ಕನ್ನಡ ಪುಸ್ತಕ ಆಯ್ಕೆ ಸಮಿತಿ ಸದಸ್ಯರೂ ಆದ ಸಂವಹನ ಪ್ರಕಾಶನದ ಡಿ.ಎನ್.ಲೋಕಪ್ಪನವರಿಗೆ ಅಭಿನಂದನೆ
ಮೈಸೂರು

ಕನ್ನಡ ಪುಸ್ತಕ ಆಯ್ಕೆ ಸಮಿತಿ ಸದಸ್ಯರೂ ಆದ ಸಂವಹನ ಪ್ರಕಾಶನದ ಡಿ.ಎನ್.ಲೋಕಪ್ಪನವರಿಗೆ ಅಭಿನಂದನೆ

September 9, 2020

ಮೈಸೂರು, ಸೆ. 8 – ಪೂರ್ಣಚಂದ್ರ ತೇಜಸ್ವಿಯವರ ಜನ್ಮ ದಿನಾಚರಣೆಯ ಪ್ರಯುಕ್ತ ಕನ್ನಡ ಪುಸ್ತಕ ಆಯ್ಕೆ ಸಮಿತಿಯ ಸದಸ್ಯರಾಗಿ ನೇಮಕವಾಗಿರುವ ಸಂವಹನ ಪ್ರಕಾಶನದ ಡಿ.ಎನ್.ಲೋಕಪ್ಪನವರನ್ನು ಅನಿಕೇತನ ಸೇವಾ ಟ್ರಸ್ಟ್ ವತಿಯಿಂದ ಅಭಿನಂದಿಸಲಾಯಿತು.

ಸಂವಹನ ಪ್ರಕಾಶನದ ಮೂಲಕ ಹಿರಿ ಯರ ಹಾಗೂ ಕಿರಿಯ ಸಾಹಿತಿಗಳ ಸಾವಿ ರಕ್ಕೂ ಮಿಗಿಲಾದ ಪುಸ್ತಕಗಳನ್ನು ಲೋಕಾ ರ್ಪಣೆ ಮಾಡಿದ ಕೀರ್ತಿ ಲೋಕಪ್ಪನವ ರದು. ಪಾರಂಪರಿಕ ನಗರಿಯಾದ ಮೈಸೂ ರಿಗೆ ಪುಸ್ತಕ ಪ್ರಕಾಶನದ ಮೂಲಕ ಅವರು ಒಂದು ಘನತೆಯನ್ನು ತಂದುಕೊಟ್ಟಿದ್ದಾರೆ. ಇವರ ಪ್ರಕಾಶನದ ಪುಸ್ತಕಗಳಿಗೆ ಅನೇಕ ರಾಜ್ಯಮಟ್ಟದ ಪುರಸ್ಕಾರಗಳು ಸಂದಿವೆ. ಇವರ ಪ್ರಕಾಶನದಲ್ಲಿ ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ, ಚನ್ನವೀರ ಕಣವಿ, ಡಾ.ಎಂ.ಚಿದಾನಂದಮೂರ್ತಿ, ಎಂ.ಎಂ. ಕಲಬುರ್ಗಿ, ಜಿ.ಎಸ್.ಸಿದ್ದಲಿಂಗಯ್ಯ, ಕೆ.ಸಿ. ಶಿವಪ್ಪ, ಡಾ.ಬಿ.ವಿ.ವೆಂಕಟಾಚಲ ಶಾಸ್ತ್ರಿ ಇನ್ನೂ ಮುಂತಾದ ಹಿರಿಯ ಸಾಹಿತಿಗಳ ಕೃತಿಗಳು ಪ್ರಕಟಗೊಂಡಿವೆ.

ಕನ್ನಡ ನಾಡಿನ ಸಾಹಿತ್ಯ ಮತ್ತು ಪ್ರಕಾ ಶನ ಕ್ಷೇತ್ರದಲ್ಲಿ ಅವಿರತ ಸೇವೆ ಸಲ್ಲಿಸುತ್ತಿ ರುವ ಲೋಕಪ್ಪನವರನ್ನು ಕನ್ನಡ ನಾಡಿನ ವಿಶಿಷ್ಟ ಸಾಹಿತಿ ಹಾಗೂ ಪರಿಸರ ಮತ್ತು ವನ್ಯಜೀವಿ ಪ್ರೇಮಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟುಹಬ್ಬದ ಸಂದರ್ಭ ದಲ್ಲಿ ಅನಿಕೇತನ ಸೇವಾ ಟ್ರಸ್ಟ್ ವತಿ ಯಿಂದ ಸನ್ಮಾನಿಸುತ್ತಿರುವುದಕ್ಕೂ ಅತೀವ ಸಂತಸವಾಗಿದೆ ಎಂದು ಟ್ರಸ್ಟ್‍ನ ಅಧ್ಯಕ್ಷರೂ ಆದ ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್ ಅಭಿಪ್ರಾಯಪಟ್ಟಿದ್ದಾರೆ.

ಸಾಹಿತಿ ಪೆÇ್ರ. ಮಲೆಯೂರು ಗುರುಸ್ವಾಮಿ, ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್, ವೀರ ವನಿತೆ ರಾಣಿ ಚೆನ್ನಮ್ಮ ಸ್ವಯಂ ಸೇವಾ ಸಂಘದ ಉಪಾಧ್ಯಕ್ಷ ಎ.ಪಿ.ವಿರೂಪಾಕ್ಷ, ಕಲಾವಿದ ರಂಗು ಸಂದೇಶ ಹಾಜರಿದ್ದರು.

Translate »