ಮೈಸೂರು,ಜೂ.18(ಪಿಎಂ)- ಮೈಸೂ ರಿನಲ್ಲಿ ಗುರುವಾರ ಮಾಸ್ಕ್ ಧರಿಸದೇ ಮನೆ ಯಿಂದ ಹೊರ ಬಂದವರನ್ನು ತಡೆದು ಯಮ-ಕಿಂಕರರು ಆತಂಕ ಉಂಟು ಮಾಡಿ ದರು! ಮಾತ್ರವಲ್ಲದೇ ಎಚ್ಚರಿಕೆ ನೀಡಿ ಉಚಿತವಾಗಿ ಮಾಸ್ಕ್ ವಿತರಿಸಿದರು.
ಮೈಸೂರು ನಗರ ಪೊಲೀಸ್, ಎನ್‍ಆರ್ ಸಂಚಾರ ಠಾಣೆಯಿಂದ ಗುರುವಾರ ಹಮ್ಮಿ ಕೊಂಡಿದ್ದ `ಮಾಸ್ಕ್ ದಿನ’ ಆಚರಣೆ ಜಾಥಾದಲ್ಲಿ ಯಮ-ಕಿಂಕರ ವೇಷಧಾರಿ ಕಲಾವಿದರು, ಮಾಸ್ಕ್ ಧರಿಸದವರ ಬಳಿ ಹೋಗಿ ಎಚ್ಚರಿಕೆ ನೀಡಿದರು. ಉಚಿತ ವಾಗಿ ಮಾಸ್ಕ್ ವಿತರಿಸಿ ಮನೆಯಿಂದ ಹೊರ ಬರುವಾಗ ತಪ್ಪದೇ ಮಾಸ್ಕ್ ಧರಿಸುವಂತೆ ತಿಳಿಹೇಳಿದರು. ಫಲಕಗಳನ್ನು ಹಿಡಿದ ಸಂಚಾರ ಪೊಲೀಸರು ದ್ವಿಚಕ್ರ ವಾಹನ ದಲ್ಲಿ ಜಾಥಾ ನಡೆಸಿದರು. ಮೈಸೂರಿನ ಆಯುರ್ವೇದ ಕಾಲೇಜು ವೃತ್ತದಲ್ಲಿ ಜಾಥಾಕ್ಕೆ ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಚಾಲನೆ ನೀಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತ ನಾಡಿ, ನಗರದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಮಾಸ್ಕ್ ಡೇ ಆಚರಿಸ ಲಾಗುತ್ತಿದೆ. ಸಾರ್ವಜನಿಕರು ಪ್ರತಿದಿನ ಮಾಸ್ಕ್ ಧರಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಇದರಿಂದ ಕೊರೊನಾ ಸೋಂಕಿನಿಂದ ದೂರ ವಿರಲು ಸಾಧ್ಯವಿದೆ. ಕೊರೊನಾ ತಡೆ ಸಂಬಂಧ ಅರಿವು ಕಾರ್ಯಕ್ರಮಗಳನ್ನು ಮುಂದುವರೆಸಲಾಗುವುದು ಎಂದರು. ಮೈಸೂ ರಿನ ವಿವಿಧ ಭಾಗದಲ್ಲಿ ಜಾಥಾ ಸಾಗಿ ಮಾಸ್ಕ್ ಮಹತ್ವ ಸಾರಿತು. ಡಿಸಿಪಿಗಳಾದ ಪ್ರಕಾಶ್ ಗೌಡ, ಗೀತಾ, ಸಂಚಾರ ವಿಭಾಗದ ಎಸಿಪಿ ಎಸ್.ಎನ್.ಸಂದೇಶ್‍ಕುಮಾರ್ ಇತರರಿದ್ದರು.