ಎತ್ತಿನಹೊಳೆ ಯೋಜನೆ ಬಗ್ಗೆ ಜೆಡಿಎಸ್‍ಗೆ ನಿರಾಸಕ್ತಿ ಮಾಜಿ ಸಚಿವ ಬಿ.ಶಿವರಾಂ ಬೇಸರ
ಹಾಸನ

ಎತ್ತಿನಹೊಳೆ ಯೋಜನೆ ಬಗ್ಗೆ ಜೆಡಿಎಸ್‍ಗೆ ನಿರಾಸಕ್ತಿ ಮಾಜಿ ಸಚಿವ ಬಿ.ಶಿವರಾಂ ಬೇಸರ

December 14, 2018

ಹಾಸನ: ಎತ್ತಿನಹೊಳೆ ಯೋಜನೆ ಸಕಾಲದಲ್ಲಿ ಅನುಷ್ಠಾನವಾಗುವ ಬಗ್ಗೆ ಅನುಮಾನವಿದೆ ಎಂದು ಮಾಜಿ ಸಚಿವ ಬಿ.ಶಿವರಾಂ ಬೇಸರ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಮಹತ್ವಾ ಕಾಂಕ್ಷೆಯ ಎತ್ತಿನಹೊಳೆ ಯೋಜನೆ ಕಾಮಗಾರಿ ಕುಂಠಿತಕ್ಕೆ ಹಣಕಾಸಿನ ಸಮಸ್ಯೆ ಇಲ್ಲ. ಕಾಮಗಾರಿ ಮಂಜೂರಾತಿ ಯಾಗಿದ್ದು, ಟೆಂಡರ್ ಪ್ರಕ್ರಿಯೆ ಕೂಡ ಮುಗಿದಿದೆ. ಮೂಲಭೂತ ಸಮಸ್ಯೆ ಎಂದರೆ ಜಿಲ್ಲಾಡಳಿತದ ವೈಫಲ್ಯದಿಂದ ವಿಳಂಬವಾಗಿದೆ ಎಂದರು.

ಈ ಯೋಜನೆಯಡಿ ಹಾಸನ ಜಿಲ್ಲೆಗೆ 6 ಸಾವಿರಕ್ಕೂ ಅಧಿಕ ಕೋಟಿ ಹಣ ನಿಗದಿಯಾಗಿದೆ. ಆದರೆ ಈವರೆಗೂ ಕೇವಲ ಅರ್ಧದಷ್ಟು ಹಣ ಮಾತ್ರ ಖರ್ಚು ಮಾಡಲಾಗಿದೆ. ಅನೇಕ ಕಡೆ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ನಡೆದಿರುವುದಿಲ್ಲ. ಆದ್ದ ರಿಂದ ಯೋಜನೆ ಸಕಾಲದಲ್ಲಿ ಅನುಷ್ಠಾನ ಆಗುವ ಬಗ್ಗೆ ಅನುಮಾನವಿದೆ ಎಂದರು. ಸ್ಪೀಕರ್ ರಮೇಶ್‍ಕುಮಾರ್ ಕ್ಷೇತ್ರಕ್ಕೂ ಇಲ್ಲಿಂದ ನೀರು ಹೋಗುತ್ತದೆ. ಚುನಾ ವಣೆ ಮುಗಿದ ಕೂಡಲೆ ಈ ಯೋಜನೆ ಬಗ್ಗೆ ಗಮನ ಕೊಡದೆ ಸುಮ್ಮನಾಗಿದ್ದಾರೆ. ಅಧಿಕಾರವಿದ್ದು, ಈ ಬಗ್ಗೆ ಕೂಡಲೇ ಗಮನ ನೀಡಿದರೆ ಅವರ ಕ್ಷೇತ್ರಕ್ಕೂ ನೀರು ಹರಿಸಬಹುದು ಎಂದು ಸಲಹೆ ನೀಡಿ ದರು. ಎತ್ತಿನಹೊಳೆ ಯೋಜನೆಗೆ ಜೆಡಿಎಸ್‍ನವರ ನಿರಾಸಕ್ತಿ ಇದೆ. ಇದು ಬಹಿರಂಗ ಸತ್ಯ, ಈಗಾಗಲೇ ಜನರಲ್ಲಿ ಈ ಭಾವನೆ ಬಂದಿದೆ. ಇದು ಸಿದ್ದರಾ ಮಯ್ಯ ಅವರ ಯೋಜನೆ ಎಂಬ ಕಾರ ಣಕ್ಕೆ ವಿಳಂಬ ಮಾಡಬಾರದು. ಈವ ರೆಗೂ ಒಮ್ಮೆಯೂ ಯೋಜನೆಯ ಸ್ಥಳ ಪರಿಶೀಲನೆ ಮಾಡಿಲ್ಲ. ಹಿಂದೆ ದೇವೇ ಗೌಡರು ಮತ್ತು ಜೆಡಿಎಸ್ ನಾಯಕರು ಯೋಜನೆಗೆ ಅಪಸ್ವರ ಎತ್ತಿದ್ದರು. ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿಶೇಷ ಗಮನ ಹರಿಸುವಂತೆ ಒತ್ತಾಯ ಮಾಡಿದರು.

Translate »