ಬೆಂಗಳೂರು, ಸೆ. 8 (ಕೆಎಂಶಿ)-ಇದೇ ತಿಂಗಳ 21ರಿಂದ ಆರಂಭವಾಗಲಿರುವ ವಿಧಾನಸಭೆಯ ಅಧಿವೇಶನದ ಹಿನ್ನೆಲೆ ಯಲ್ಲಿ ಮುಖ್ಯಮಂತ್ರಿ ಸೇರಿದಂತೆ ಸಂಪು ಟದ ಸಹೋದ್ಯೋಗಿಗಳು, ಶಾಸಕರು, ಅಧಿ ಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿ ಗಳಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿ, ನೆಗೆಟಿವ್ ಇರುವ ಪ್ರಮಾಣ ಪತ್ರ ವನ್ನು ಮಹಾದ್ವಾರದಲ್ಲಿ ಕಡ್ಡಾಯವಾಗಿ ಮೊದಲನೇ ದಿನ ಪ್ರದರ್ಶಿಸಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ದೇಶಾದ್ಯಂತ ಕೋವಿಡ್ ಸಾಂಕ್ರಾಮಿಕ ನಿಯಂತ್ರಣಕ್ಕೆ ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಿ, ಸದನದ ಕಲಾಪ ವನ್ನು ಸುಗಮವಾಗಿ ನಡೆಸಲು ಸಚಿವಾ ಲಯ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಅವರು ತಿಳಿಸಿದರು.
ಎಲ್ಲ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸರ್ಕಾರಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳಿಂದ ಕೋವಿಡ್ ಪರೀಕ್ಷೆ ಮಾಡಿಸಿ, ಕಡ್ಡಾಯ ವಾಗಿ ಪ್ರಮಾಣ ಪತ್ರವನ್ನು ಅಧಿವೇಶನ ಸಂದರ್ಭದಲ್ಲಿ ಪ್ರದರ್ಶಿಸಬೇಕು.
ಸುಮಾರು ಶಾಸಕರು ಕೋವಿಡ್‍ನಿಂದ ಚಿಕಿತ್ಸೆ ಪಡೆಯುತ್ತಿರುವ ಅಂಶ ಬಹಿ ರಂಗವಾಗಿದೆ. ಹಲವಾರು ಮಂದಿ ಗುಣ ಮುಖರಾಗಿದ್ದಾರೆ. ಸಚಿವರಾದವರೂ ಚಿಕಿತ್ಸೆ ಪಡೆದು, ಮನೆಯಲ್ಲಿ ವಿಶ್ರಾಂತಿ ಪಡೆ ಯುತ್ತಿದ್ದಾರೆ. ಕೆಲವರು ಸಚಿವಾಲಯದ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಕೋವಿಡ್ ಪರೀಕ್ಷೆಯನ್ನು ಮುಖ್ಯಮಂತ್ರಿ ಆದಿಯಾಗಿ ಎಲ್ಲರೂ ಕಡ್ಡಾಯವಾಗಿ ತಪಾಸಣೆ ಮಾಡಿ ಪ್ರಮಾಣ ಪತ್ರವನ್ನು ಪ್ರದರ್ಶಿಸಬೇಕು. ಇದರಿಂದ ಎಲ್ಲರ ಆರೋಗ್ಯ ಕಾಪಾಡಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಒಂದು ವೇಳೆ ಕೋವಿಡ್ ಪರೀಕ್ಷೆ ಮಾಡಿ ಸದ ಶಾಸಕರು, ಸಚಿವರು, ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳಿಗಾಗಿ ಇದೇ 18ರಿಂದ ವಿಧಾನಸೌಧದಲ್ಲಿ ಪರೀಕ್ಷೆ ಮಾಡಿಸಿ, ವರದಿಯನ್ನು ತ್ವರಿತವಾಗಿ ಪಡೆ ಯಲಾಗುವುದು. ಸದನಕ್ಕೆ ಹಾಜರಾಗುವ ಶಾಸಕರು, ಅಧಿಕಾರಿಗಳು ತಮ್ಮ ಜೊತೆ ಬರುವ ಸಿಬ್ಬಂದಿಯ ಆರೋಗ್ಯ ತಪಾಸಣೆ ಕಡ್ಡಾಯವಾಗಿ ಮಾಡಿಸಬೇಕು. ವಿಧಾನ ಸಭೆಯಲ್ಲಿ ಅಂತರ ಕಾಪಾಡಲು ಹಾಗೂ ಇತರ ಎಲ್ಲಾ ನಿಯಮಾವಳಿಗಳನ್ನು ಪಾಲಿ ಸುವ ದೃಷ್ಟಿಯಿಂದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಕಲಾಪ ನಡೆಸುವ 72 ಗಂಟೆಯ ಮೊದಲು ಎಲ್ಲಾ ಚುನಾಯಿತ ಪ್ರತಿನಿಧಿಗಳ ಕೋವಿಡ್ ತಪಾಸಣೆ ಪೂರ್ಣಗೊಳಿ ಸುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಿಗೆ ಸೂಚನೆ ನೀಡಲಾಗಿದೆ. ಕಲಾಪದ ವರದಿ ಮಾಡಲು ವರದಿಗಾರ ರಿಗೂ ಇದು ಅನ್ವಯವಾಗುತ್ತದೆ. ಈ ಬಾರಿ ಎಲ್ಲಾ ಪತ್ರಕರ್ತರಿಗೆ ಎರಡನೇ ಮಹಡಿ ಯಲ್ಲಿರುವ ಗ್ಯಾಲರಿಯಲ್ಲಿ ಅವಕಾಶ ಕಲ್ಪಿಸ ಲಾಗುತ್ತದೆ. ಕಲಾಪದಲ್ಲಿ ಪಾಲ್ಗೊಳ್ಳುವ ಎಲ್ಲರ ಆರೋಗ್ಯದ ಬಗ್ಗೆ ದಿನಂಪ್ರತಿ ತಪಾ ಸಣೆ ಮಾಡಲಾಗುತ್ತದೆ. ತುರ್ತು ಆರೋಗ್ಯ ತಪಾಸಣೆಗೆ ವಿಶೇಷ ವ್ಯವಸ್ಥೆಯನ್ನೂ ಸಹ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಯಾವುದೇ ಸಭೆ, ನಿಯೋಗಗಳನ್ನು ವಿಧಾನಸೌಧದ ಮೊದಲನೇ ಮಹಡಿಯ ವ್ಯಾಪ್ತಿಯಲ್ಲಿ ನಡೆಸದಂತೆ ಸಚಿವರುಗಳಿಗೆ ಸೂಚನೆ ನೀಡಲಾಗಿದೆ ಎಂದರು.
ವಿವಿಧ ವೇದಿಕೆಗಳ ಭೇಟಿಯನ್ನು ಶಾಸ ಕರ ಭವನದಲ್ಲಿ ಮಾಡುವಂತೆ ಸಚಿವರು ಗಳಿಗೆ, ಶಾಸಕರುಗಳಿಗೆ ಸೂಚಿಸಲಾಗಿದೆ. ವಿಧಾನಸೌಧದ ಒಳಗೆ, ಹೊರಗಿನಿಂದ ಯಾವುದೇ ವ್ಯಕ್ತಿಗಳ ಪ್ರವೇಶ ಇರುವು ದಿಲ್ಲ. ಸಚಿವಾಲಯದ ಸಿಬ್ಬಂದಿಗೂ ಆರೋಗ್ಯ ತಪಾಸಣೆ ಮಾಡಲಾಗುವುದು. ಕಲಾಪದಲ್ಲಿ ಪಾಲ್ಗೊಳ್ಳುವ ಎಲ್ಲಾ ಅಧಿಕಾರಿ ಗಳು ಹಾಗೂ ಸಿಬ್ಬಂದಿಗಳ ದಿನಂಪ್ರತಿ ಆರೋಗ್ಯ ತಪಾಸಣಾ ವರದಿ ಸಭಾಧ್ಯಕ್ಷರ ಮೇಲ್ವಿಚಾರಣೆಯಲ್ಲಿ ನಡೆಯಲಿದೆ. ಎಲ್ಲರ ಆರೋಗ್ಯ ದೃಷ್ಟಿಯಿಂದ ನಿಯಮಾವಳಿ ಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗು ತ್ತಿದ್ದು, ಮುಖ್ಯಮಂತ್ರಿ ಆದಿಯಾಗಿ ಎಲ್ಲ ರಿಗೂ ಇದು ಅನ್ವಯವಾಗುತ್ತದೆ ಎಂದು ಅವರು ಪುನರುಚ್ಛರಿಸಿದರು.