ಡಿ.16ರಂದು ಅರಸೀಕೆರೆಯಲ್ಲಿ  ರಾಜ್ಯಮಟ್ಟದ ಸಂಗೀತ, ನೃತ್ಯೋತ್ಸವ
ಹಾಸನ

ಡಿ.16ರಂದು ಅರಸೀಕೆರೆಯಲ್ಲಿ ರಾಜ್ಯಮಟ್ಟದ ಸಂಗೀತ, ನೃತ್ಯೋತ್ಸವ

December 14, 2018

ಅರಸೀಕೆರೆ: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯ ದಲ್ಲಿ ರಾಜ್ಯ ಮಟ್ಟದ ಸಂಗೀತ ನೃತ್ಯೋತ್ಸವ ಡಿ.16ರಂದು ನಗರದಲ್ಲಿ ಆಯೋಜಿಸಲಾಗಿದೆ ಎಂದು ಕಸಾಪ ಕಾರ್ಯದರ್ಶಿ ಕೆ.ಎಸ್.ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.16ರಂದು ಸಂಜೆ 4.30ಕ್ಕೆ ನಗರದ ಶ್ರೀ ವೆಂಕಟೇಶ್ವರ ಕಲಾಭವನದಲ್ಲಿ ವಿವಿಧ ರೀತಿಯ ಸಾಂಸ್ಕøತಿಕ ಪ್ರಾಕಾರಗಳನ್ನು ಒಂದೆ ವೇದಿಕೆಯಲ್ಲಿ ಪ್ರಸ್ತುತಪಡಿಸುವ ಮೂಲಕ ಆ ಕಲೆಗಳಿಗೆ ಪ್ರಾಶಸ್ತ್ಯ ನೀಡಲಾಗುತ್ತಿದೆ. ಜನ ಸಾಮಾನ್ಯರಿಗೆ ಈ ಕಲೆಗಳನ್ನು ತಲುಪಿಸುವ ಸದುದ್ದೇಶದಿಂದ ಆಯೋಜಿಸಿದ್ದು, ಸದರಿ ಕಾರ್ಯಕ್ರಮವನ್ನು ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವ ಲಿಂಗೇಗೌಡರು ಉದ್ಘಾಟಿಸಲಿದ್ದಾರೆ. ವಿಶೇಷ ಉಪಸ್ಥಿತಿಯಲ್ಲಿ ಶಾಸಕ ಕೆ.ಎಸ್.ಲಿಂಗೇಶ್, ಜಿಪಂ ಅಧ್ಯಕ್ಷೆ ಶ್ರೀಮತಿ ಶ್ವೇತಾ ದೇವರಾಜ್ ಇವರುಗಳಿದ್ದು, ಅಧ್ಯಕ್ಷತೆಯನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷ ಶ್ರೀ ಫಯಾಜ್ ಖಾನ್ ಅವರು ವಹಿಸಲಿದ್ದಾರೆ.

ಸದರಿ ಕಾರ್ಯಕ್ರಮದಲ್ಲಿ ಕಲಾಶ್ರೀ ಹುಲಿಕಲ್ ನಾಗರಾಜ್ ಮತ್ತು ತಂಡದವರಿಂದ ಕಥಾಕೀರ್ತನ, ಶ್ರೀಮತಿ ಸೌಮ್ಯಶ್ರೀ ಆತ್ಮರಾಮ್, ತಿಪಟೂರು ಅವರಿಂದ ಗಮಕ, ಕೆಲ್ಲಂಗೆರೆ ಬಸವರಾಜು ಮತ್ತು ತಂಡದವರಿಂದ ಸ್ಯಾಕ್ಸೊಫೋನ್ ಜುಗಲ್ ಬಂದಿ, ಶ್ರೀಮತಿ ಪ್ರತಿಭಾ ಗೋನಾಳ್ ಮತ್ತು ತಂಡ ರಾಯ ಚೂರು ಅವರಿಂದ ವಚನ ಗಾಯನ, ಪಂಡಿತ್ ಅನಂತ ಕುಲಕರ್ಣಿ ಮತ್ತು ತಂಡ, ಬಾಗಲಕೋಟೆ ಅವರಿಂದ ದಾಸ ವಾಣಿ, ಕುಮಾರಿ ಪ್ರಿಯಾ ಸವಣೂರು ಮತ್ತು ತಂಡ ರಾಣಿ ಬೆನ್ನೂರು ಅವರಿಂದ ವಿಶೇಷ ನೃತ್ಯ ಕಾರ್ಯಕ್ರಮ ಹಾಗೂ ನಾಡಿನ ಖ್ಯಾತ ಗಾಯಕರುಗಳಾದ ವೈ.ಕೆ.ಮುದ್ದುಕೃಷ್ಣ, ಜೋಗಿ ಸುನೀತಾ, ಪಂಚಮ್ ಹಳಿಬಂಡಿ ಮತ್ತು ಶಶಿಕಲಾ ತಂಡ ದವರಿಂದ ಸುಗಮ ಸಂಗೀತ ಕಾರ್ಯಕ್ರಮ ಹಾಗೂ ಅನೇಕ ಸಾಂಸ್ಕøತಿಕ ಕಾರ್ಯಕ್ರಮಗಳ ಸಮಾಗಮದ ರಸಸ್ವಾದನೆಯನ್ನು ಒಂದೆ ವೇದಿಕೆಯಲ್ಲಿ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾಂಸ್ಕøತಿಕ ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಿದರು.

ಸಂಗೀತ ನೃತ್ಯ ಅಕಾಡೆಮಿ ಸಂಚಾಲಕ ಆನಂದ ಮಾದಲ ಗೆರೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಜಾವಗಲ್ ಪ್ರಸನ್ನಕುಮಾರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ವಿ.ಶಿವಮೂರ್ತಿ ಉಪಸ್ಥಿತರಿದ್ದರು.

Translate »