ಕಾಳಜಿ ವಹಿಸಿದರೆ ರೋಗಿಗಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ
ಮೈಸೂರು

ಕಾಳಜಿ ವಹಿಸಿದರೆ ರೋಗಿಗಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ

March 28, 2022

ಮೈಸೂರು,ಮಾ.೨೭(ಎಂಟಿವೈ)- ಆಸ್ಪತ್ರೆಗಳಲ್ಲಿ ದಾಖಲಾಗುವÀ ರೋಗಿಗಳ ಮೇಲೆ ಆಸ್ಪತ್ರೆ ಸಿಬ್ಬಂದಿಗಳು ಕಾಳಜಿ ವಹಿಸಿದಾಗ(ಕೇರ್ ಕಂಪ್ಯಾನಿಯನ್) ಮಾತ್ರ, ರೋಗಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದರೊಂದಿಗೆ ಸದೃಢ ರನ್ನಾಗಿ ಮಾಡುತ್ತದೆ ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಪದ್ಮಶ್ರೀ ಡಾ.ಸಿ.ಎನ್. ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ನೂರಾಹೆಲ್ತ್ ಸ್ವಯಂಸೇವಾ ಸಂಸ್ಥೆಯ ಸಹಯೋಗದಲ್ಲಿ ೩ ದಿನಗಳ ಕಾಲ ನಡೆದ ಶುಶ್ರೂಷÀಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರೋಗಿಗಳಿಗೆ ಖಾಯಿಲೆಗಳು ಮಾತ್ರ ಇರುವುದಿಲ್ಲ. ಅವರಿಗೆ ಭಾವನೆಗಳು ಇರುತ್ತವೆ. ಎಷ್ಟೋ ರೋಗಿಗಳಿಗೆ ವೈದ್ಯರ ಬಳಿ ಮನಬಿಚ್ಚಿ ಮಾತನಾಡಲು ಆಗುವುದಿಲ್ಲ. ರೋಗಿಗಳಿಗೆ ಕೇವಲ ಶಸ್ತçಚಿಕಿತ್ಸೆ, ಆಂಜಿಯೋಗ್ರಾA, ಆಂಜಿಯೋಪ್ಲಾಸ್ಟ್ ಮಾಡಿದರೆ ಅವರ ಆರೋಗ್ಯ ಪರಿಪೂರ್ಣವಾಗುವುದಿಲ್ಲ. ಹಲವು ರೋಗಿ ಗಳಿಗೆ ಅವರಿಗಿರುವ ಆರೋಗ್ಯ ಸಮಸ್ಯೆಯ ಬಗ್ಗೆ ಹೇಳಲು ಸಾಧ್ಯವಾಗುವುದಿಲ್ಲ. ಇದರಿಂದ ಉತ್ತರ ಸಿಗದಂತಹ ಪ್ರಶ್ನೆಗಳು ರೋಗಿಗಳಲ್ಲಿ ರುತ್ತವೆ. ಇಂತಹ ಸಂದರ್ಭದಲ್ಲಿ ರೋಗಿಗಳಿಗೆ ಧೈರ್ಯ ತುಂಬುವ ಕೆಲಸವನ್ನು ಶುಶ್ರೂಷÀಕಿ ಯರು ಮಾಡಬೇಕಾಗಿರುತ್ತದೆ ಎಂದರು.

ಜಯದೇವ ಆಸ್ಪತ್ರೆಯಲ್ಲಿ ರೋಗಿಗಳಿಗೆ ಇನ್ನಷ್ಟು ಕೇರ್ ಮಾಡುವುದಕ್ಕೆ ಸಂಬA ಧಿಸಿದಂತೆ ಶುಶ್ರೂಷಕಿಯರಿಗೆ ತರಬೇತಿ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ಮೈಸೂರು ಮತ್ತು ಗುಲ್ಬರ್ಗದ ೨೦ ಶುಶ್ರೂಷಕರಿಗೆ ತರಬೇತಿ ನೀಡಲಾಗಿದೆ. ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರವೂ ಕೋ-ಆರ್ಡಿನೇಟರ್‌ಗಳು ಫೋನ್ ಮೂಲಕ ಫೀಡ್‌ಬ್ಯಾಕ್ ತೆಗೆದು ಕೊಂಡು ರೋಗಿಗಳ ಸಂಪರ್ಕದಲ್ಲಿರಬೇಕು. ಅಗತ್ಯ ಸಲಹೆ ಸೂಚನೆ ನೀಡಬೇಕು. ಇದರಿಂದ ಸಾವಿನ ಪ್ರಮಾಣವು ಕಡಿಮೆಯಾಗುತ್ತದೆ. ಆಸ್ಪತ್ರೆಯ ಬಗ್ಗೆಯೂ ಒಳ್ಳೆಯ ಅಭಿಪ್ರಾಯ ಮೂಡುತ್ತದೆ ಎಂದು ಸಲಹೆ ನೀಡಿದರು.
ರೋಗಿಗಳ ಒಡನಾಡಿ, ಕುಟುಂಬದ ಸದಸ್ಯರಿಗೆ ರೋಗಿಗಳ ಸ್ಥಿತಿಗತಿ ಹಾಗೂ ನೋಡಿಕೊಳ್ಳುವ ಕುರಿತಂತೆ ಮಾಹಿತಿ ನೀಡಬೇಕು. ಆಸ್ಪತ್ರೆಯಲ್ಲಿ ಶುಶ್ರೂಷಕಿಯರಿಂದ ಆತ್ಮಸ್ಥೆöÊರ್ಯದ ಮಾತು ಗಳಾಡಿದರೆ ರೋಗಿಗಳಲ್ಲಿರುವ ಆತಂಕ, ಹೆದರಿಕೆ ನಿವಾರಣೆಯಾಗಲಿದೆ. ಆಸ್ಪತ್ರೆಯಲ್ಲಿ ರಿಜಿಸ್ಟರ್ ಆಗಿರುವ ರೋಗಿಗಳ ವ್ಯಾಟ್ಸ್ಪ್ ಗ್ರೂಫ್‌ಗೆ ೦೮೦-೪೫೬೯೧೨೭೪ಗೆ ಮಿಸ್ಡ್ಕಾಲ್ ಕೊಟ್ಟರೆ ಸಂಪೂರ್ಣ ಮಾಹಿತಿ ಸಿಗುತ್ತದೆ ಎಂದರು.
ಇದೆ ಸಂದರ್ಭದಲ್ಲಿ ಡಾ.ಸಿ.ಎನ್. ಮಂಜುನಾಥ್ ಅವರನ್ನು ಅಭಿನಂದಿಸ ಲಾಯಿತು ಹಾಗೂ ತರಬೇತಿಯಲ್ಲಿ ಭಾಗ ವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡ ಲಾಯಿತು. ಕಾರ್ಯಕ್ರಮದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ಸದಾನಂದ, ಕೇರ್ ಕಂಪ್ಯಾನಿಯನ್ ನಿರ್ದೇಶಕ ಡಾ. ಸೀಮಾಮೂರ್ತಿ, ಹೆಚ್.ಜಿ. ಆನಂದ್, ಡಾ.ಶಂಕರಶಿರಾ, ಡಾ. ವೀರೇಶ್ ಪಾಟೀಲ್, ಡಾ.ದೇವರಾಜ್, ಡಾ.ಮಂಜುನಾಥ್, ನರ್ಸಿಂಗ್ ಅಧೀಕ್ಷಕ ಹರೀಶ್‌ಕುಮಾರ್, ಪಿಆರ್‌ಒ ವಾಣ ಮೋಹನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »