ಪೌರ ಕಾರ್ಮಿಕರಸೇವೆ ಖಾಯಂಗೆಸಂಪುಟ ಒಪ್ಪಿಗೆ
News

ಪೌರ ಕಾರ್ಮಿಕರಸೇವೆ ಖಾಯಂಗೆಸಂಪುಟ ಒಪ್ಪಿಗೆ

September 20, 2022

ಬೆಂಗಳೂರು: ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿ ಪದ್ಧತಿಯಡಿ ವೇತನ ಪಡೆಯುತ್ತಿರುವ 11,133 ಪೌರ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸುವ ಮಹತ್ವದ ತೀರ್ಮಾ ನವನ್ನು ರಾಜ್ಯ ಸಚಿವ ಸಂಪುಟ ತೆಗೆದು ಕೊಂಡಿದೆ. ಇದರಿಂದ 302 ನಗರ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾ ಯತಿ ವ್ಯಾಪ್ತಿಯಲ್ಲಿನ 5533, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ 3673 ಹಾಗೂ ರಾಜ್ಯದ ಇತರ 10 ಮಹಾ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿನ 1927 ಪೌರ ಕಾರ್ಮಿಕರ ಸೇವೆ ಕಾಯಂ ಆಗಲಿದೆ. ವಿಶೇಷ ನೇಮಕಾತಿ ನಿಯಮಗಳಲ್ಲಿನ ಷರತ್ತು ಗಳು ಹಾಗೂ ಆರ್ಥಿಕ ಇಲಾಖೆಯ ಷರತ್ತುಗಳ ಅನ್ವಯ ಪೌರ ಕಾರ್ಮಿಕರ ಸೇವೆ ಖಾಯಂ ಆಗಲಿದ್ದು, ಆಕ್ಷೇಪಣೆ ಗಳನ್ನು ಆಹ್ವಾನಿಸಿ ಬಂದ ಆಕ್ಷೇಪಣೆ ಗಳನ್ನು ಪರಿಶೀಲಿಸಿ ಅಂತಿಮ ನಿಯಮ ಗಳನ್ನು ಗೆಜೆಟ್‍ನಲ್ಲಿ ಪ್ರಕಟಿಸುವಂತೆ ಸಚಿವ ಸಂಪುಟ ಸೂಚಿಸಿದೆ.

Translate »