ಜುಲೈ 5ರಂದು ಮೈತ್ರಿ ಬಜೆಟ್
ಮೈಸೂರು

ಜುಲೈ 5ರಂದು ಮೈತ್ರಿ ಬಜೆಟ್

June 23, 2018

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಜೆಟ್ ಅಧಿವೇಶನ ಜುಲೈ 2ರಿಂದ 12ರವರೆಗೆ ನಡೆಯಲಿದೆ. ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಇದೇ ಮೊದಲ ಬಾರಿಗೆ ಜುಲೈ 5ರಂದು ಬಜೆಟ್ ಮಂಡಿಸಲಿದ್ದಾರೆ.

ವಿಧಾನಸೌಧದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯ ನಂತರ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ ಈ ವಿಷಯ ತಿಳಿಸಿದರು. ಜುಲೈ 2 ರಂದು ರಾಜ್ಯಪಾಲರು ಜಂಟಿ ಸದನವನ್ನು ದ್ದೇಶಿಸಿ ಭಾಷಣ ಮಾಡಲಿದ್ದಾರೆ. ಜುಲೈ 5ರಂದು ಮುಖ್ಯಮಂತ್ರಿಗಳು ಬಜೆಟ್ ಮಂಡಿಸಲಿದ್ದಾರೆ ಎಂದು ಅವರು ಹೇಳಿ ದರು. ಸಂಪುಟ ಸಭೆಯಲ್ಲಿ ರೈತರ ಸಾಲ ಮನ್ನಾ ಬಗ್ಗೆ ಪ್ರಸ್ತಾಪವಾಗಿಲ್ಲ ಎಂದ ಸಚಿವರು, ಹಾಲಿ ವರ್ಗಾವಣೆ ಮಾರ್ಗ ಸೂಚಿ ಅನ್ವಯ ಶೇ.4ರಷ್ಟು ಸರ್ಕಾರಿ ನೌಕರರನ್ನು ಜುಲೈ 31ರವರೆಗೆ ವರ್ಗಾ ವಣೆ ಮಾಡಲು ಸಭೆ ನಿರ್ಧರಿಸಿದೆ ಎಂದು ಅವರು ಹೇಳಿದರು.

Translate »