ಕಾಂಗ್ರೆಸ್‍ಗೆ ಸಿಎಂ ಇಬ್ರಾಹಿಂ ಗುಡ್‍ಬೈ
News

ಕಾಂಗ್ರೆಸ್‍ಗೆ ಸಿಎಂ ಇಬ್ರಾಹಿಂ ಗುಡ್‍ಬೈ

January 28, 2022

ಬೆಂಗಳೂರು,ಜ.27(ಕೆಎಂಶಿ) ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆಪ್ತ ಹಾಗೂ ಹಿರಿಯ ನಾಯಕ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ತೊರೆಯಲಿದ್ದಾರೆ

ವಿಧಾನಪರಿಷತ್ತಿನ ಪ್ರತಿಪಕ್ಷ ನಾಯ ಕತ್ವ ಸ್ಥಾನಕ್ಕೆ ಬಿ.ಕೆ.ಹರಿಪ್ರಸಾದ್ ಅವರ ನೇಮಕವಾಗುತ್ತಿದ್ದಂತೆ ಸಿಡಿದೆದ್ದಿರುವ ಇಬ್ರಾಹಿಂ, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ಗೂ ನನಗೂ ಮುಗಿದ ಅಧ್ಯಾಯ, ಮೂರು ವರ್ಷದ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದರು. ನನಗೆ ಸ್ಥಾನ ತಪ್ಪಿದ್ದರ ಬಗ್ಗೆ ಸಿದ್ದರಾಮಯ್ಯ ಉತ್ತರಿ ಸಬೇಕು. ದೆಹಲಿಯವರು ಏನು ಹೇಳಿದರು ಎನ್ನುವುದಕ್ಕೆ ನನ್ನ ಬಳಿ ದಾಖಲೆಗಳಿವೆ. ಸಿದ್ದರಾಮಯ್ಯ ಅವರಿಗಾಗಿ ದೇವೇಗೌಡ ರನ್ನು ಬಿಟ್ಟು ಬಂದೆ, ಅವರ ಸಂಕಷ್ಟ ಸಮಯದಲ್ಲಿ ಜೊತೆಯಲ್ಲೇ ನಿಂತು ಹೆಜ್ಜೆ ಹಾಕಿದ್ದೆ. ಆದರೆ ನನಗೆ ಅವರು ಮಾತ್ರ ಏನೂ ಮಾಡಲಿಲ್ಲ. ಕಾಂಗ್ರೆಸ್‍ನಲ್ಲಿ ಅವರೇ ತಬ್ಬಲಿಯಾಗಿದ್ದಾರೆ. ಚಾಮುಂ ಡೇಶ್ವರಿಯಲ್ಲಿ ಸೋಲುತ್ತಾರೆ ಎಂಬುದು
ಮನದಟ್ಟಾದ ಮೇಲೆ ನಾನೇ ಕರೆದುಕೊಂಡು ಹೋಗಿ ಬಾದಾಮಿಯಲ್ಲಿ ಕಣಕ್ಕಿಳಿಸಿದೆ. ಕಡಿಮೆ ಅಂತರದಿಂದ ಗೆದ್ದು, ಅವರು ರಾಜಕೀಯ ಪುನರ್‍ಜನ್ಮ ಪಡೆಯಲು ನಾನೇ ಕಾರಣ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ, ಕೈಗೆತ್ತಿಕೊಂಡ ಎಲ್ಲಾ ಜನಪರ ಕಾರ್ಯಕ್ರಮಗಳು ನಾನು ರೂಪಿಸಿದ ಕಾರ್ಯಕ್ರಮಗಳೇ ಆಗಿದ್ದವು ಎಂದರು. ಕಾಂಗ್ರೆಸ್ 120 ರಿಂದ 70ಕ್ಕೆ ಇಳಿಯಿತು. ಮುಂದೆ ಎಷ್ಟಕ್ಕೆ ಬರಲಿದೆ ಎಂದು ಕಾದು ನೋಡಿ ಎಂದು ಭವಿಷ್ಯ ನುಡಿದರು. ನನಗೆ ಎಲ್ಲರೂ ಕರೆ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರೂ ಮಾಡಿದ್ದಾರೆ. ನನ್ನ ಅಭಿಮಾನಿಗಳ ಜೊತೆ ಚರ್ಚೆ ಮಾಡಿ, ತಮ್ಮ ಮುಂದಿನ ರಾಜಕೀಯ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

Translate »