ಬೇಲೂರಲ್ಲಿ ಅಪರಾಧ ತಡೆ ಮಾಸಾಚರಣೆ
ಹಾಸನ

ಬೇಲೂರಲ್ಲಿ ಅಪರಾಧ ತಡೆ ಮಾಸಾಚರಣೆ

December 14, 2018

ಬೇಲೂರು: ಅಪರಾಧಗಳನ್ನು ನಿಯಂತ್ರಿಸುವಲ್ಲಿ ಪೊಲೀಸರಷ್ಟೆ ಪ್ರಮುಖವಾದ ಜವಾಬ್ದಾರಿ ಸಾರ್ವಜನಿಕರಿಗೂ ಇರುತ್ತದೆ ಎಂದು ಬೇಲೂರು ಪೊಲೀಸ್ ಠಾಣೆಯ ಪಿಎಸ್‍ಐ ಜಗದೀಶ್ ಹೇಳಿದರು.

ಹಾಸನ ಜಿಲ್ಲಾ ಪೊಲೀಸ್ ಹಾಗೂ ಬೇಲೂರು ಪೊಲೀಸ್ ಠಾಣೆ ವತಿಯಿಂದ ಸಾರ್ವಜನಿಕರು ಹಾಗೂ ಆಟೊ ಚಾಲಕರಿಗಾಗಿ ಏರ್ಪಡಿಸಿದ್ದ ಅಪರಾಧ ತಡೆ ಮಾಸಾಚರಣೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಪರಾಧ ತಡೆಯುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಅಪರಾಧ ನಿಯಂತ್ರಣಕ್ಕೆ ನಾಗರಿಕರು ಸಹಕಾರ ನೀಡಿದ್ದೇ ಆದರೆ ಸಂಪೂರ್ಣವಾಗಿ ಅಪರಾಧಗಳನ್ನು ತಡೆ ಗಟ್ಟಬಹುದಾಗಿದೆ ಹಾಗೂ ಅಪರಾಧಗಳನ್ನು ತಡೆಯುವ ಉದ್ದೇಶದಿಂದ ಉತ್ತಮವಾದ ಕಾನೂನು ಸುವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಎಂದರು.

ಸಾರ್ವಜನಿಕರು ಎಲ್ಲಿ ತನಕ ಮೋಸ ಹೋಗುತ್ತಾರೋ ಅಲ್ಲಿವರೆಗೂ ಮೋಸ ಮಾಡು ವವರು ಇದ್ದೇ ಇರುತ್ತಾರೆ. ಆದ್ದರಿಂದ ಪ್ರತಿಯೊಬ್ಬರು ಅಪರಾಧ, ಮೋಸದಂತಹ ಪ್ರಕರಣಗಳ ಬಗ್ಗೆ ಜಾಗೃತರಾಗಿರಬೇಕು ಮತ್ತು ಅಪರಾಧ ಪ್ರಕರಣಗಳ ಬಗ್ಗೆ ತಿಳಿದರೆ ತಕ್ಷಣ ಅದನ್ನು ಪೊಲೀಸರಿಗೆ ಮಾಹಿತಿ ನೀಡಬೇಕು. ಇದರಿಂದ ನಾವುಗಳು ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಿ ಆರೋಪಿತರನ್ನು ಬಂಧಿಸಲು ಸಾಧ್ಯವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಎಎಸ್‍ಐ ಪರಮೇಶ್, ಆಟೊ ಚಾಲಕರು ಮತ್ತು ಸಾರ್ವಜನಿಕರಿದ್ದರು.

Translate »