ಹೋಂ ಕ್ವಾರಂಟೈನ್ ಉಲ್ಲಂಘನೆ; ಜಿಲ್ಲೆಯಲ್ಲಿ 29 ಎಫ್‍ಐಆರ್ ದಾಖಲು
ಮೈಸೂರು

ಹೋಂ ಕ್ವಾರಂಟೈನ್ ಉಲ್ಲಂಘನೆ; ಜಿಲ್ಲೆಯಲ್ಲಿ 29 ಎಫ್‍ಐಆರ್ ದಾಖಲು

June 19, 2020

ಮೈಸೂರು, ಜೂ. 18(ಪಿಎಂ)- ಕೊರೊನಾ ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆಗಾಗಿ ಮೈಸೂರು ಜಿಲ್ಲೆಯಲ್ಲಿ ಈವರೆಗೆ 29 ಎಫ್‍ಐಆರ್ ದಾಖಲಾಗಿವೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.

ಪಾಲಿಕೆಯಿಂದ ಮೈಸೂರಿನ ಅಗ್ರಹಾರ ವೃತ್ತದಲ್ಲಿ ಹಮ್ಮಿಕೊಂಡಿದ್ದ ಮಾಸ್ಕ್ ಡೇ ಜಾಗೃತಿ ಜಾಥಾಗೆ ಚಾಲನೆ ನೀಡಿದ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಹೋಂ ಕ್ವಾರಂಟೈನ್ ಉಲ್ಲಂ ಘನೆ ಕುರಿತು ಮುಂದೆಯೂ ಹೆಚ್ಚು ನಿಗಾ ವಹಿಸಿ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಬುಧವಾರ ರಾತ್ರಿ ಕೊರೊನಾ ಪಾಸಿ ಟಿವ್ ಆಗಿರುವ ವ್ಯಕ್ತಿ ಬಿಎಂಟಿಸಿಯಲ್ಲಿ ಚಾಲಕರಾಗಿದ್ದಾರೆ. ಇವರು ಭಾನುವಾರ ನಂಜನಗೂಡು ಪಟ್ಟಣದ ಮುಡಾ ಬಡಾ ವಣೆಯ ತಮ್ಮ ನಿವಾಸಕ್ಕೆ ಬೆಂಗಳೂರಿ ನಿಂದ ಬಂದಿದ್ದರು. ಜ್ವರವಿದ್ದ ಕಾರಣ ಕ್ವಾರಂಟೈನ್‍ನಲ್ಲಿರಿಸಲಾಗಿತ್ತು. ಇವರಿಗೆ ಪಾಸಿಟಿವ್ ಆಗಿರುವ ಹಿನ್ನೆಲೆಯಲ್ಲಿ ಹಂಡು ವಿನಹಳ್ಳಿಯ ಇವರ ನಿವಾಸದ ಒಂದು ಬೀದಿಯನ್ನು ಕಂಟೈನ್‍ಮೆಂಟ್ ವಲಯ ವಾಗಿ ಮಾಡಲಾಗಿದೆ ಎಂದು ವಿವರಿಸಿ ದರು. ಸಾರ್ವಜನಿಕರ ಓಡಾಟ ಹಿಂದಿ ನಂತೆ ಸಾಮಾನ್ಯವಾಗಿರುವ ಹಿನ್ನೆಲೆಯಲ್ಲಿ ಸೋಂಕು ಹರಡುವ ಸಾಧ್ಯತೆಯೂ ಹೆಚ್ಚಿದೆ. ಹೀಗಾಗಿ ಹೆಚ್ಚು ಪ್ರಕರಣಗಳು ಬಂದರೂ ಸಮರ್ಥವಾಗಿ ನಿಭಾಯಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಪ್ರತಿದಿನ 450ರಿಂದ 500 ಮಂದಿಗೆ ಕೋವಿಡ್-19 ಪರೀಕ್ಷೆ ನಡೆಯುತ್ತಿದೆ. ರೋಗ ಲಕ್ಷಣ ಕಾಣಿಸಿಕೊಂಡವರು ಸ್ವಪ್ರೇರಣೆ ಯಿಂದ ಬಂದು (ಉಚಿತ) ಪರೀಕ್ಷೆ ಮಾಡಿಸಿ ಕೊಳ್ಳಬೇಕು. ಮಹಾರಾಷ್ಟ್ರದಿಂದ ಬಂದ ವರು 114 ಮಂದಿ ಕ್ವಾರಂಟೈನಲ್ಲಿ ಇದ್ದಾರೆ. ಬೇರೆ ರಾಜ್ಯಗಳಿಂದ ಬಂದು ಕ್ವಾರಂಟೈನ್ ನಲ್ಲಿ ಇರುವವರು ಕಡಿಮೆ ಇದ್ದಾರೆ. ಮಹಾ ರಾಷ್ಟ್ರದಿಂದ ಬಂದವರಿಗೆ ಹೋಲಿಸಿದರೆ ಇತರೆ ರಾಜ್ಯಗಳಿಂದ ಬಂದವರಲ್ಲಿ ಪಾಸಿಟಿವ್ ಪ್ರಮಾಣ ಕಡಿಮೆ ಇದೆ ಎಂದರು.

ಜೂ.21ರಂದು `ಅಂತಾರಾಷ್ಟ್ರೀಯ ಯೋಗ ದಿನ’ ಮೈಸೂರು ಜಿಲ್ಲೆಯಲ್ಲಿ ಮನೆ ಟೆರೇಸ್ ನಲ್ಲಿ ಅಥವಾ ಆವರಣದಲ್ಲಿಯೇ ಯೋಗಾ ಸನ ಮಾಡುವಂತೆ ಕರೆ ನೀಡಲಾಗಿದೆ. ಮೈಸೂರು ನಗರದಲ್ಲಿ ಅಂದು ಟೆರೇಸ್ ಮೇಲಿನ ಯೋಗಾಭ್ಯಾಸವನ್ನು ಹೆಲಿಕಾಪ್ಟರ್‍ನಲ್ಲಿ ಚಿತ್ರೀ ಕರಿಸುವುದು ದುಬಾರಿ. ನಮ್ಮಲ್ಲೇ ಡ್ರೋಣ್ ಇರುವುದರಿಂದ ಅದರಿಂದಲೇ ಚಿತ್ರೀಕರಿ ಸಬಹುದು ಎಂದು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

Translate »