ಪರಿಶಿಷ್ಟ ಯುವಕನ ಹತ್ಯೆ ಖಂಡಿಸಿ ಮೈಸೂರಲ್ಲಿ ದಸಂಸ ಪ್ರತಿಭಟನೆ
ಮೈಸೂರು

ಪರಿಶಿಷ್ಟ ಯುವಕನ ಹತ್ಯೆ ಖಂಡಿಸಿ ಮೈಸೂರಲ್ಲಿ ದಸಂಸ ಪ್ರತಿಭಟನೆ

September 1, 2020

ಮೈಸೂರು,ಆ.31(ಆರ್‍ಕೆಬಿ)- ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಬೂದಿ ಹಾಳ ಪಿ.ಎಚ್.ಗ್ರಾಮದಲ್ಲಿ ದೇವಸ್ಥಾನದ ಕಟ್ಟೆಯ ಮೇಲೆ ಸವರ್ಣೀಯರ ಸಮನಾಗಿ ಕುಳಿತಿದ್ದನೆಂಬ ಕಾರಣಕ್ಕೆ ಪರಿಶಿಷ್ಟ ಜಾತಿಗೆ ಸೇರಿದ ಯುವಕನನ್ನು ಕೊಲೆ ಮಾಡಿದ ಪ್ರಕ ರಣ ಅತ್ಯಂತ ಅಮಾನವೀಯ ಎಂದು ಖಂಡಿಸಿ ದಲಿತ ಸಂಘರ್ಷ ಸಮಿತಿ ವತಿ ಯಿಂದ ಸೋಮವಾರ ಮೈಸೂರಿನ ಪುರ ಭವನದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು.

ಹಾಡುಹಗಲೇ ಮೇಲ್ವರ್ಗದ ವ್ಯಕ್ತಿಗಳಿಂದ ದಲಿತ ಯುವ ಮುಖಂಡನ ಬರ್ಬರ ಹತ್ಯೆ ನಡೆದಿರುವುದು ಇಡೀ ಸಮಾಜವೇ ತಲೆತಗ್ಗಿ ಸುವಂತಾಗಿದೆ. ಇಂತಹ ಘಟನೆ ನಡೆದಿ ದ್ದರೂ ಜನಪ್ರತಿನಿಧಿಗಳು ಮೌನದಿಂದಿರು ವುದು ನಾಚಿಕೆಗೇಡಿನ ಸಂಗತಿ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು. ದಲಿತರ ಮೇಲೆ ನಿರಂತರವಾಗಿ ಹಲ್ಲೆ, ಮಹಿಳೆ ಯರ ಮೇಲೆ ಅತ್ಯಾಚಾರ, ಕೊಲೆಯಂ ತಹ ಘಟನೆಗಳು ನಡೆಯುತ್ತಿರುವುದಕ್ಕೆ ಸರ್ಕಾರದ ಆಡಳಿತ ವೈಫಲ್ಯ ಹಾಗೂ ನಿರ್ಲಕ್ಷ್ಯವೇ ಕಾರಣ ಎಂದು ದಸಂಸ ಸಂಚಾಲಕ ಹರಿಹರ ಆನಂದಸ್ವಾಮಿ ಆರೋಪಿಸಿದರು. ಆಧುನಿಕತೆಯ ನಾಗಾ ಲೋಟದಲ್ಲಿ ಮುಂದುವರಿಯುತ್ತಿರುವ ಇಂತಹ ಸಮಯದಲ್ಲೂ ಇನ್ನೂ ಕೂಡ ದಲಿತರು ಹಾಗೂ ದಲಿತ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಇತಿಶ್ರೀ ಹಾಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಡಾ. ಅಲಗೂಡು ಚಂದ್ರಶೇಖರ್, ಎಸ್.ನಾಗ ರಾಜು, ಡಿ.ಎನ್.ಬಾಬು, ಅಶೋಕಪುರಂ ಕೃಷ್ಣ, ಮಹಾದೇವ, ಚಕ್ರಪಾಣಿ ಇನ್ನಿತ ರರು ಭಾಗವಹಿಸಿದ್ದರು.

Translate »