ಶಿವಸೇನಾ ಬಂಡಾಯ ಶಾಸಕರಿಗೆಙ+ ಭದ್ರತೆ
News

ಶಿವಸೇನಾ ಬಂಡಾಯ ಶಾಸಕರಿಗೆಙ+ ಭದ್ರತೆ

June 27, 2022

ಮುಂಬೈ:ಕೇಂದ್ರ ಸರ್ಕಾರವು ಶಿವಸೇನಾದ 15 ಮಂದಿ ಬಂಡಾಯ ಶಾಸಕರಿಗೆ ‘ಙ+’ ಶ್ರೇಣಿಯ ಸಿಆರ್ ಪಿಎಫ್ ಭದ್ರತೆಒದಗಿ ಸಿದೆ ಎಂದು ಮೂಲ ಗಳು ತಿಳಿಸಿರುವುದಾಗಿ ಸುದ್ದಿಸಂಸ್ಥೆ ‘ಎನ್‍ಎನ್‍ಐ’ ಟ್ವೀಟ್ ಮಾಡಿದೆ.

ಮಹಾರಾಷ್ಟ್ರದಲ್ಲಿರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬಂಡಾಯ ಶಾಸಕರಿಗೆ ಸೂಕ್ತ ಭದ್ರತೆಕಲ್ಪಿಸುವಂತೆರಾಜಕೀಯ ಮುಖಂ ಡರುಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಇದಕ್ಕೆ ಇಂಬು ನೀಡುವಂತೆ ಸರ್ಕಾರ ಉಳಿಸಿಕೊಳ್ಳುವುದರ ಜತೆಗೆ ಬಂಡಾಯ ಶಾಸಕರು ಬಿಸಿ ಮುಟ್ಟಿಸಲು ಮುಂದಾಗಿದ್ದ ಸಿಎಂ ಉದ್ಧವ್‍ಠಾಕ್ರೆ ಶಾಸಕರಿಗೆ ಹಾಗೂ ಅವರಕುಟುಂಬದವರಿಗೆ ನೀಡಿದ್ದ ಭದ್ರತೆಯನ್ನು ಹಿಂದಕ್ಕೆತೆಗೆದುಕೊಂಡಿದ್ದರು. ಹೀಗಾಗಿ ರೆಬೆಲ್ ಶಾಸಕರ ಭದ್ರತೆಆತಂಕಕ್ಕೀಡಾಗಿತ್ತು. ಠಾಕ್ರೆಅವರ ಈ ಕ್ರಮರಾಜಕೀಯ ವಲಯದಲ್ಲಿ ಭಾರಿಚರ್ಚೆಗೆಗ್ರಾಸವಾಗಿತ್ತು. ಇದಕ್ಕೆತಿರುಗೇಟು ನೀಡಿರುವಕೇಂದ್ರ ಸರ್ಕಾರ ಇದೀಗ ಶಿವಸೇನಾದ 15 ಮಂದಿ ಬಂಡಾಯ ಶಾಸಕರಿಗೆ ‘ಙ+’ ಶ್ರೇಣಿಯ ಸಿಆರ್‍ಪಿಎಫ್ ಭದ್ರತೆ ಒದಗಿಸಿದೆ. ಮಹಾರಾಷ್ಟ್ರದ ಮಹಾ ವಿಕಾಸ್‍ಆಘಾಡಿ (ಎಂವಿಎ) ಸರ್ಕಾರದ ವಿರುದ್ಧ ಬಂಡಾಯ ಸಾರಿರುವಏಕನಾಥ ಶಿಂಧೆ ನೇತೃತ್ವದ 40ಕ್ಕೂ ಹೆಚ್ಚು ಶಾಸಕರತಂಡಗುವಾಹಟಿಯರ್ಯಾಡಿಸನ್ ಬ್ಲೂ ಹೋಟೆಲ್‍ನಲ್ಲಿ ಬೀಡುಬಿಟ್ಟಿದೆ.

Translate »