ಆ.1ರಿಂದ ಮಂಡ್ಯಜಿಲ್ಲೆಯಲ್ಲಿಕಾಂಗ್ರೆಸ್ ಪಾದಯಾತ್ರೆ
ಮಂಡ್ಯ

ಆ.1ರಿಂದ ಮಂಡ್ಯಜಿಲ್ಲೆಯಲ್ಲಿಕಾಂಗ್ರೆಸ್ ಪಾದಯಾತ್ರೆ

June 27, 2022

ಮಂಡ್ಯ, ಜೂ.26(ಮೋಹನ್‍ರಾಜ್)- ಸ್ವಾತಂತ್ರ್ಯೋತ್ಸವÀದಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಆ.1ರಿಂದ ಜಿಲ್ಲೆಯಲ್ಲಿಕಾಂಗ್ರೆಸ್ ವತಿಯಿಂದ ಪಾದಯಾತ್ರೆ ನಡೆಸಲಾಗುವುದುಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವಎನ್.ಚಲುವರಾಯಸ್ವಾಮಿ ತಿಳಿಸಿದರು.

ನಗರದ ಖಾಸಗಿ ಹಾಲ್‍ನಲ್ಲಿಏರ್ಪಡಿ ಸಿದ್ದ ಕಾಂಗ್ರೆಸ್ ನವ ಸಂಕಲ್ಪಚಿಂತನಾ ಶಿಬಿರದಲ್ಲಿ ಮಾತನಾಡಿದಅವರು, 10 ದಿನಗಳ ಕಾಲ ನಡೆಯುವ 75 ಕಿಮೀ ಪಾದಯಾತ್ರೆಯಲ್ಲಿಜಿಲ್ಲೆಯಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ತೆರಳಿ ಜನರ ಸಮಸ್ಯೆಗಳನ್ನು ಕ್ರೋಢೀಕರಿಸಲಾಗುವುದು. ಆ.15 ರಂದು ಬೆಂಗಳೂರಿನಲ್ಲಿ ನಡೆಯುವ ಬೃಹತ್ ಸಮಾವೇಶಕ್ಕೆ ಪ್ರತಿ ವಿಧಾನಸಭಾಕ್ಷೇತ್ರದಿಂದ 500 ಮಂದಿಯನ್ನುಕರೆದೊಯ್ಯಲಾಗುವುದುಎಂದರು.

ಪಾದಯಾತ್ರೆರೂಪು ರೇಷೆಗಳು ತಯಾರಾಗುತ್ತಿದ್ದು, ಎಲ್ಲಿಂದಆರಂಭಿಸಬೇಕು. ಎಲ್ಲೆಲ್ಲಿ ವಾಸ್ತವ್ಯ ಹೂಡುವುದು. ಪಾದಯಾತ್ರೆಗೆ ಬರುವವರಿಗೆ ವ್ಯವಸ್ಥೆಗಳ ಕುರಿತಂತೆ ಮುಂದಿನ ದಿನಗಳಲ್ಲಿ ವ್ಯವಸ್ಥಿತವಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯೊಳಗೆ ಬಿಜೆಪಿಗಿಂತ ಹೆಚ್ಚಾಗಿ ಜಾತ್ಯತೀತ ಜನತಾದಳಕ್ಕೆ ಸೆಡ್ಡು ಹೊಡೆಯು ವಂತೆ ಕೆಲಸ ಮಾಡಬೇಕಿದೆ. 2018ರಲ್ಲಿ ನಾವು ಏಳೂ ಕ್ಷೇತ್ರಗಳಲ್ಲೂ ಸಂಪೂರ್ಣ ವಾಗಿ ಸೋಲು ಅನುಭವಿಸಿದ್ದೆವು. ರಾಜ್ಯದಲ್ಲಿ ಮಂಡ್ಯದೊಳಗೆ ಕಾಂಗ್ರೆಸ್‍ಇದೆಯಾ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಗಳಲ್ಲಿ ಜಿಲ್ಲೆಯಜನರು ನಮ್ಮ ಮೇಲೆ ವಿಶ್ವಾಸವಿಟ್ಟು ಅವಕಾಶ ಕೊಟ್ಟಿz್ದÁರೆ. ಇದರಿಂದ ಕೆಪಿಸಿಸಿ ಯಲ್ಲಿ ನಮಗೆ ಸ್ವಲ್ಪಗೌರವ ಸಿಕ್ಕಿದೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷಆರ್.ಧ್ರುವ ನಾರಾಯಣ್ ಮಾತನಾಡಿ, ಬಿಜೆಪಿ-ಜೆಡಿಎಸ್‍ಒಂದು ನಾಣ್ಯದಎರಡು ಮುಖ ವಿದ್ದಂತೆ. ಎರಡೂ ಪಕ್ಷಗಳು ಒಟ್ಟಾಗಿಚುನಾವಣೆಗೆ ಬರುತ್ತಾರೆ. ಅವರನ್ನುಎದುರಿಸುವ ಕೆಲಸ ನಮ್ಮದಾಗಬೇಕುಎಂದು ಸೂಚ್ಯವಾಗಿ ಹೇಳಿದರು.

2023ರ ಚುನಾವಣೆಗೆಲ್ಲುವ ಸಂಕಲ್ಪದೊಂದಿಗೆಕಾಂಗ್ರೆಸ್ ಮತ್ತಷ್ಟು ಸದೃಢವಾಗ ಬೇಕು. ಚಿಂತನಾ ಸಭೆಯ ಪ್ರಾಮುಖ್ಯತೆಅರಿತುಉತ್ಸಾಹ, ಬದ್ಧತೆಯಿಂದ ಪಕ್ಷ ಸಂಘಟನೆಯಲ್ಲಿಕಾರ್ಯೋನ್ಮುಖರಾಗ ಬೇಕು. ಚುನಾವಣೆ ಹತ್ತಿರ ಬರುತ್ತಿದ್ದು, ಸ್ಥಾನಮಾನಗಳಿಗೆ ಹೋರಾಡದೆ ಪಕ್ಷದ ಬಲವರ್ಧನೆಗೆ ಶ್ರಮಿಸುವಂತೆ ತಿಳಿಸಿದರು.

ಒಗ್ಗಟ್ಟಾಗಿದ್ದರೆಚುನಾವಣೆಯಲ್ಲಿ ಗೆಲುವು ಅಸಾಧ್ಯವೇನಲ್ಲ. ಎರಡು ವಿಧಾನ ಪರಿಷತ್ ಚುನಾವಣೆಗಳು ಇದನ್ನು ಸಾಬೀ ತುಪಡಿಸಿವೆ. ಇದೇಒಗ್ಗಟ್ಟನ್ನು ಮುಂದಿನ ದಿನಗಳಲ್ಲೂ ಪ್ರದರ್ಶಿಸಿದರೆ ನಮಗೆ ಉತ್ತಮ ಪ್ರತಿಫಲ ಸಿಗುತ್ತದೆ. ರಾಜ್ಯದಲ್ಲಿ 72 ಲP್ಷÀಕಾಂಗ್ರೆಸ್ ಸದಸ್ಯತ್ವ ನೋಂದಣಿಯಾಗಿದೆ. ಇದು ಹಿಂದಿನ ಕಾಲ ಅಲ್ಲ. ಕಾಲಕ್ಕೆ ತಕ್ಕಂತೆ ಬದಲಾವಣೆಯಾಗಬೇಕು. ನಾವು ಕೂಡಚುನಾವಣಾತಂತ್ರವನ್ನು ಬದಲಾ ವಣೆ ಮಾಡಿಕೊಳ್ಳಬೇಕು ಎಂದರು.
ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿಕಾಂಗ್ರೆಸ್ ಸತ್ತಿಲ್ಲ. ಪಕ್ಷ ಸೋತಿದ್ದರೆಅದುಕಾಂಗ್ರೆಸ್‍ನಿಂದ ಮಾತ್ರಎಂದು ನಿಷ್ಠುರವಾಗಿ ನುಡಿದರು.ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರುಜಾರಿಗೆತಂದ ನರೇಗಾ, ಆರ್‍ಟಿಐ, ಆರ್‍ಟಿಇ ಸೇರಿದಂತೆ ಹಲವಾರುಜನ ಪ್ರಿಯ ಕಾರ್ಯಕ್ರಮಗಳನ್ನು ಜನಸಾಮಾ ನ್ಯರಿಗೆತಲುಪಿಸುವಲ್ಲಿ ನಾವು ವಿಫಲರಾಗಿz್ದÉೀವೆ. ಅವುಗಳನ್ನು ಜನರಿಗೆತಲುಪಿಸುವ ಕಾರ್ಯ ನಮ್ಮದಾಗಬೇಕು. ಬಿಜೆಪಿ ಸುಳ್ಳು ಹೇಳಿಕೊಂಡೇ ಜನರನ್ನು ಮರಳು ಮಾಡುತ್ತಿದೆ. ಬಿಜೆಪಿಯವರ ಸುಳ್ಳನ್ನು ಜನರೆದುರು ಬಿಚ್ಚಿಡುವ ಕೆಲಸವನ್ನು ನಾವು ಮಾಡಬೇಕು. ಆಗ ನಾವು ಶಕ್ತಿಶಾಲಿಯಾಗಿ ನಿಲ್ಲಬಹುದುಎಂದರು. ಕಾರ್ಯಕ್ರಮದಲ್ಲಿಜಿಲ್ಲಾ ಉಸ್ತು ವಾರಿ ಬಿ.ಸಿ.ಚಂದ್ರಶೇಖರ್, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಾಜಿ ಶಾಸಕ ರಾದರಮೇಶ್ ಬಂಡಿಸಿz್ದÉೀಗೌಡ, ಕೆ.ಬಿ.ಚಂದ್ರ ಶೇಖರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಶಿವಣ್ಣ, ಮುಖಂಡರಾದರವಿಕುಮಾರ್‍ಗಣಿಗ, ಡಾ.ಹೆಚ್.ಕೃಷ್ಣ, ಡಾ.ಎಚ್.ವಿ.ರವೀಂದ್ರ, ಜಿಲ್ಲಾಕಾಂಗ್ರೆಸ್‍ಅಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾಧ್ಯಕ್ಷೆ ಅಂಜನಾ ಸೇರಿದಂತೆಇತರರಿದ್ದರು.

Translate »