ಅಪರಾಧ ನಿಯಂತ್ರಣಕ್ಕೆ ಎಲ್ಲರೂ ಸಹಕರಿಸಿ ಎಸ್ಪಿ ಪ್ರಕಾಶ್‍ಗೌಡ ಮನವಿ
ಹಾಸನ

ಅಪರಾಧ ನಿಯಂತ್ರಣಕ್ಕೆ ಎಲ್ಲರೂ ಸಹಕರಿಸಿ ಎಸ್ಪಿ ಪ್ರಕಾಶ್‍ಗೌಡ ಮನವಿ

December 14, 2018

ಹಾಸನ: ಸಮಾಜದಲ್ಲಿ ವಿವಿಧ ರೀತಿಯಲ್ಲಿ ನಡೆಯುತ್ತಿರುವ ಅಪರಾಧ ನಿಯಂತ್ರಣಕ್ಕೆ ಎಲ್ಲರೂ ಸಹಕರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್‍ಗೌಡ ಮನವಿ ಮಾಡಿದರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಗರ ಪೊಲೀಸ್ ಠಾಣೆ ಸಂಯು ಕ್ತಾಶ್ರಯದಲ್ಲಿ ಗುರುವಾರ ಸಂಜೆ ಹಮ್ಮಿ ಕೊಳ್ಳಲಾಗಿದ್ದ ಹಾಸನ ಜಿಲ್ಲಾ ಪೊಲೀಸ್ ಅಪರಾಧ ತಡೆ ಮಾಸಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಪ ರಾಧ ತಡೆಯಲು ಮೊದಲು ಸಾರ್ವಜನಿ ಕರಲ್ಲಿ ಅರಿವು ಮೂಡಿಸಬೇಕು. ಅಪರಾಧ ಮಾಡಿದವನಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಅಪ ರಾಧ ಮಾಡುವ ಮೊದಲು ನಿಮ್ಮ ಕುಟುಂಬ ದವರನ್ನು ನೆನಪಿಸಿಕೊಂಡರೆ ತಪ್ಪು ಮಾಡಲು ಯಾರು ಹೋಗುವುದಿಲ್ಲ ಎಂದರು.
ಸಾರ್ವಜನಿಕರು ಕೂಡ ಕೆಲ ಎಚ್ಚರಿಕೆ ಗಳನ್ನು ಪಾಲಿಸಿದರೆ ಉತ್ತಮ ಎಂದು ಕಿವಿಮಾತು ಹೇಳಿದ ಅವರು, ಮನೆಯಲ್ಲಿ ನಗದು, ಬೆಲೆ ಬಾಳುವ ವಸ್ತುಗಳು ಇದ್ದರೆ ಬ್ಯಾಂಕಿನಲ್ಲಿ ಇಡುವ

ಮೂಲಕ ಸುರಕ್ಷತೆ ಕಾಪಾಡಿಕೊಳ್ಳಬಹುದು. ರಾತ್ರಿ ವೇಳೆ ಯಲ್ಲಿ ಯಾರಾದರೂ ಬಾಗಿಲು ತಟ್ಟಿದರೆ ಮೊದಲು ಕಿಟಿಕೆಯಿಂದ ನೋಡಿ, ಪರಿ ಚಯವಿದ್ದರೆ ಮಾತ್ರ ವಿಚಾರಿಸಿ ಬಾಗಿಲು ತೆಗೆಯಬೇಕು. ಮಹಿಳೆಯರು ಕೊರಳಿನ ಲ್ಲಿರುವ ಬೆಲೆ ಬಾಳುವ ಆಭರಣಗಳ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತ ಎಂದು ಸಲಹೆ ನೀಡಿದರು. ಮನೆಗಳಿಗೆ ಮತ್ತು ಶಾಪ್ ಗಳಿಗೆ ಸಿಸಿ ಟಿವಿ ಮತ್ತು ಡೋರ್ ಅಲ ರಾಮ್ ಅಳವಡಿಸಿಕೊಳ್ಳುವುದು ಒಳ್ಳೆ ಯದು. ಇಂತಹ ಜಾಗೃತಿ ಕಾರ್ಯಕ್ರಮ ಗಳನ್ನು ಎಲ್ಲೆಡೆ ಮಾಡುವುದರ ಮೂಲಕ ಸಮಾಜದ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್ ಅಧಿಕಾರಿ ನಂದಿನಿ ಮಾತನಾಡಿ, ಸಾರ್ವಜನಿಕರಲ್ಲಿ ಅಪರಾಧ ತಡೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇಂದು ಅಪರಾಧ ಎಂಬುದು ಬೆಳವಣಿಗೆ ಯಲ್ಲಿರುವ ಸಮಾಜವನ್ನು ಕುಂಠಿತ ಮಾಡುತ್ತಿದೆ. ಅಪರಾಧ ಆಗುವುದನ್ನು ತಪ್ಪಿ ಸುವ ಕೆಲಸ ಎಲ್ಲರೂ ಮಾಡಬೇಕು ಎಂದರು. ಮನೆಗೆ ಬೀಗ ಹಾಕಿದರೆ ಅಕ್ಕಪಕ್ಕದ ಮನೆ ಜೊತೆಗೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಸಂಚಾರಿ ನಿಯಮ ಪಾಲಿಸಬೇಕು. ವಾಹನ ಚಾಲನೆ ಮಾಡು ವವರು ಜೊತೆಯಲ್ಲಿ ವಾಹನದ ದಾಖಲೆ ಇಟ್ಟುಕೊಳ್ಳಿ. ಮರೆಯದೆ ವಿಮೆ ಮಾಡಿಸಿ ದರೆ ನಿಮ್ಮ ಜೀವಕ್ಕೆ ತೊಂದರೆ ಆದಾಗ ಕುಟುಂಬಕ್ಕೆ ನೆರವಾಗುತ್ತದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಅಪರಾಧ ತಡೆ ಮಾಡುವ ಕುರಿತು ಕರಪತ್ರ ಬಿಡುಗಡೆ ಗೊಳಿಸಲಾಯಿತು. ಇದೇ ವೇಳೆ ಭಾಗ ವಹಿಸಿದ್ದ ವಿವಿಧ ಜನಾಂಗದ ಮುಖಂ ಡರು, ನಗರಸಭೆ ಸದಸ್ಯರು, ಸಂಘದ ಮುಖಂಡರಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕೆಲ ಸಲಹೆಯನ್ನು ಪಡೆದು ಅದಕ್ಕೆ ಉತ್ತರ ಕೊಡಲಾಯಿತು.

ಈ ಸಂದರ್ಭದಲ್ಲಿ ಡಿವೈಎಸ್ಪಿ ಪುಟ್ಟ ಸ್ವಾಮಿ, ಶಶಿಧರ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಉದಯಕುಮಾರ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಜಿ.ಓ.ಮಹಾಂತಪ್ಪ, ವೃತ್ತ ನಿರೀಕ್ಷಕ ಸತ್ಯ ನಾರಾಯಣ್, ಸಬ್ ಇನ್ಸ್‍ಪೆಕ್ಟರ್ ಸುರೇಶ್, ಪ್ರಮೋದ್, ರೇಖಾಬಾಯಿ ಇನ್ನಿತರರಿದ್ದರು.

Translate »