ಇಂದಿನಿಂದ SSLC ಪೂರಕ ಪರೀಕ್ಷೆ
News

ಇಂದಿನಿಂದ SSLC ಪೂರಕ ಪರೀಕ್ಷೆ

June 27, 2022

ಬೆಂಗಳೂರು: ನಾಳೆಯಿಂದ (ಸೋಮವಾರ) ಜುಲೈ 4ರವರೆಗೆ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ ನಡೆಯಲಿದೆ. ಪೂರಕ ಪರೀಕ್ಷೆಗೆ ಶಿಕ್ಷಣ ಇಲಾಖೆಯಿಂದಕೊರೊನಾ ನಿಯಂತ್ರಣ ಮಾರ್ಗಸೂಚಿಕ್ರಮ ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಬಾರಿ 94649 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿ ದ್ದಾರೆ. 423 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಎಸ್‍ಓಪಿಯಲ್ಲಿನ ಮಾರ್ಗಸೂಚಿಯನ್ನುಇಲಾಖೆಯಎಲ್ಲಾ ಹಂತದ ಅಧಿಕಾರಿಗಳು, ಸಂಬಂಧಿಸಿದ ಇತರೆಇಲಾಖೆಯ ಅಧಿಕಾರಿಗಳು, ಜಿಲ್ಲಾಧಿಕಾರಿ, ಸಿಇಓಗಳೊಂದಿಗೆ ಸಮನ್ವಯ ಸಾಧಿಸಿ, ಕಟ್ಟುನಿಟ್ಟಾಗಿ ಅನುಷ್ಠಾನ ಗೊಳಿಸುವಂತೆ ಆದೇಶ ಹೊರಡಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರವನ್ನು ಪರೀಕ್ಷೆಗೆ ಮುನ್ನಾ, ನಂತರ ಸ್ಯಾನಿಟೈಸ್ ಮಾಡುವುದು, ಪರೀಕ್ಷಾಕೊಠಡಿಯಎಲ್ಲಾ ಪೀಠೋಪಕರಣ ಸ್ಯಾನಿಟೈಸ್ ಮಾಡುವುದು, ದೈಹಿಕಅಂತರಕಾಪಾಡು ವುದು, ಪ್ರತಿಕೊಠಡಿಯಲ್ಲಿಗರಿಷ್ಠ 20 ವಿದ್ಯಾರ್ಥಿಗಳಿರಬೇಕು. ಒಂದುಡೆಸ್ಕ್‍ಗೆಇಬ್ಬರು ವಿದ್ಯಾರ್ಥಿಯಂತೆಆಸನದ ವ್ಯವಸ್ಥೆ ಮಾಡುವುದು. ಕೆಮ್ಮು, ನೆಗಡಿ, ಜ್ವರ ಮೊದಲಾದವು ಗಳಿಂದ ಬಳಲುತ್ತಿರೋ, ಲಕ್ಷಣಗಳಿರೋ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಕನಿಷ್ಠ 2 ಕೊಠಡಿಗಳನ್ನು ವಿಶೇಷ ಕೊಠಡಿಗಳೆಂದು ಕಾಯ್ದಿರಿಸುವುದು, ವಿದ್ಯಾರ್ಥಿಗಳು ಮಾಸ್ಕ್ ಧರಿಸಿ, ಪರೀಕ್ಷೆಗೆ ಹಾಜರಾಗುವಂತೆ ನೋಡಿಕೊಳ್ಳಬೇಕೆಂಬ ಸೂಚನೆ ನೀಡಲಾಗಿದೆ.

Translate »