ಮುಂಗಾರು ಆರಂಭಕ್ಕೂ ಮುನ್ನವೇ ಕೆರೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಿ
ಮೈಸೂರು

ಮುಂಗಾರು ಆರಂಭಕ್ಕೂ ಮುನ್ನವೇ ಕೆರೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಿ

May 22, 2020

ಮೈಸೂರು, ಮೇ 21(ಆರ್‍ಕೆಬಿ)- ಜಿಲ್ಲೆಯಲ್ಲಿ ನೀರಿ ಲ್ಲದ ಕೆರೆಗಳನ್ನು ಗುರುತಿಸಿ ಅಭಿವೃದ್ಧಿ ಕಾಮಗಾರಿ ಗಳನ್ನು ನಡೆಸಬೇಕು. ಮುಂಗಾರÀು ಮಳೆ ಆರಂಭಕ್ಕೂ ಮುನ್ನವೇ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮೈಸೂರು ಜಿಲ್ಲೆಯಲ್ಲಿ ಎಂ-ನರೇಗಾ ಯೋಜನೆ ಯಡಿ ನಡೆದಿರುವ ಕೆರೆಗಳ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ಸಚಿವರು, ಬಳಿಕ ಮೈಸೂರು ಜಿಪಂ ಸಭಾಂ ಗಣದಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ದರು. ಜಿಲ್ಲೆಯಲ್ಲಿ ಎಷ್ಟು ಕೆರೆಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ? ಅಭಿವೃದ್ಧಿಯಾಗದೆ ಉಳಿದ ಕೆರೆಗಳೆಷ್ಟು? ಎಂಬ ಮಾಹಿತಿ ಪಡೆದುಕೊಂಡರು.

ಮೈಸೂರು ತಾಲೂಕಿನಲ್ಲಿ ಒಟ್ಟು 139 ಕೆರೆಗಳಿದ್ದು, 49 ಕೆರೆಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈವರೆಗೆ 17 ಕಾಮಗಾರಿ ಪೂರ್ಣಗೊಂಡಿವೆ ಎಂದು ತಾಪಂ ಇಓ ಕೃಷ್ಣಕುಮಾರ್ ಮಾಹಿತಿ ನೀಡಿದರು. ಕೇವಲ 49 ಕೆರೆಗಳಲ್ಲಷ್ಟೇ ಕಾಮಗಾರಿ ನಡೆಸುತ್ತಿರುವು ದೇಕೆ? ಎಂದು ಪ್ರಶ್ನಿಸಿದ ಸಚಿವರು, ಎಲ್ಲಾ ಕಾಮಗಾರಿ ಯನ್ನು ಆದಷ್ಟೂ ಬೇಗ ಪೂರ್ಣಗೊಳಿಸಿ ಎಂದು ಆದೇ ಶಿಸಿದರು. ತಿ.ನರಸೀಪುರ ತಾಲೂಕಿನಲ್ಲಿ ಎಲ್ಲಾ 78 ಕೆರೆ ಗಳಲ್ಲೂ ಅಭಿವೃದ್ಧಿ ಕಾರ್ಯ ನಡೆದಿದೆ. ನಂಜನಗೂಡಿ ನಲ್ಲಿ 54 ಕೆರೆಗಳ ಪೈಕಿ 28 ಕೆರೆಗಳಲ್ಲಿ, ಕೆ.ಆರ್.ನಗರ ತಾಲೂಕಿನ 73 ಕೆರೆಗಳ ಪೈಕಿ 29 ಕೆರೆಗಳಲ್ಲಿ, ಹೆಚ್.ಡಿ. ಕೋಟೆಯಲ್ಲಿ 85 ಕೆರೆಗಳಿದ್ದು, 15ರಲ್ಲಿ ಕಾಮಗಾರಿ ನಡೆದಿದೆ. ಪಿರಿಯಾಪಟ್ಟಣ ತಾಲೂಕಿನ 43 ಕೆರೆಗಳ ಪೈಕಿ 22ರಲ್ಲಿ ಹಾಗೂ ಹುಣಸೂರು ತಾಲೂಕಿನಲ್ಲಿನ 118 ಕೆರೆಗಳ ಪೈಕಿ 2 ಕೆರೆಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ ಎಂದು ತಾಪಂ ಇಓಗಳು ಅಂಕಿ ಅಂಶ ನೀಡಿದರು.

ಬದು ನಿರ್ಮಾಣಕ್ಕೆ ಒತ್ತು: ಕೃಷಿ ಭೂಮಿಯಲ್ಲಿ ಹೆಚ್ಚು ಬದುಗಳನ್ನು ನಿರ್ಮಿಸಿದರೆ ಮಳೆ ನೀರು ಭೂಮಿಗೆ ಇಂಗಿ ಅಂತರ್ಜಲ ಹೆಚ್ಚಲು ಅವಕಾಶವಾಗುತ್ತದೆ. ಬದು ನಿರ್ಮಾಣ ಕಾಮಗಾರಿಯಲ್ಲಿ ರೈತರೂ ಪಾಲ್ಗೊಳ್ಳಬಹುದು. ಮೇ 19ರಿಂದ ಜೂ.19ರವರೆಗೆ ಬದು ನಿರ್ಮಾಣ ಕಾಮ ಗಾರಿಗೆ ಅವಕಾಶವಿದೆ. ಅರಣ್ಯ ಇಲಾಖೆಯವರು ಬದುಗಳ ಸುತ್ತ ಎಷ್ಟು ಸಸಿಗಳನ್ನು ನೆಡಬಹುದು ಎಂದು ಈಗಲೇ ಯೋಜಿಸಿ ಎಂದು ಸಚಿವರು ಸಲಹೆ ನೀಡಿದರು.

ಕುಡಿವ ನೀರಿನ ವಿಚಾರ: ಕುಡಿಯುವ ನೀರಿನ ವಿಚಾರ ದಲ್ಲಿ ಹುಡುಗಾಟ ಬೇಡ. ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ದೂರಿದೆ. ಇವುಗಳ ನಿರ್ವಹಣೆ ಹೊಣೆಹೊತ್ತ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ, ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಶುದ್ಧ ಕುಡಿಯುವ ನೀರು ಯೋಜನೆ ಯಡಿ 514 ಕಾಮಗಾರಿಗಳು ಪೂರ್ಣಗೊಂಡಿವೆ. 470 ಘಟಕಗಳು ಸುಸ್ಥಿತಿಯಲ್ಲಿವೆ ಎಂದು ಇಲಾಖೆ ಅಧಿಕಾರಿ ನೀಡಿದ ಸ್ಪಷ್ಟೀಕರಣಕ್ಕೆ ಅಸಮಾಧಾನಗೊಂಡ ಸಚಿವರು, ಮಾಹಿತಿ ಸರಿಯಿಲ್ಲ. ಅಂಕಿ ಅಂಶಗಳನ್ನು ಕೇಳಿ ಕೇಳಿ ಸಾಕಾಗಿದೆ. ತಾಪಂ ಇಓಗಳನ್ನು ಕರೆಸಿ ಶುದ್ಧ ಕುಡಿಯುವ ನೀರಿನ ಯಾವ ಘಟಕ, ಹೇಗೆ ಕೆಲಸ ಮಾಡುತ್ತಿದೆ? ಎಂಬ ಬಗ್ಗೆ ತಕ್ಷಣ ವರದಿ ತರಿಸಿಕೊಳ್ಳಿ ಎಂದು ಜಿಪಂ ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಅವರಿಗೆ ಆದೇಶಿಸಿದರು.

ಜಿಟಿಡಿ ಬೇಸರ: ಬಹುಗ್ರಾಮ ಶಾಶ್ವತ ಕುಡಿಯುವ ನೀರು ಸರಬರಾಜು ಯೋಜನೆಯಲ್ಲಿ 32 ಘಟಕಗಳು ಸರಿಯಾಗಿ ಕೆಲಸ ಮಾಡುತ್ತಿವೆ. ದೊಡ್ಡ ಕವಲಂದೆ ಯಲ್ಲಿ ಮಾತ್ರ ಸ್ವಲ್ಪ ಸಮಸ್ಯೆಯಿದೆ. ಪೈಪ್‍ಗಳು ಒತ್ತಡ ತಡೆಯದೆ ಆಗಾಗ್ಗೆ ಒಡೆದುಹೋಗುತ್ತಿವೆ ಎಂದು ಅಧಿ ಕಾರಿ ವಿವರಿಸಿದಾಗ ಮಧ್ಯ ಪ್ರವೇಶಿಸಿದ ಶಾಸಕ ಜಿ.ಟಿ. ದೇವೇಗೌಡ ಅವರು, ಬೀರಿಹುಂಡಿಯಲ್ಲೂ ನೀರಿನ ಸಮಸ್ಯೆ ಇದೆ. ಆದರೆ ಅಧಿಕಾರಿಗಳು ನಿರ್ಲಕ್ಷ್ಯ ತಾಳಿ ದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ರಿಂಗ್ ರಸ್ತೆ ಕಸ: ನಗರದ ರಿಂಗ್ ರಸ್ತೆಯಲ್ಲಿ ಕಸ ಸುರಿಯುತ್ತಿರುವ ವಿಚಾರದತ್ತ ಸಚಿವರ ಗಮನ ಸೆಳೆದ ಸಂಸದ ಪ್ರತಾಪ್ ಸಿಂಹ, ಹೊರವಲಯದ ಬಡಾವಣೆ ಗಳ ಎಲ್ಲಾ ಕಸವನ್ನೂ ತಂದು ರಿಂಗ್ ರಸ್ತೆಬದಿ ಸುರಿ ಯಲಾಗುತ್ತಿದೆ. ಇದನ್ನು ನಿಯಂತ್ರಿಸುತ್ತಿಲ್ಲ ಎಂದು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಕಿಡಿಕಾರಿದರು. ಈ ವೇಳೆ ಡಿಸಿ ಅಭಿರಾಂ ಜಿ.ಶಂಕರ್, ರಾಯನಕೆರೆ, ಕೆಸರೆ ಮತ್ತಿತರೆಡೆ ಕಸ ಹಾಕಬಹುದಾಗಿದೆ ಎಂಬ ಸಲಹೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಅಶ್ವ್ವಿನ್ ಕುಮಾರ್, ಕೆ.ಎಸ್.ನಿರಂಜನಕುಮಾರ್, ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Translate »