ತೈಲ ಬೆಲೆ ಹೆಚ್ಚಳಕ್ಕೆ ಖಂಡನೆ; 25 ರೂ.ಗೆ ಪೆಟ್ರೋಲ್ ನೀಡಿ ವಿನೂತನ ಪ್ರತಿಭಟನೆ
ಮೈಸೂರು

ತೈಲ ಬೆಲೆ ಹೆಚ್ಚಳಕ್ಕೆ ಖಂಡನೆ; 25 ರೂ.ಗೆ ಪೆಟ್ರೋಲ್ ನೀಡಿ ವಿನೂತನ ಪ್ರತಿಭಟನೆ

June 19, 2020

ಮೈಸೂರು, ಜೂ.18(ಎಂಟಿವೈ)- ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಕಡಿಮೆ ಇದ್ದರೂ ಸತತ 10 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ಮಾಡುವ ಮೂಲಕ ಕೇಂದ್ರ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಜೂ.19ರ ಮಧ್ಯಾಹ್ನ 1.30ಕ್ಕೆ ನೂರು ಮಂದಿಗೆ 25 ರೂ. ದರದಲ್ಲಿ ತಲಾ 1 ಲೀ. ಪೆಟ್ರೋಲ್ ನೀಡುವ ಮೂಲಕ ವಿನೂತನ ರೀತಿ ಪ್ರತಿಭಟಿಸಲಾಗುತ್ತಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಭಾಗಿಯಾಗಲಿದ್ದಾರೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ತಿಳಿಸಿದರು.

ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಕೊರೊನಾ ಭೀತಿಯಲ್ಲಿ ಎರಡೂವರೆ ತಿಂಗಳು ಲಾಕ್‍ಡೌನ್ ಮಾಡಿದ್ದರಿಂದ ವಾಣಿಜ್ಯ ಚಟುವಟಿಕೆ ಗಳು ಇಲ್ಲವಾಗಿ, ಶ್ರಮಿಕರಿಗೆ ದುಡಿಮೆಯೂ ಇಲ್ಲದೇ ಜನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥ ಸಮಯದಲ್ಲಿ ಕೇಂದ್ರ ಸರ್ಕಾರ ಜನರ ನೆರವಿಗೆ ಬಾರುವುದಕ್ಕೆ ಬದಲಾಗಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿರಂತರವಾಗಿ ಏರಿಸುತ್ತಿದೆ. ಆ ಮೂಲಕ ಜನರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ಕಿಡಿಕಾರಿದರು.

ಪೆಟ್ರೋಲ್, ಡೀಸೆಲï ಬೆಲೆ ಏರಿದರೆ ಎಲ್ಲ ಪದಾರ್ಥಗಳ ಬೆಲೆಯೂ ಹೆಚ್ಚುತ್ತದೆ. ಸರಕು ಸಾಗಣೆ ದರ, ಬಸ್ ಪ್ರಯಾಣ ದರವೂ ಹೆಚ್ಚುತ್ತವೆ. ಗೂಡ್ಸ್ ಆಟೋ ಓಡಿಸುವ ಹಾಗೂ ಸಣ್ಣಪುಟ್ಟ ವಾಹನಗಳಲ್ಲಿ ವ್ಯಾಪಾರ ಮಾಡುವವರ ಬದುಕು ಪೆಟ್ರೋಲ್ ಮತ್ತು ಡೀಸೆಲ್ ದರದ ಮೇಲೆಯೇ ನಿಂತಿದೆ. ಹೀಗಾಗಿ, ಇಂಧನ ತೈಲಗಳ ಬೆಲೆ ಏರಿಕೆ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಪೆಟ್ಟು ನೀಡುತ್ತಿದೆ ಎಂದರು.

2013ರ ವೇಳೆ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಒಂದು ಬ್ಯಾರಲ್ ಕಚ್ಚಾತೈಲ ದರ 110.14 ಡಾಲರ್ಸ್ ಇತ್ತು. ಆಗ ಪ್ರತಿ ಲೀ. ಪೆಟ್ರೋಲನ್ನು 75.67 ರೂ.ಗೆ ನೀಡಲಾಗು ತ್ತಿತ್ತು. ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರಲ್ ಕಚ್ಚಾತೈಲ ದರ 38.99 ಡಾಲರ್ಸ್‍ಗೆ ಕುಸಿದಿದ್ದರೂ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆಯನ್ನು 76.03 ರೂ.ಗೆ ಏರಿಸಿದೆ. ಇದನ್ನು ಖಂಡಿಸಿ ಜೂ.19ರ ಮಧ್ಯಾಹ್ನ 1.30ಕ್ಕೆ ಪ್ರತಿಭಟನೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು. ಕಾಂಗ್ರೆಸ್ ನಗರಾಧ್ಯP್ಷÀ ಆರ್.ಮೂರ್ತಿ, ಕೆಪಿಸಿಸಿ ವಕ್ತಾರ ಹೆಚ್.ಎ.ವೆಂಕಟೇಶ್, ಪಾಲಿಕೆ ಸದಸ್ಯರಾದ ಜೆ.ಗೋಪಿ, ಶೋಭಾ ಸುನೀಲ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು

Translate »