ಮೇಗಳಪುರದಲ್ಲಿ `ಶ್ರೀ ಅಪ್ರಮೇಯ ರೆಸಾರ್ಟ್’ ಉದ್ಘಾಟನೆ
ಮೈಸೂರು

ಮೇಗಳಪುರದಲ್ಲಿ `ಶ್ರೀ ಅಪ್ರಮೇಯ ರೆಸಾರ್ಟ್’ ಉದ್ಘಾಟನೆ

March 28, 2022

ಮೈಸೂರು, ಮಾ.೨೭-ಮೈಸೂರು ತಾಲೂಕು, ವರುಣಾ ಹೋಬಳಿ, ಕೀಳನಪುರ ಗ್ರಾಪಂ ವ್ಯಾಪ್ತಿಯ ಮೇಗಳಪುರದಲ್ಲಿ ನೂತನವಾಗಿ ನಿರ್ಮಿಸಿರುವ `ಶ್ರೀ ಅಪ್ರಮೇಯ ರೆಸಾರ್ಟ್’ ಅನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಿದರು.

ಭಾನುವಾರ ಬೆಳಗ್ಗೆ ರೆಸಾರ್ಟ್ ಮುಖ್ಯ ದ್ವಾರದ ಟೇಪು ಕತ್ತರಿಸುವ ಮೂಲಕ ಒಳಗೆ ಪ್ರವೇಶಿಸಿದ ಸಿದ್ದರಾಮಯ್ಯನವರು ದೀಪ ಬೆಳಗಿ, ದೇವರ ಫೋಟೋಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.
ಇದೇ ವೇಳೆ ಜೆ.ಪಿ.ಪ್ಯಾಲೇಸ್ ಹೋಟೆಲ್ ಮಾಲೀಕರಾದ ಸಂಜಯ್ ರಾಜ್ ಮತ್ತು ಅವರ ಪತ್ನಿ ದೇವಿಕಾ ಸಂಜಯ್ ರಾಜ್ ಅವರುಗಳು ರೆಸ್ಟೋರೆಂಟ್ ಉದ್ಘಾಟಿಸಿ, ಶುಭ ಕೋರಿದರು. ಮೇಗಳಾಪುರ ಗ್ರಾಮದ ಮುಖಂಡರು, ಕೀಳನಪುರ ಗ್ರಾಪಂ ಸದಸ್ಯರುಗಳು ಸೇರಿದಂತೆ ಗ್ರಾಮಸ್ಥರು ಈ ವೇಳೆ ಪಾಲ್ಗೊಂಡಿದ್ದರು.

ಉದ್ಯಮಿಗಳಾದ ಎಂ.ಕೆ. ಪೋತರಾಜ್, ಗುರು, ಯುವ ಕಾಂಗ್ರೆಸ್ ಮುಖಂಡ ಸುನಿಲ್ ಬೋಸ್, ಕೀಳನಪುರ ಗ್ರಾಪಂ ಅಧ್ಯಕ್ಷೆ ಸಕ್ಕುಬಾಯಿ, ಉಪಾಧ್ಯಕ್ಷ ಮಹೇಶ್, ಕೀಳನಪುರ ಮುಖಂಡರಾದ ಮಹದೇವಪ್ಪ, ಬಸವರಾಜು, ದುದ್ದಗೆರೆ ಬೀರೇಗೌಡರು, ಲಿಕ್ಕರ್ ಸಂಘದ ಅಧ್ಯಕ್ಷರಾದ ಗುರುಸ್ವಾಮಿ ಅವರುಗಳು ಭಾಗವಹಿಸಿದ್ದರು. ರೆಸಾರ್ಟ್ ಮಾಲೀಕರಾದ ಗೋವಿಂದರಾಜು, ಅವರ ಪತ್ನಿ ಕಾಂತಮಣ , ಪುತ್ರಿ ಪುನೀತಾಶ್ರೀ, ಪುತ್ರರಾದ ಮಹೇಶ್, ಮಧು ಸೇರಿದಂತೆ ಕುಟುಂಬಸ್ಥರು ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

Translate »