ರಘು ಕೌಟಿಲ್ಯ ಮೈಲ್ಯಾಕ್ ಅಧ್ಯಕ್ಷ
ಮೈಸೂರು

ರಘು ಕೌಟಿಲ್ಯ ಮೈಲ್ಯಾಕ್ ಅಧ್ಯಕ್ಷ

July 26, 2022

ಮೈಸೂರು, ಜು. 25(ಆರ್‍ಕೆ)- ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ನಿಯಮಿತದ (ಮೈಲ್ಯಾಕ್) ಅಧ್ಯಕ್ಷರನ್ನಾಗಿ ಹಿರಿಯ ಬಿಜೆಪಿ ಮುಖಂಡ ರಘು ಕೌಟಿಲ್ಯ ಅವರನ್ನು ನೇಮಿಸಲಾಗಿದೆ.

ಆರ್.ರಘು ಈ ಹಿಂದೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಗಿದ್ದು, ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿ ಷತ್‍ಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸುವ ಸಲು ವಾಗಿ ರಾಜೀನಾಮೆ ಸಲ್ಲಿಸಿದ್ದರು. ಕರ್ನಾಟಕ ಮೃಗಾ ಲಯ ಪ್ರಾಧಿಕಾರದ ಅಧ್ಯಕ್ಷರಾಗಿ ಮಾಜಿ ಕಾರ್ಪೊ ರೇಟರ್ ಎಂ.ಶಿವಕುಮಾರ್, ಮೈಸೂರಿನ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಕೆ.ಆರ್. ನಗರ ತಾಲೂಕು ಎಂ.ಕೆ.ಶ್ರೀನಿವಾಸ್ (ಮಿರ್ಲೆ ಶ್ರೀನಿವಾಸಗೌಡ) ಹಾಗೂ ಕಾವೇರಿ ಅಚ್ಚುಕಟ್ಟು ಮತ್ತು ಅಭಿವೃದ್ಧಿ ಪ್ರಾಧಿಕಾರ (ಕಾಡಾ)ದ ಅಧ್ಯಕ್ಷ ರಾಗಿ ಚಾಮರಾಜನಗರದ ಜಿ. ನಿಜಗುಣರಾಜು, ಜೀವವೈವಿಧ್ಯ ಮಂಡಳಿ ಅಧ್ಯಕ್ಷರಾಗಿ ಕೊಡಗಿನ ರವಿಕಾಳಪ್ಪ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಅದೇ ರೀತಿ ಬೆಂಗಳೂರಿನ ಮೆ.ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ (ಎಂಸಿ ಅಂಡ್ ಎ) ಅಧ್ಯಕ್ಷರನ್ನಾಗಿ ಗದಗದ ಎಂ.ಎಸ್.ಕರೀಗೌಡ್ರ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮಕ್ಕೆ ಧರ್ಮಣ್ಣ ದೊಡ್ಡಮನಿ, ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮಕ್ಕೆ ಗುತ್ತಿಗನೂರು ವಿರುಪಾಕ್ಷಗೌಡ ಅವರನ್ನು ನೇಮಿಸಿ, ಸರ್ಕಾರ ಆದೇಶ ಹೊರಡಿಸಿದೆ.

Translate »