ಮೈಸೂರು, ಆ.18(ಆರ್‍ಕೆ)- ಮೈಸೂರು ಹೊರ ವಲಯದ ಮಂಡಕಳ್ಳಿಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್‍ಒಯು)ದ ಶೈಕ್ಷಣಿಕ ಭವನದ ಕೋವಿಡ್ ಕೇರ್ ಸೆಂಟರ್‍ನಲ್ಲಿ ಆಹಾರ ತ್ಯಾಜ್ಯ ಮತ್ತು ಹಸಿ ಕಸದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸುವ ಪ್ರಕ್ರಿಯೆ ಆರಂಭವಾಗಿದೆ.
ಕೋವಿಡ್ ಕೇರ್ ಸೆಂಟರ್‍ನ ಮೇಲ್ವಿ ಚಾರಣೆ ನೋಡಿಕೊಳ್ಳುತ್ತಿರುವ ನೋಡಲ್ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಡಾ. ಎಸ್.ಯು.ಅಶೋಕ್ ಅವರ ಈ ಪರಿ ಕಲ್ಪನೆಯನ್ನು ಸಾಕಾರಗೊಳಿಸಲು ಶೈಕ್ಷಣಿಕ ಭವನ ಕಟ್ಟಡದ ಅನತಿ ದೂರದಲ್ಲಿ 50×40 ಅಳತೆಯ 8 ಅಡಿ ಆಳದ ಗುಂಡಿ ತೋಡ ಲಾಗಿದ್ದು, ಕೇಂದ್ರದಲ್ಲಿ ಆರೈಕೆ ಪಡೆಯು ತ್ತಿರುವ ಕೋವಿಡ್ ಸೋಂಕಿತರಿಗೆ ಆಹಾರ ತಯಾರಿಕಾ ವೇಳೆ ಉತ್ಪತ್ತಿಯಾಗುತ್ತಿರುವ ಹಸಿ ಕಸ ಮತ್ತು ಆಹಾರ ತ್ಯಾಜ್ಯವನ್ನು ಅದರಲ್ಲಿ ಹಾಕಿ ರೀಸೈಕಲ್ ಪ್ರಕ್ರಿಯೆ ಮೂಲಕ ಕಾಂಪೋಸ್ಟ್ ಗೊಬ್ಬರ ತಯಾ ರಿಸಲು ಸಿದ್ಧತೆ ನಡೆಸಲಾಗಿದೆ.
ಕೇಂದ್ರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ತೆಗೆದುಕೊಂಡು ಹೋಗಲು ಮೈಸೂರು ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಗ್ರಾಮ ಪಂಚಾಯ್ತಿ ಸಿಬ್ಬಂದಿ ಹಿಂದೇಟು ಹಾಕಿದ ಕಾರಣ ಅದನ್ನು ವಿಲೇವಾರಿ ಮಾಡಲು ಡಾ.ಅಶೋಕ್ ಅವರು ಪರಿ ಹಾರ ಕಂಡುಕೊಂಡ ಪರಿಣಾಮ ಕಸ ದಿಂದ ಗೊಬ್ಬರ ತಯಾರಿಕಾ ಘಟಕ ಸಿದ್ಧ ವಾಗಿದೆ. ಅಲ್ಲಿ ನಿತ್ಯ ಉತ್ಪತ್ತಿಯಾಗುವ ಕಸ ದಿಂದ ಪ್ಲಾಸ್ಟಿಕ್ ಪದಾರ್ಥಗಳನ್ನು ಬೇರ್ಪ ಡಿಸಿ ಆಹಾರ ತ್ಯಾಜ್ಯವನ್ನು ಗುಂಡಿಗೆ ಹಾಕಿ ಅದರ ಮೇಲೆ ಬ್ಲೀಚಿಂಗ್ ಪುಡಿ ಸಿಂಪಡಿಸಿ, ಅದಕ್ಕೆ ತೆಂಗಿನಕಾಯಿಯ ಸಿಪ್ಪೆ ಸುಲಿ ದಾಗ ಬರುವ ಪುಡಿ (ಕೋಕೋ ಪೀಟ್) ಹಾಕಿದ ನಂತರ ಸುಣ್ಣ ಮತ್ತು ಮರದ ಎಲೆ ಮಿಶ್ರಣ ಮಾಡಲಾಗುವುದು ಎಂದು ಡಾ. ಅಶೋಕ್, ಗೊಬ್ಬರ ತಯಾರಿಸುವ ವಿಧಾನವನ್ನು ವಿವರಿಸಿದರು.
10 ದಿನ ಹಾಗೆಯೇ ಬಿಟ್ಟರೆ ಗುಂಡಿ ಯಲ್ಲಿನ ಹಸಿ ಕಸ ಕಾಂಪೋಸ್ಟ್ ಗೊಬ್ಬರ ವಾಗಿ ಪರಿವರ್ತನೆಯಾಗುತ್ತದೆ. ಈ ಪ್ರಕ್ರಿಯೆಯಿಂದ ತೋಟಗಾರಿಕಾ ಇಲಾಖೆಗೆ ಬೇಕಾದ ಗೊಬ್ಬರ ಲಭ್ಯವಾಗುವುದಲ್ಲದೆ, ಆಹಾರ ತ್ಯಾಜ್ಯವನ್ನು ವಿಲೇವಾರಿ ಮಾಡಿ ದಂತಾಗುತ್ತದೆ ಎಂದು ಅವರು ತಿಳಿಸಿದರು.
ಕಟ್ಟಡದಿಂದ ತುಸು ದೂರದಲ್ಲಿರುವ ಕಾಂಪೋಸ್ಟ್ ತಯಾರಿಕಾ ಘಟಕಕ್ಕೆ ತ್ಯಾಜ್ಯ ಸಾಗಿಸಲು ಎರಡು ಲಘು ವಾಹನ ಬೇಕೆಂದು ಕೇಳಿದ್ದೇನೆ. ಪೂರೈಸುವುದಾಗಿ ಜಿಲ್ಲಾಧಿಕಾರಿ ಗಳು ತಿಳಿಸಿರುವುದರಿಂದ ಈ ಕಾರ್ಯ ಸುಲಲಿತವಾಗಿ ನಡೆಯಲಿದೆ ಎಂದು ಅವರು `ಮೈಸೂರು ಮಿತ್ರ’ನಿಗೆ ತಿಳಿಸಿದರು.
ಜುಲೈ 15ರಿಂದ ಆರಂಭವಾಗಿರುವ ಮಂಡಕಳ್ಳಿಯ ಕೋವಿಡ್ ಕೇರ್ ಸೆಂಟರ್ ನಲ್ಲಿ ಪ್ರಸ್ತುತ 526 ಮಂದಿ ಸೋಂಕಿತರು ದಾಖಲಾಗಿದ್ದು, ಈವರೆಗೆ ಅಲ್ಲಿ ಆರೈಕೆ ಪಡೆದು 1,100 ಮಂದಿ ಬಿಡುಗಡೆಯಾಗಿ ದ್ದಾರೆ. 607 ಹಾಸಿಗೆ ಸಾಮಥ್ರ್ಯದ ಕಟ್ಟಡ ದಲ್ಲಿ ಸ್ವಚ್ಛತೆ, ಶೌಚಾಲಯ, ಬಿಸಿ ನೀರಿನ ವ್ಯವಸ್ಥೆ ಹಾಗೂ ಊಟ-ತಿಂಡಿಯನ್ನು ಬದಗಿಸಲಾಗುತ್ತಿದೆ. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರವೊಂದರ ವೈದ್ಯಕೀಯ ಅಧಿಕಾರಿ ಡಾ.ಮಧುಸೂದನ್ ಅವರು ಪ್ರತೀ ನಿತ್ಯ ಬಂದು ಕೊರೊನಾ ಸೋಂಕಿತ ರಿಗೆ ಯೋಗ, ವ್ಯಾಯಾಮ ಹೇಳಿಕೊಡು ತ್ತಿದ್ದು, ಇದೀಗ ಕೋವಿಡ್ ಕೇರ್ ಕೇಂದ್ರವು ಒಂದು ವಿಹಾರಿ ಸ್ಥಳವೆನ್ನುವ ಅನುಭವ ಉಂಟು ಮಾಡುತ್ತಿದೆ.
ಮಂಡಕಳ್ಳಿಯ ಕೋವಿಡ್ ಕೇರ್ ಸೆಂಟರ್ ಅನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿರುವುದರಿಂದ ಜಿಲ್ಲಾಡಳಿತವು ಮೈಸೂರಿನ ಕೆಆರ್‍ಎಸ್ ರಸ್ತೆಯಲ್ಲಿರುವ ಜಿಲ್ಲಾ ಕೋವಿಡ್ ಆಸ್ಪತ್ರೆಯ ಮೇಲ್ವಿ ಚಾರಣೆಯನ್ನು ಡಾ.ಅಶೋಕ್ ಅವರಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಿದೆ.