ಅಲ್‍ಖೈದಾದೊಂದಿಗೆ ನಿಕಟ ಸಂಪರ್ಕ
News

ಅಲ್‍ಖೈದಾದೊಂದಿಗೆ ನಿಕಟ ಸಂಪರ್ಕ

July 26, 2022

ಬೆಂಗಳೂರು, ಜು.25- ರಾಜ್ಯ ಆಂತರಿಕ ಭದ್ರತಾ ವಿಭಾಗ (ಐಎಸ್‍ಡಿ), ಗುಪ್ತ ಚರ ವಿಭಾಗ ಹಾಗೂ ಸಿಸಿಬಿ ಪೊಲೀಸರ ವಿಶೇಷ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಬೆಂಗಳೂರಿನ ತಿಲಕ್‍ನಗರದಲ್ಲಿ ವಾಸ್ತವ್ಯ ಹೂಡಿದ್ದ ಅಲ್‍ಖೈದಾ ಉಗ್ರ ಸಂಘಟನೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಯುವಕನೋರ್ವನನ್ನು ಕಳೆದ (ಭಾನುವಾರ) ರಾತ್ರಿ ಬಂಧಿಸಿದೆ.

ಅಸ್ಸಾಂ ಮೂಲದ ಅಖ್ತರ್ ಹುಸೇನ್ (23) ಬಂಧಿತ ನಾಗಿದ್ದು, ಈತನಿಂದ ದೊರೆತ ಮಾಹಿತಿ ಮೇರೆಗೆ ತಮಿಳು ನಾಡಿನಲ್ಲಿ ಜುಬಾ ಎಂಬಾತನನ್ನು ಕರ್ನಾಟಕ ಪೊಲೀಸರು ಇಂದು (ಸೋಮವಾರ) ಬಂಧಿಸಿದ್ದು, ಬೆಂಗಳೂರಿಗೆ ಕರೆತರುತ್ತಿದ್ದಾರೆ. ಕಳೆದ ತಿಂಗಳು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದ ಉಗ್ರವಾದಿ ಫೈಜûಲ್ ಅಹಮ್ಮದ್‍ನೊಂದಿಗೆ ಅಖ್ತರ್ ಹುಸೇನ್ ನಂಟು ಹೊಂದಿದ್ದ. ಮೋಸ್ಟ್ ವಾಂಟೆಡ್ ಟೆರರ್ ಆಗಿದ್ದ ಫೈಜûಲ್ ಅಹಮ್ಮದ್ ಬಾಂಗ್ಲಾದೇಶದ ಮೂಲದವನಾಗಿದ್ದು, ಲಷ್ಕರ್-ಇ-ತೊಯ್ಬಾ ಸಂಘಟ ನೆಗೆ ಸೇರಿದವನಾಗಿದ್ದ ಎನ್ನಲಾಗಿದ್ದು, ಕೇಂದ್ರೀಯ ತನಿಖಾ ತಂಡ ಹಾಗೂ ಪಶ್ಚಿಮ ಬಂಗಾಳ ಪೊಲೀಸರು ನೀಡಿದ್ದ ರಹಸ್ಯ ವರದಿ ಆಧಾರದ ಮೇರೆಗೆ ಜಾಗೃತರಾದ ಬೆಂಗಳೂರು ಪೊಲೀಸರು ಭಾನುವಾರ ರಾತ್ರಿ ಅಖ್ತರ್ ಹುಸೇನ್‍ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್‍ರೆಡ್ಡಿ, ಮೂಲಭೂತವಾದಿಯಾಗಿದ್ದ ಅಖ್ತರ್ ಹುಸೇನ್ ಉಗ್ರ ಸಂಘಟನೆಗಳಿಗೆ ಸೇರಬೇಕು ಹಾಗೂ ಉಗ್ರಸಂಘಟನೆ ಗಳಿಗೆ ಸಹಾಯ ಮಾಡಬೇಕು ಎಂಬ ನಿಟ್ಟಿನಲ್ಲಿ ಆಸಕ್ತಿ ಹೊಂದಿದ್ದ. ಈ ಹಿನ್ನೆಲೆಯಲ್ಲಿ ಉಗ್ರರೊಂದಿಗೆ ಸಂಪರ್ಕ ಹೊಂದಲು ಪ್ರಯತ್ನಿಸಿ, ಅಲ್‍ಖೈದಾ ಸಂಘಟನೆಯೊಂದಿಗೆ ನಿಕಟ ಸಂಬಂಧ ಹೊಂದಿದ್ದ ಈತ ಕೆಲವೇ ತಿಂಗಳಲ್ಲಿ ದೊಡ್ಡ ದುಷ್ಕøತ್ಯ ಎಸಗಲು ತಯಾರಿ ನಡೆಸಿದ್ದ. ತೆಲಂಗಾಣ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳಿಂದ ಬಂದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸ ಲಾಗಿದೆ ಎಂದರು. ತಿಲಕ್‍ನಗರದ ಮನೆಯೊಂದರ ಮೂರನೇ ಮಹಡಿಯ ಕೊಠಡಿಯಲ್ಲಿ ಇತರೆ ನಾಲ್ವರೊಂದಿಗೆ ಅಖ್ತರ್ ಹುಸೇನ್ ವಾಸಿಸುತ್ತಿದ್ದ. ಈ ಐವರು ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ಅಖ್ತರ್ ಹುಸೇನ್ ನನ್ನು ಬಂಧಿಸಿದ ಪೊಲೀಸರು ಆತನೊಂದಿಗೆ ವಾಸವಿದ್ದ ಇತರೆ ನಾಲ್ವರನ್ನು ಕೂಡ ಸಿಸಿಬಿ ಟೆಕ್ನಿಕಲ್ ಸೆಲ್‍ನಲ್ಲಿ ವಿಚಾರಣೆಗೊಳಪಡಿಸಿದ್ದಾರೆ. ಬೆಂಗಳೂರಿನಲ್ಲೇ ಅಖ್ತರ್ ಹುಸೇನ್ ಸಹೋದರ ಆದಿಲ್ ಹುಸೇನ್ ಕೂಡ ವಾಸ ವಿದ್ದು, ಆತನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಬಂಧಿಸಲ್ಪಟ್ಟ ಅಖ್ತರ್ ಹುಸೇನ್‍ನನ್ನು ಪೊಲೀಸರು ಇಂದು ಎನ್‍ಐಎ ನ್ಯಾಯಾಲಯದಲ್ಲಿ ಹಾಜರುಪಡಿಸಿ ದರು. ಬಂಧನದ ವೇಳೆ ಅಖ್ತರ್ ಹುಸೇನ್ ಬಳಿ ಸಾಕಷ್ಟು ವಿದ್ಯುತ್ ಉಪಕರಣಗಳು ಪತ್ತೆಯಾಗಿವೆ. ಈತ ಅಸ್ಸಾಂ, ಚೆನ್ನೈ ಮುಂತಾದ ಕಡೆ ನಂಟು ಹೊಂದಿದ್ದು, ಹೆಚ್ಚಿನ ತನಿಖೆಯ ಅಗತ್ಯವಿದೆ ಎಂದು ಸಿಸಿಬಿ ಪೊಲೀಸರು ಮನವಿ ಮಾಡಿದ ಮೇರೆಗೆ ನ್ಯಾಯಾಧೀಶರು ಆತನನ್ನು 10 ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಿದ್ದಾರೆ. ಸಿಸಿಬಿ ಟೆಕ್ನಿಕಲ್ ಸೆಲ್‍ನಲ್ಲಿ ಅಖ್ತರ್ ಹುಸೇನ್‍ನನ್ನು ಪ್ರಾಥಮಿಕ ವಿಚಾರಣೆಗೊಳಪಡಿಸಿ, ಆತನ ಮೊಬೈಲ್ ಪರಿಶೀಲನೆ ನಡೆಸಿದ ವೇಳೆ ಈತ ತಮಿಳು ನಾಡಿನ ಜುಬಾ ಎಂಬಾತನ ಜೊತೆ ಸಂಪರ್ಕ ಹೊಂದಿರುವುದು ಬೆಳಕಿಗೆ ಬಂದಿದೆ. ಅಖ್ತರ್ ಹುಸೇನ್ ಮತ್ತು ಜುಬಾ ಉಗ್ರ ಸಂಘಟನೆಗಳ ಸಂಪರ್ಕದಲ್ಲಿದ್ದಾರೆ ಎಂಬುದಕ್ಕೆ ಪುರಾವೆ ದೊರೆತ ಹಿನ್ನೆಲೆಯಲ್ಲಿ ಕಳೆದ ರಾತ್ರಿಯೇ ಸಿಸಿಬಿ ಡಿಸಿಪಿ ಡಾ. ಹೆಚ್.ಡಿ. ಶರಣಪ್ಪ ನೇತೃತ್ವದ 4 ತಂಡಗಳು ಕಾರ್ಯಾಚರಣೆಗಿಳಿದಿವೆ. ಈ ತಂಡಕ್ಕೆ ಕೇಂದ್ರೀಯ ತನಿಖಾ ತಂಡವೂ ಕೂಡ ಕೈ ಜೋಡಿಸಿತ್ತು. ಇಂದು ಸಂಜೆ ವೇಳೆಗೆ ಜುಬಾನನ್ನು ಪತ್ತೆ ಹಚ್ಚಿದ ವಿಶೇಷ ತಂಡ ಆತನನ್ನು ಬಂಧಿಸಿ, ಬೆಂಗಳೂರಿಗೆ ಕರೆತರುತ್ತಿದೆ.

Translate »