‘ಕೊರೊನಾ’ ರಾಜ್ಯ ಸರ್ಕಾರಕ್ಕೆ ಹಣ ಮಾಡುವ ಹಬ್ಬ
ಮೈಸೂರು

‘ಕೊರೊನಾ’ ರಾಜ್ಯ ಸರ್ಕಾರಕ್ಕೆ ಹಣ ಮಾಡುವ ಹಬ್ಬ

September 1, 2020

ಮೈಸೂರು, ಆ.31(ಪಿಎಂ)-ರಾಜ್ಯ ಬಿಜೆಪಿ ಸರ್ಕಾ ರಕ್ಕೆ `ಕೊರೊನಾ’ ಹಣ ಮಾಡುವ ಹಬ್ಬದಂತಾಗಿದೆ. ಇದು ಸುಖಾಸುಮ್ಮನೆ ಮಾಡುತ್ತಿರುವ ಆರೋಪ ವಲ್ಲ. ಈ ಸಂಬಂಧ ಕಾಂಗ್ರೆಸ್ ಬಳಿ ದಾಖಲೆಗಳಿವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೈಸೂರು ಜಿಲ್ಲೆ ಅನಾಥವಾಗಿದ್ದು, ಇಲ್ಲಿ ಕೊರೊನಾ ಮಿತಿ ಮೀರುತ್ತಿ ದ್ದರೂ ನಿಯಂತ್ರಣಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಬೆಂಗಳೂರು ಶಿವಾಜಿನಗರದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಆರೋಪಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ನಿಯಂತ್ರಣ ಸಂಬಂಧ ವೈದ್ಯಕೀಯ ಸಲ ಕರಣೆ ಖರೀದಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಅವ್ಯವಹಾರ ನಡೆಸಿದೆ. ಈ ಸಂಬಂಧ ವಿಪಕ್ಷ ನಾಯಕ ಸಿದ್ದ ರಾಮಯ್ಯ ಅವರು ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದರೂ ಒಂದಕ್ಕೂ ಪ್ರತಿಕ್ರಿಯೆ ನೀಡಲಿಲ್ಲ. ರಾಜ್ಯ ದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 3 ಲಕ್ಷ ದಾಟಿದೆ. ಹೀಗಿದ್ದರೂ ಇವರಿಗೆ ಇದು ಹಣ ಮಾಡುವ ಹಬ್ಬವಾಗಿದೆ ಎಂದು ಆಪಾದಿಸಿದರು.

ಮೈಸೂರು ನಗರದಲ್ಲೇ ಬಿಜೆಪಿಯ ಇಬ್ಬರು ಶಾಸಕರಿದ್ದಾರೆ. ಸಂಸದರೂ ಅವರದೇ ಪಕ್ಷದವರಿ ದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರವೂ ಬಿಜೆಪಿಯದ್ದೇ. ಆದರೂ ಮೈಸೂರು ಕೊರೊನಾ ನಿಯಂತ್ರಣದಲ್ಲಿ ಹಿಂದೆ ಉಳಿದಿದ್ದು, ಬಿಜೆಪಿ ಸರ್ಕಾರದಲ್ಲಿ ಮೈಸೂರು ಅನಾಥವಾಗಿದೆ. ಮೈಸೂರಿಗೆ ಸಂಬಂಧಿಸಿದಂತೆ ಕೊರೊನಾ ಚಿಕಿತ್ಸೆ ಕುರಿತಂತೆ ಖಾಸಗಿ ಆಸ್ಪತ್ರೆಗಳೊಂ ದಿಗೆ ಎಷ್ಟು ಬಾರಿ ಸಭೆ ಮಾಡಲಾಗಿದೆ? ಸರ್ಕಾರಿ ಕೋಟಾದಡಿ ಖಾಸಗಿ ಆಸ್ಪತ್ರೆಯಲ್ಲಿ ಎಷ್ಟು ಹಾಸಿಗೆ ಮೀಸಲಿರಿಸಲಾಗಿದೆ ಎಂದು ಪ್ರಶ್ನಿಸಿದರು.

ಮೈಸೂರು ಜಿಲ್ಲೆಯಲ್ಲಿ ಕೊರೊನಾದಿಂದ ಸುಮಾರು 450ಕ್ಕೂ ಹೆಚ್ಚು ಮಂದಿ ಮರಣ ಹೊಂದಿದ್ದಾರೆ ಎಂಬುದು ಅಧಿಕೃತ ಘೋಷಣೆ. ಆದರೆ ಇಲ್ಲಿ ಅರ್ಧದಷ್ಟು ಸಾವುಗಳು ಘೋಷಣೆಯಾಗಿಲ್ಲ. ಆಸ್ಪತ್ರೆ ಸೇರಲಾಗದೇ ಕೊರೊನಾದಿಂದ ಹಲವರು ಸಾವನ್ನಪ್ಪಿದ್ದಾರೆ. ಕೊರೊನಾದಂತಹ ಗಂಭೀರ ಪರಿಸ್ಥಿತಿಯಲ್ಲೂ ಸರ್ಕಾರ ವರ್ಗಾವಣೆ ದಂಧೆ ನಡೆಸು ತ್ತಿದೆ. ಇದಕ್ಕೆ ಮೈಸೂರು ಜಿಲ್ಲಾಧಿಕಾರಿ ವರ್ಗಾವಣೆಯೇ ನಿದರ್ಶನ ಎಂದು ದೂರಿದರು.

ವಿಧಾನಸಭೆ ಅಧಿವೇಶನದಲ್ಲಿ ಹೋರಾಟ: ಕೊರೊನಾ ವೈದ್ಯಕೀಯ ಸಲಕರಣೆ ಅವ್ಯವಹಾರ ಕುರಿತು ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಕಾಂಗ್ರೆಸ್ ತೀವ್ರ ಹೋರಾಟ ನಡೆಸಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳು ಸಾಕಷ್ಟು ಯೋಜನೆಗಳನ್ನು ಪ್ರಕಟಿಸಿವೆ. ಆದರೆ ಇದರ ಪ್ರಯೋಜನ ಮಾತ್ರ ಬೆರಳೆಣಿಕೆಯಷ್ಟು ಜನ ತೆಗೂ ತಲುಪಿಲ್ಲ. ರಾಜ್ಯದ ಶ್ರಮಿಕ ವರ್ಗಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಣೆ ಮಾಡಿದ ಪ್ಯಾಕೇಜ್ ಕೂಡ ಶೇ.10ರಷ್ಟು ಜನರಿಗೂ ಸೌಲಭ್ಯ ತಲುಪಿಲ್ಲ ಎಂದರು.

ಇದೀಗ ಪ್ರಧಾನಿಗಳು ಕೊರೊನಾ ಸಂಬಂಧ ಮೌನ ವಾಗಿದ್ದಾರೆ. ಜೊತೆಗೆ ಆರ್ಥಿಕ ಪರಿಸ್ಥಿತಿ ಬಗ್ಗೆಯೂ ಮಾತನಾಡುತ್ತಿಲ್ಲ. ಕೇಂದ್ರದ ಹಣಕಾಸು ಸಚಿವರು ದೇವರೇ ಗತಿ ಎನ್ನುತ್ತಿದ್ದಾರೆ. ಹೀಗೆ ದೇವರ ಮೇಲೆ ಭಾರ ಹಾಕುವ ಬದಲು ತಮ್ಮ ಸ್ಥಾನಗಳಿಗೆ ರಾಜೀ ನಾಮೆ ಕೊಟ್ಟರೆ ಒಳ್ಳೆಯದು ಎಂದು ಲೇವಡಿ ಮಾಡಿದರು.

ಕೊರೊನಾದಿಂದ ಗುಣಮುಖರಾಗುವ ಬಡವರ ಜೀವನ ನಿರ್ವಹಣೆ ಕಷ್ಟಕರವಾಗುತ್ತಿದೆ. ಹೀಗಾಗಿ `ಪೋಸ್ಟ್ ಕೋವಿಡ್ ಕೇರ್’ ಕಾರ್ಯಕ್ರಮ ರೂಪಿಸಿ, ಅದರ ಮೂಲಕ ಅವರಿಗೆ ಆರ್ಥಿಕ ಸಹಾಯ ನೀಡ ಬೇಕು ಎಂದು ಒತ್ತಾಯಿಸಿದರು. ರಾಜಧಾನಿ ಬೆಂಗ ಳೂರಿನ ಡ್ರಗ್ಸ್ ಮಾಫಿಯಾ ವಿಚಾರ ಕುರಿತು ಪ್ರತಿ ಕ್ರಿಯಿಸಿದ ರಿಜ್ವಾನ್ ಅರ್ಷದ್, ಪೆÇಲೀಸರು ಗಂಭೀರವಾಗಿ ಪರಿಗಣಿಸಿದರೆ ಡ್ರಗ್ಸ್ ಮುಕ್ತಗೊಳಿ ಸಲು ಸಾಧ್ಯವಿದೆ ಎಂದು ಹೇಳಿದರು.

ಬೆಂಗಳೂರು ಗಲಭೆ ಪ್ರಕರಣ ಹಾಗೂ ಬೆಳಗಾವಿ ಪ್ರತಿಮೆ ವಿವಾದ ಸಂಬಂಧ ನಡೆಯುತ್ತಿರುವ ಸಂಘ ರ್ಷಕ್ಕೆ ಕಾಂಗ್ರೆಸ್ ಕಾರಣ ಎಂಬ ಆರೋಪವನ್ನು ಬಿಜೆಪಿ ಮಾಡುತ್ತಿದೆ ಎಂಬುದಕ್ಕೆ ಪ್ರತಿಕ್ರಿಯಿಸಿ, ಸರ್ಕಾ ರದ ಲೋಪದೋಷಗಳನ್ನು ಮರೆಮಾಚಲು ಈ ರೀತಿ ಆರೋಪ ಮಾಡಲಾಗುತ್ತಿದೆ ಎಂದು ದೂರಿದರು.

ಕೊರೊನಾ ಪರಿಸ್ಥಿತಿಯಲ್ಲಿ ದಸರಾ ಆಚರಣೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಸಾಮೂಹಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿ ಸಾಂಕೇತಿಕ ಹಾಗೂ ಸಾಂಪ್ರದಾಯಕವಾಗಿ ಆಚರಣೆ ಮಾಡು ವುದು ಸೂಕ್ತ ಎಂಬುದು ನನ್ನ ವೈಯಕ್ತಿಕ ಅಭಿ ಪ್ರಾಯ ಎಂದು ಹೇಳಿದರು. ಕಾಂಗ್ರೆಸ್ ನಗರಾ ಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »