗೂ ರಸ್ತೆ ಮತ್ತು ಬಸ್ ನಿಲ್ದಾಣ ನಿರ್ಮಿಸಲು ಶಾಸಕರು ಹೆಚ್ಚಿನ ಅನುದಾನ ನೀಡಬೇಕು, ಸಾರ್ವಜನಿಕರು ಪುರಸಭೆ ಸ್ವಚ್ಛತೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಬೇಲೂರು ಪಟ್ಟಣದ 1ನೇ ವಾರ್ಡ್‍ನ ಹೊಸನಗರದ ಸಮಗ್ರ ಅಭಿವೃದ್ದಿಗೆ ನಾವು ಬದ್ದವಾಗಿದ್ದು, ಮೊದಲು ಅತ್ಯಾಧುನಿಕ ಶೈಲಿಯ ಯುಜಿಡಿ ಸೌಲಭ್ಯ ನೀಡಲು ಈಗಾಗಲೇ ಸರ್ವೆ ಕಾರ್ಯ ನಡೆಸಿದೆ, ವಿಶೇಷವಾಗಿ ನಾಲ್ಕು ಉದ್ಯಾನವನಗಳ ಮೂಲಭೂತ ಸವಲತ್ತುಗಳಿಗೆ ಪುರಸಭೆ ವಿಶೇಷ ಗಮನ ಹರಿಸಬೇಕು, ಸದ್ಯ ಮುಖ್ಯಮಂತ್ರಿ ನಿಧಿಯಲ್ಲಿ ಕೆಲಸ ವಿಳಂಬ ವಾಗಿದ್ದು, ತ್ವರೀತ ಕಾಮಗಾರಿ ಕೆಲಸಗಳಿಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ, ಸಾರ್ವಜನಿಕರು ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಸಹಕಾರ ನೀಡಬೇಕು, ವಿಶ್ವ-ವಿಖ್ಯಾತ ಪಟ್ಟಣದ ಸಮಗ್ರ ಅಭಿವೃದ್ದಿಗೆ ಇಂದಿನಿಂದ ಪುರ ಸಭಾ ವ್ಯಾಪ್ತಿಯ 23 ವಾರ್ಡ್‍ಗಳಿಗೆ ಭೇಟಿ ನೀಡಿ, ಜನ ಸಂಪರ್ಕ ಸಭೆಯನ್ನು ಕರೆದು, ಅಲ್ಲಿ ಜನರ ಸಮಸ್ಯೆಗಳನ್ನು ಆಲಿಸ ಲಾಗುತ್ತದೆ, ಸ್ಥಳೀಯರು ತಮ್ಮ ಸಮಸ್ಯೆ ಗಳನ್ನು ಜನ-ಸಂಪರ್ಕ ಸಭೆಯಲ್ಲಿ ಮನವಿ ಸಲ್ಲಿಸಿಬಹುದು ಎಂದರು.
ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾ ಧಿಕಾರಿ ಮಂಜುನಾಥ್, ಸದಸ್ಯ ಶ್ರೀನಿಧಿ, ಮಂಜುನಾಥ್, ಸ್ಥಳೀಯ ನಿವಾಸಿ ಗಳಾದ ನಾಗರಾಜು, ಪರಮೇಶ, ಹಾಲಪ್ಪ, ಅಬ್ದುಲ್ ಖಾನ್ ಇನ್ನು ಮುಂತಾ ದವರು ಹಾಜರಿದ್ದರು.

Translate »