ಕನಕ ಜಯಂತಿ ಆಚರಣೆಗೆ ಪಾಲಿಕೆ ಅಧಿಕಾರಿಗಳ ತಡೆ ಆರೋಪ; ಪ್ರತಿಭಟನೆ
ಮೈಸೂರು

ಕನಕ ಜಯಂತಿ ಆಚರಣೆಗೆ ಪಾಲಿಕೆ ಅಧಿಕಾರಿಗಳ ತಡೆ ಆರೋಪ; ಪ್ರತಿಭಟನೆ

November 23, 2021

ಮೈಸೂರು,ನ.22(ಪಿಎಂ)-ಮೈಸೂರಿನ ನಂಜುಮಳಿಗೆಯ ಕನಕ ವೃತ್ತದಲ್ಲಿ ಕನಕ ದಾಸ ಜಯಂತಿ ಆಚರಣೆಗೆ ಪಾಲಿಕೆ ಅಧಿ ಕಾರಿಗಳು ತಡೆಯೊಡ್ಡಿ, ಜಯಂತಿ ಆಚರಣೆ ಗಾಗಿ ಇಟ್ಟಿದ್ದ ಟೇಬಲ್, ಸ್ಟ್ಯಾಂಡ್ ಸೇರಿ ದಂತೆ ಇತರೆ ಸಾಮಗ್ರಿಗಳನ್ನು ವಶಪಡಿಸಿ ಕೊಂಡಿದ್ದಾರೆ ಎಂದು ಆರೋಪಿಸಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವ ದಲ್ಲಿ ಸ್ಥಳೀಯರು ದಿಢೀರ್ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಕನಕ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟ ನಾಕಾರರು, ಕನಕ ವೃತ್ತದಲ್ಲಿ ಪ್ರತಿ ವರ್ಷ ಕನಕದಾಸರ ಜಯಂತಿ ಆಚರಣೆ ಮಾಡ ಲಾಗುತ್ತಿದೆ. ಅದರಂತೆ ಈ ವರ್ಷವೂ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಪಾಲಿಕೆ ಅಧಿಕಾರಿಗಳು ಇಲ್ಲಿ ಜಯಂತಿ ಆಚ ರಣೆಗೆ ಅವಕಾಶವಿಲ್ಲ ಎಂದು ಪೊಲೀಸ್ ಭದ್ರತೆಯಲ್ಲಿ ಜಯಂತಿ ಆಚರಣೆಗಾಗಿ ಸ್ಥಳದಲ್ಲಿ ಇಟ್ಟಿದ್ದ ಟೇಬಲ್, ಸ್ಟ್ಯಾಂಡ್ ಸೇರಿದಂತೆ ಇತರೆ ಸಾಮಗ್ರಿಗಳನ್ನು ವಶ ಪಡಿಸಿಕೊಂಡಿದ್ದಾರೆ. ಆ ಮೂಲಕ ಪಾಲಿಕೆ ಅಧಿಕಾರಿಗಳು ಕನಕದಾಸರಿಗೆ ಅಪಮಾನ ಮಾಡಿದ್ದಾರೆ ಎಂದು ದೂರಿದರು.

ತಡೆಯೊಡ್ಡಿದ ಕಾರಣವನ್ನು ಪ್ರಶ್ನಿಸಿ ದರೆ, ನಮಗೆ ವಾರ್ಡಿನ ಪಾಲಿಕೆ ಸದಸ್ಯರು ಮತ್ತು ಕ್ಷೇತ್ರದ ಶಾಸಕರು ಜಯಂತಿ ಆಚ ರಣೆಗೆ ಸದರಿ ಸ್ಥಳದಲ್ಲಿ ಅವಕಾಶ ನೀಡದಂತೆ ಸೂಚನೆ ನೀಡಿದ್ದಾರೆಂದು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂಬಂಧ ಪತ್ರಿಕೆಯೊಂದಿಗೆ ಮಾತ ನಾಡಿದ ಎಂ.ಕೆ.ಸೋಮಶೇಖರ್, ಕನಕ ದಾಸರ ಜಯಂತಿ ಆಚರಣೆಗಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಟೇಬಲ್ ಮತ್ತು ಸ್ಟ್ಯಾಂಡ್ ಇಟ್ಟಿದ್ದರು. ಅದರ ಮೇಲೆ ಕನಕದಾಸರ ಪ್ರತಿಮೆ ಪ್ರತಿಷ್ಠಾಪಿಸಿ ದ್ದರು. ಆದರೆ ಪಾಲಿಕೆ ಅಧಿಕಾರಿಗಳು ಕನಕದಾಸರ ಪ್ರತಿಮೆ ಕೆಳಗಿಳಿಸಿ ಅಲ್ಲಿಯೇ ಇಟ್ಟು, ಟೇಬಲ್ ಮತ್ತು ಸ್ಟ್ಯಾಂಡ್ ಅನ್ನು ವಶಪಡಿಸಿಕೊಂಡಿದ್ದಾರೆ. ಜಯಂತಿ ಆಚ ರಣೆ ಮಾಡಬಾರದು ಎಂದು ಪಾಲಿಕೆ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ಈ ರೀತಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಕಿಡಿಕಾರಿದರು. ಇಲ್ಲಿ ಪ್ರತಿವರ್ಷ ಕನಕ ಜಯಂತಿ ಆಚರಣೆ ಮಾಡ ಲಾಗುತ್ತಿತ್ತು. ಅದರಂತೆ ನಂಜುಮಳಿಗೆಯ ಹೊಸಬಂಡಿಕೇರಿ ಕನಕದಾಸ ಮಂಡಳಿ ವತಿಯಿಂದ ಈ ಬಾರಿಯೂ ಕನಕ ಜಯಂತಿ ಆಚರಣೆಗೆ ಸಿದ್ಧತೆ ಮಾಡಿ ಕೊಂಡಿದ್ದರು. ಆದರೆ ಭಾನುವಾರ ರಾತ್ರಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ.

ಸ್ಥಳೀಯ ಶಾಸಕರ ಸೂಚನೆ ಮೇರೆಗೆ ತೆರವು ಮಾಡಿರುವುದಾಗಿ ಪಾಲಿಕೆ ಅಧಿಕಾರಿಗಳು ಹೇಳುತ್ತಿದ್ದಾರೆ. ಮುಂದಿನ ಹೋರಾಟದ ಬಗ್ಗೆ ಶೀಘ್ರವೇ ನಿರ್ಧಾರ ಮಾಡಲಿದ್ದೇವೆ ಎಂದರು.

ಎರಡೂವರೆ ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತ ಪಡಿಸಲಾಯಿತು. ಸ್ಥಳೀಯ ಮುಖಂಡ ರಾದ ಬಸಪ್ಪ, ವಿಶ್ವ, ಮಹದೇವಪ್ಪ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ಮುಖಂಡ ರಾದ ಲೋಕೇಶ್, ಡೈರಿ ವೆಂಕಟೇಶ್ ಮತ್ತಿ ತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »