ದಸರಾ, ಪಂಚಲಿಂಗ ದರ್ಶನ ನಡೆಸುವಂತೆ ವಿದ್ಯುತ್  ದೀಪಾಲಂಕಾರ, ಧ್ವನಿವರ್ಧಕ ಸಂಸ್ಥೆ ಮಾಲೀಕರ ಒತ್ತಾಯ
ಮೈಸೂರು

ದಸರಾ, ಪಂಚಲಿಂಗ ದರ್ಶನ ನಡೆಸುವಂತೆ ವಿದ್ಯುತ್ ದೀಪಾಲಂಕಾರ, ಧ್ವನಿವರ್ಧಕ ಸಂಸ್ಥೆ ಮಾಲೀಕರ ಒತ್ತಾಯ

September 1, 2020

ಮೈಸೂರು, ಆ.31(ಎಂಟಿವೈ)- ಲಾಕ್ ಡೌನ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ವಿದ್ಯುತ್ ದೀಪಾಲಂಕಾರ ಹಾಗೂ ಧ್ವನಿ ವರ್ಧಕ ಮಾಲೀಕರಿಗೆ ಸರ್ಕಾರ ಆರ್ಥಿಕ ನೆರವು ನೀಡುವುದರೊಂದಿಗೆ ನಾಡಹಬ್ಬ ದಸರಾ ಮಹೋತ್ಸವ ಹಾಗೂ ತಲಕಾಡು ಪಂಚಲಿಂಗ ದರ್ಶನದ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವಂತೆ ಒತ್ತಾ ಯಿಸಿ ಮೈಸೂರು ನಗರ ಮತ್ತು ಜಿಲ್ಲಾ ವಿದ್ಯುತ್ ದೀಪಾಲಂಕಾರ ಹಾಗೂ ಧ್ವನಿ ವರ್ಧಕ ಸಂಸ್ಥೆಗಳ ಮಾಲೀಕರ ಸಂಘದ ಸದಸ್ಯರು ಪ್ರತಿಭಟಿಸಿದರು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಿಂದ ಯಾವುದೇ ಕಾರ್ಯಕ್ರಮ ನಡೆ ಯದೇ ಇರುವುದರಿಂದ ಆದಾಯವಿಲ್ಲದೆ ಸಂಕಷ್ಟಕ್ಕೆ ತುತ್ತಾಗಿದ್ದೇವೆ. ಸರ್ಕಾರ ಅಸಂಘ ಟಿತ ಕಾರ್ಮಿಕ ವರ್ಗಕ್ಕೆ ಆರ್ಥಿಕ ನೆರವು ಘೋಷಿಸಿದೆ. ಆದರೆ ವಿದ್ಯುತ್ ದೀಪಾ ಲಂಕಾರ ಹಾಗೂ ಧ್ವನಿವರ್ಧಕ ಸಂಸ್ಥೆ ನಡೆಸುತ್ತಿರುವವರಿಗೆ ಯಾವುದೇ ಪ್ಯಾಕೇಜ್ ಘೋಷಿಸಿಲ್ಲ. 6 ತಿಂಗಳಿಂದ ಧ್ವನಿವರ್ಧಕ ಸಂಸ್ಥೆಯನ್ನೇ ಅವಲಂಬಿಸಿರುವ ಕುಟುಂಬ ಗಳು ನೆರವಿನ ನಿರೀಕ್ಷೆಯಲ್ಲಿವೆ ಎಂದರು.

ಮೈಸೂರು ನಗರ ಹಾಗೂ ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಸಣ್ಣ ಹಾಗೂ ದೊಡ್ಡ ಪ್ರಮಾಣದ ದೀಪಾಲಂಕಾರ ಹಾಗೂ ಧ್ವನಿ ವರ್ಧಕ ಸಂಸ್ಥೆಗಳನ್ನು 2500ಕ್ಕೂ ಹೆಚ್ಚು ಕುಟುಂಬಗಳು ಅವಲಂಬಿಸಿವೆ. ಮದುವೆ, ಗೃಹಪ್ರವೇಶ, ಸಭೆ, ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮ ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಇದರಿಂದ ಜೀವನ ನಿರ್ವ ಹಣೆಗೆ ತೊಂದರೆಯಾಗಿದೆ. ಇದರೊಂದಿಗೆ ಮಳಿಗೆ ಬಾಡಿಗೆ, ಮನೆ ಬಾಡಿಗೆ ಕಟ್ಟಲು ಸಾಧ್ಯವಾಗದ ಸ್ಥಿತಿ ಒದಗಿದೆ. ಈ ಹಿನ್ನೆಲೆ ಯಲ್ಲಿ ನಮ್ಮ ಸಂಕಷ್ಟವನ್ನು ಅರಿತು ಸರ್ಕಾರ ಆರ್ಥಿಕ ನೆರವು ನೀಡಬೇಕು. ಸರ್ಕಾರ ಈ ಬಾರಿ ನಾಡಹಬ್ಬ ದಸರಾ ಮಹೋತ್ಸವ ಹಾಗೂ ತಲಕಾಡಿನಲ್ಲಿ ನಡೆಯುವ ಪಂಚ ಲಿಂಗ ದರ್ಶನದ ವೇಳೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಧ್ವನಿವರ್ಧಕ ಹಾಗೂ ವಿದ್ಯುತ್ ದೀಪಾ ಲಂಕಾರ ಸಂಸ್ಥೆಗಳಿಗೆ ನೆರವಾಗಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಮೈಸೂರು ನಗರ ಜಿಲ್ಲಾ ವಿದ್ಯುತ್ ದೀಪಾಲಂಕಾರ ಹಾಗೂ ಧ್ವನಿ ವರ್ಧಕ ಮಾಲೀಕರ ಸಂಘದ ಅಧ್ಯಕ್ಷ, ಪಾಲಿಕೆ ಮಾಜಿ ಸದಸ್ಯ ಎಂ.ಜಯ ಶಂಕರ್ ಸ್ವಾಮಿ ಮಾತನಾಡಿ, ಕೊರೊನಾ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಒಳಗಾಗಿ ರುವ ನಮಗೆ ಇದುವರೆಗೂ ಸರ್ಕಾರÀದಿಂದ ನೆರವು ಸಿಕ್ಕಿಲ್ಲ. ಈ ವೃತ್ತಿಯನ್ನೇ ನಂಬಿ ರುವ ಸಾವಿರಾರು ಮಂದಿ ಕೆಲಸವಿಲ್ಲದೇ ಕಂಗಾಲಾಗಿದ್ದಾರೆ. ಜೀವನ ನಿರ್ವಹಣೆ ಕಷ್ಟ ಕರವಾಗಿದೆ. ಮೈಸೂರು ನಗರ ಹಾಗೂ ಜಿಲ್ಲೆಯಲ್ಲಿ ಸಭೆ ಸಮಾರಂಭ ಹಾಗೂ ಈ ಬಾರಿಯ ನಾಡಹಬ್ಬ ದಸರಾ ಮಹೋ ತ್ಸವ ಹಾಗೂ ತಲಕಾಡಿನಲ್ಲಿ ನಡೆಯುವ ಪಂಚಲಿಂಗ ದರ್ಶನ ಕಾರ್ಯಕ್ರಮವನ್ನು ನಡೆಸಿ ಜೀವನಕ್ಕೆ ದಾರಿ ಮಾಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಮೈಸೂರು ನಗರ ಜಿಲ್ಲಾ ವಿದ್ಯುತ್ ದೀಪಾ ಲಂಕಾರ ಹಾಗೂ ಧ್ವನಿವರ್ಧಕ ಮಾಲೀ ಕರ ಸಂಘದ ಉಪಾಧ್ಯಕ್ಷ ಶಿವಕುಮಾರ್, ಭೈರಪ್ಪ, ಪ್ರಧಾನ ಕಾರ್ಯದರ್ಶಿ ನಾಗೇಶ್ ಪ್ರಸಾದ್, ಖಜಾಂಚಿ ಅನ್ವರ್, ಪ್ರಸಾದ್, ಪ್ರಕಾಶ್, ಆನಂದ್, ಚಂದ್ರು, ಸುರೇಶ್, ರೋಹಿತ್, ರವಿ, ದೇವರಾಜು, ಅಪೂರ್ವ ಸುರೇಶ್, ಬಸವರಾಜ್ ಬಸಪ್ಪ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Translate »